ಬಣ್ಣ ಬಣ್ಣದ ಪಟಾಕಿಗಳ ಸದ್ದು...
ಒಂದೆಡೆ ವಾಯು ಮಾಲಿನ್ಯ ಇನ್ನೊಂದೆಡೆ ಶಬ್ದ ಮಾಲಿನ್ಯ ಆಗುತ್ತಿದ್ದರೂ ದೀಪಾವಳಿ ಪಟಾಕಿ ಸುಡುವುದರಲ್ಲಿರುವ ಮಜಾನೇ ಬೇರೆ. ಪಟಾಕಿ ಸುಡುವಾಗ ಏನೋ ಒಂಥರಾ ಮಜಾ... ಮನಸ್ಸಿಗೆ ಉಲ್ಲಾಸ ಸಂಭ್ರಮ. ಏನನ್ನೋ ಗೆದ್ದುಕೊಂಡ ಸಂಭ್ರಮ.
ಪತ್ರಿಕೆಗಳಿಗೆ ವಿಶೇಷ ಸಂಚಿಕೆ ಜೊತೆಗೆ ವಾರ್ಷಿಕ magazine (ದೀಪಾವಳಿ ವಿಶೇಷಾಂಕ) ಹೊರ ತರುವ ಸಂಭ್ರಮ... ಜಾಹೀರಾತುದಾರರಿಗಂತೂ ಸುಗ್ಗಿಯೋ ಸುಗ್ಗಿ... ಟಿವಿ ಮತ್ತು ರೇಡಿಯೋದಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳ ಪ್ರಸಾರ
ಎಲ್ಲೆಲ್ಲಿ ನೋಡಿದರೂ ಸಂಭ್ರಮ... ರಾತ್ರಿ ಹೊತ್ತು ಆಕಾಶದೆಡೆಗೆ ಕಣ್ಣು ಹಾಯಿಸಿದರೆ ವ್ಹಾ... ರಸದೌತಣ... ವಿನೂತನ ಜಗತ್ತಿಗೆ ಪಯಣಿಸಿದ ಅನುಭವ... ಪ್ರತೀ ದಿನ ದೀಪಾವಳಿ ಹಾಗಿರಬಾರದೇ ಎನ್ನೊ ಹಂಬಲ.
October 28, 2008
August 14, 2008
ನಾವು ಸ್ವತಂತ್ರರು ಅಂತಾರೆ ಎಲ್ಲಾ..
ಸ್ವಾತಂತ್ರ್ಯ ದಿನಾಚರಣೆಯಂದು ಮನೆಯಿಂದ ಹೊರಬರಲು ನಮಗೆ ಬಾಂಬ್ ಸ್ಪೋಟವಾದಿತೆಂಬ ಭಯ. ಆದ್ರೂ ನಾವು ಸ್ವತಂತ್ರರು :)
ತಿಂಗಳ ಹಿಂದೆ ಅದೆಷ್ಟು ಮಂದಿ ಈ ಬಾರಿ ಸ್ವಾತಂತ್ರ್ಯ ದಿನದಂದು ಊರಿಗೆ ಹೋಗಬೇಕು, ಸ್ನೇಹಿತರನ್ನು ಸಂದರ್ಶಿಸಬೇಕು, ಹಳೆ ಶಾಲೆ / ಕಾಲೇಜಿಗೆ ಹೋಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಶಾಪಿಂಗ್ ಮಾಡಬೇಕು(ಸ್ಪೇಷಲ್ ಆಫರ್ ಇರುತ್ತಲ್ಲ) ಎಂದೆಲ್ಲಾ ಮುಂದಾಲೋಚನೆ ಮಾಡಿರುವವರು ಕಳೆದ ಕೆಲವು ಶುಕ್ರವಾರಗಳಲ್ಲಿ ನಡೆದಂತಹ ಭಯೋತ್ಪಾದಕ ದಾಳಿಗೆ ಹೆದರಿ ‘ಬದುಕಿತು ಬಡಜೀವ’ ಎಂದು ಮನೆಯಲ್ಲೇ ಇರಲು ಒಲ್ಲದ ಮನಸ್ಸಿನಿಂದ ನಿರ್ಧರಿಸಿದ್ದಾರೆ.
ನಾವು ನಿಜಕ್ಕೂ ಸ್ವತಂತ್ರರೇ?
ರಾಜಾರೋಷವಾಗಿ ಸಿಗರೇಟು ಸೇದುವುದು, ಡ್ರಗ್ಸ್ ತೆಗೆದುಕೊಳ್ಳುವುದು, ಇತರರನ್ನು ಕೆಣಕುವುದು, ಕೋಮುವಾದ ಸ್ರಷ್ಟಿಸುವುದು... ಮುಂತಾದವುಗಳನ್ನು ಮಾಡುತ್ತಾ ಬದುಕುವುದೂ ಸ್ವತಂತ್ರ ಬದುಕೇ?
ಹೊಡಿಬಡಿಯುವುದು, ಮಜಾ ಅನುಭವಿಸುವುದು ಇವೂ ಸ್ವತಂತ್ರ್ಯದ ಪ್ರಮುಖ ಅಂಶಗಳಾಗಿಬಿಟ್ಟವೇ?
ಸ್ವತಂತ್ರ್ಯಾ ದಿನಾಚರಣೆ ಎಂದರೆ ರಾಷ್ಟ್ರಧ್ವಜವನ್ನು ಮೈಯಲ್ಲೆಲ್ಲಾ ಹಾಕಿ ಪಬ್ ಕ್ಲಬ್ ಗಳಲ್ಲಿ ಕುಣಿಯುವುದೇ?
ನಮ್ಮ ದೇಶದಲ್ಲಿರುವ ಅನಾಥಾಶ್ರಮ, ಆಸ್ಪತ್ರೆ ಅಥವಾ ಜೈಲುಗಳಿಗೆ ನಾವೆಷ್ಟು ಬಾರಿ ಸಂದರ್ಶಿಸಲು ಪ್ರಯತ್ನಿಸಿದ್ದೇವೆ? ರಕ್ತದಾನ ಮಾಡಲು ನಾವೆಷ್ಟು ಬಾರಿ ಮುಂದೆ ಬಂದಿದ್ದೇವೆ? ದೊಡ್ಡ ದೊಡ್ಡ ಮಾಲ್ ಗಳಲ್ಲಿ ಹೇಳಿದ ಬೆಲೆಗೆ ಸಮಾನು ಖರೀದಿಸುವ ನಾವು ಚಿಕ್ಕ ಚಿಕ್ಕ ಶೋರೂಮ್ ಗಳಲ್ಲಿ ಮಾತ್ರ ಮಾರಾಟಗಾರರು ಹೇಳಿದ ಬೆಲೆಯ ಅರ್ಧದಷ್ಟನ್ನು ಕೊಟ್ಟು ಬರಲು ಅದೆಷ್ಟು ಹೆಮ್ಮೆ ಪಡುತ್ತೇವೆ!!
June 10, 2008
ಮಗಳಿಗಾಗಿ ಪಿತ್ತಜನಕಾಂಗವನ್ನೇ ದಾನ ಮಾಡಿದ ಅಮ್ಮ... ನಿನಗೆ ನೂರಾರೂ ವಂದನೆಗಳು
ಅಮ್ಮ ನೀನೇ ನನ್ನುಸಿರು, ನನ್ನ ಸರ್ವಸ್ವ. ನಿನ್ನಂಥ ಅಮ್ಮನ ಪಡೆಯಲು ನಾನೆಷ್ಟು ಪುಣ್ಯ ಮಾಡಿದ್ದೇನೆ ಎಂದು ನಾವು ಅದೆಷ್ಟೋ ಬಾರಿ ಹೇಳಿದ್ದೇವೆ. ಅಮ್ಮನನ್ನು ನೆನೆದಾಗೆಲ್ಲಾ ಭಾವುಕರಾಗಿದ್ದೇವೆ. ಅಮ್ಮನ ಪ್ರೀತಿ ಕಣ್ಣ ಮುಂದೆ ಬಂದಾಗ ನಮಗೆ ಅರಿವಿಲ್ಲದಂತೆಯೇ ಕಣ್ಣೀರು ಹಾಕಿದ್ದೇವೆ. ಅಮ್ಮನ ಪ್ರೀತಿಯೇ ಅಂಥಾಹುದು. ಕೀಟಲೆ ಮಾಡುವಾಗೆಲ್ಲಾ ನಿನ್ನಂಥ ಮಗಳು ನನಗ್ಯಾಕೆ ಹುಟ್ಟಿದಳೋ ಎಂದು ಬೈಯುವ ಅಮ್ಮ ತನ್ನ ಮಗುವಿಗೆ ಚಿಕ್ಕ ತೊಂದರೆ ಆದರೂ ಮನಸ್ಸಿನೊಳಗೇ ಕಣ್ಣೀರು ಹಾಕುವಳು. ಮಗು ತೊಂದರೆ ಅನು
ಭವಿಸುವ ಬದಲು ಆ ಪರಿಸ್ಥಿತಿ ತನಗೇ ಬರಬಾರದಿತ್ತೇನೋ ಎಂದು ಹಲುಬುವವಳು.
ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.
ಮಹಾರಾಷ್ಟ್ರದ ಒಂದು ಅಮ್ಮನ ಸಾಹಸ ಹೀಗಿದೆ: ಮಹಾರಾಷ್ಟ್ರದ ಶ್ವೇತಾ ಗೋರ್ ತನಗೊಬ್ಬಳು ಮಗಳು ಹುಟ್ಟುತ್ತಾಳೆಂದು ತಿಳಿದು ಹರ್ಷಗೊಂಡು, ತನ್ನನ್ನು ಪರಿಪೂರ್ಣವಾಗಿ ಮಗುವಿನ ಸೇವೆಗಾಗಿ ಮೀಸಲಿಡಬೇಕೆಂದು ಬಯಸಿ ತನ್ನ ಉದ್ಯೋಗವನ್ನೇ ತ್ಯಜಿಸಿದಳು. ತನ್ನೆಲ್ಲಾ ಪ್ರೀತಿಯನ್ನು ಮಗುವಿಗಾಗಿ ಧಾರೆ ಏರೆದಳು. ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಶ್ವೇತಾ ಕನಸ್ಸಿನಲ್ಲೂ ಊಹಿಸಿರಲಿಲ್ಲ... ಮುಂದೊಂದು ದಿನ ತನ್ನ ಮಗಳು ಪ್ರಾಚಿಗಾಗಿ ತಾನು ಬಹು ದೊಡ್ಡ ಸಾಹಸ ಮಾಡಬೇಕಾಗಿ ಬರಬಹುದೆಂದು!!
ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಮಗುವಿಗೆ ಅಲಾಜೈಲ್ ಸಿಂಡ್ರೊಮ್ ಮತ್ತು ಕ್ರೊನಿಕ್ ಲಿವರ್ ಎಂಬ ಹೆಸರಿನ ಖಾಯಿಲೆಗಳು ಜೊತೆ ಜೊತೆಯಾಗಿ ಬಂದವು. ಇದರ ಪರಿಣಾಮ ಮಗು ಹಗಲು ರಾತ್ರಿಯೆನ್ನದೇ ತುರಿಕೆಯಲ್ಲೇ ಜೀವನ ಕಳೆಯಬೇಕಾಯಿತು. ಅಷ್ಟೇ ಅಲ್ಲ ಪಿತ್ತ ಜನಕಾಂಗವು ಕ್ಷೀಣಿಸುತ್ತಾ ಹೋಗ ತೊಡಗಿತು.
ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.ಮಗಳಿಗಾಗಿ ಏನೂ ಬೇಕಾದರೂ ಮಾಡಲು ಸಿದ್ದಳಿದ್ದ ಅಮ್ಮ ಶ್ವೇತಾ ಇಂದು ಹುಷಾರಾಗಿದ್ದಾರೆ. ಅವರ ಪ್ರಯತ್ನಗಳು ನಿರಾಶದಾಯಕವಾಗಲಿಲ್ಲ. ಪ್ರಾಚಿಗೆ ಮೊದಲಿನ ತುರಿತವಿಲ್ಲ. ಹಸಿವಿನ ತೊಂದರೆಯಿಲ್ಲ. ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತಾಳೆ. ಹೆತ್ತವರಿಬ್ಬರೂ ತಮ್ಮ ಮಗಳ ಆರೋಗ್ಯದಾಯಕ ನಾಳೆಗಳಿಗೆ ಸಾಕ್ಷಿಯಾಗಲಿದ್ದಾರೆ.
April 8, 2008
ಸೈಕಲ್ ಕಳ್ಳ (the bicycle thief)
ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟು
ಮಾಡುತ್ತದೆ.
ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.

ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿ
ಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.
ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.
ಮಾಡುತ್ತದೆ.ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.

ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ತನ್ನ ಮಗನ ಜೊತೆ ಸೇರಿ ಸೈಕಲ್ ಹುಡುಕುವ ಪರಿ ರೋಚಕವಾದದು. ಸೈಕಲ್ ಕಳ್ಳನ ಗುರುತು ಹಿಡಿದು ಆತನ ಮನೆಗೆ ಹೋಗಿ ಸೈಕಲ್ ಹುಡುಕಲು ಹೊರಟಾಗ ಅವರಿಗೆ ಕಂಡಿದ್ದು ಸೈಕಲ್ ಕಳ್ಳನ ಬಡತನ. ಸೈಕಲ್ ಅಲ್ಲೂ ಇರುವುದಿಲ್ಲ.
ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿ
ಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.
March 18, 2008
ಬ್ಲಾಗರ್ಸ್ ಮಿಲನ
ಮಾರ್ಚ್ ೧೬, ೨೦೦೮ ರಂದು ಬೆಂಗಳೂರಿನಲ್ಲಿ ಮಿನಿ ದಾಖಲೆಯೊಂದನ್ನು ಪ್ರಣತಿ ಮಾಡಿತ್ತು. ಕರ್ನಾಟಕದ ಬ್ಲಾಗರ್ಸ್ ಗಳನ್ನು ಬೇಟಿಯಾಗುವ ಸದಾವಕಾಶವನ್ನು ಅದು ನಮಗೆಲ್ಲಾ ನೀಡಿತ್ತು. ಅಷ್ಟೇ ಅಲ್ಲ ಬ್ಲಾಗ್ ನಿಂದ ವೆಬ್ ಸೈಟ್ಗೆ ಹೋಗುವ ಬಗೆ, ಕನ್ನಡದಲ್ಲೇ ಎಸ್ ಎಂ ಎಸ್ ಮಾಡುವ ಸಾಹಸ ಮಾತ್ರವಲ್ಲದೇ ಲಿನಕ್ಸ್, ಜಾವಾ ಮುಂತಾದ ಕ್ಲಿಷ್ಟಕರವಾದ ಟೆಕ್ನಿಕಲ್ ವಿಷಯಗಳೂ ತಿಳಿಯುವಂತಾಯಿತು. ಪ್ರಣತಿ ತಂಡವೇ ಆಶ್ಚರ್ಯ ಪಡುವಂತೆ ಬ್ಲಾಗರ್ಸ್ ನೆರೆದಿದ್ದರು.
ಎಲ್ಲರಲ್ಲೂ ಹೊಸ ಉತ್ಸಾಹ, ಸಂತಸ, ಹುರುಪು ಇತರರನ್ನು ಪರಿಚಯಿಸುವ ತವಕ ಎದ್ದು ಕಾಣುತ್ತಿತ್ತು.
ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರನ್ನು ಮೊದಲೇ ಭೇಟಿಯಾಗಿದ್ದೆ. ಆದರೆ ಸಂಪದದ ನಾಡಿಗ್, ದಟ್ಸ್ ಕನ್ನಡದ ಶ್ಯಾಮ್, ವಿಶ್ವ ಕನ್ನಡದ ಪವನಜ ಸಹಿತ ನಿಮ್ಮೆಲ್ಲರನ್ನೂ ಮುಖತಃ ಭೇಟಿ ಆಗುವ ಅವಕಾಶ ಇಷ್ಟು ಬೇಗ ಲಭಿಸಬಹುದೆಂದು ನಾನು ನಿರೀಕ್ಷಿಸಿರಲಿಲ್ಲ.
ಅದ್ರೂ ನಿರಾಶೆಯಾಯಿತು...
ಮೊದಲ ಭೇಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅವಶ್ಯ ವೆನ್ನಿಸಿದ ಮಾಹಿತಿಗಳನ್ನು ನೀಡಿದ್ದೇನೋ ಸರಿ ಆದ್ರೆ...
ಎಲ್ಲರ ಪರಿಚಯ ಮಾಡಲು ಪ್ರಣತಿ ಒಂದು ಅವಕಾಶ ಕಲ್ಪಿಸಿದ್ದರೆ....?
ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತಿತ್ತು. ಗುಂಪು ಚಟುವಟಿಕೆ ಮುಂತಾದವುಗಳ ಮುಖಾಂತರ ಒಬ್ಬರಿಗೊಬ್ಬರ ಪರಿಚಯ ಮಾಡಿಸುತ್ತಿದ್ದರೆ ಪ್ರಣತಿಗೆ ಡಬ್ಬಲ್ ಕ್ರೆಡಿಟ್ ಬರುತ್ತಿತ್ತೇನೋ...
ಪರವಾಗಿಲ್ಲ ... ಮುಂದಿನ ಬಾರಿ ಪ್ರಣತಿ ತಂಡ ಅಂಥಹ ಲೋಪಗಳಿಗೆ ಅವಕಾಶ ಕೊಡಲ್ಲ ಹಾಗೂ ಬಹು ಬೇಗನೇ ಮಗದೊಂದು ಬ್ಲಾಗರ್ಸ್ ಮಿಲನವನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯ ನನ್ನದು. ಅ ದಿನ ನಾವೆಲ್ಲ ಮತ್ತೆ ಭೇಟಿಯಾಗೋಣ... ಅಲ್ಲಿಯವರೆಗೆ ಇದೇ ಅಂತರ್ಜಾಲದಲ್ಲಿ ಭೇಟಿಯಾಗುತ್ತಿರೋಣ...
ಎಲ್ಲರಲ್ಲೂ ಹೊಸ ಉತ್ಸಾಹ, ಸಂತಸ, ಹುರುಪು ಇತರರನ್ನು ಪರಿಚಯಿಸುವ ತವಕ ಎದ್ದು ಕಾಣುತ್ತಿತ್ತು.
ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರನ್ನು ಮೊದಲೇ ಭೇಟಿಯಾಗಿದ್ದೆ. ಆದರೆ ಸಂಪದದ ನಾಡಿಗ್, ದಟ್ಸ್ ಕನ್ನಡದ ಶ್ಯಾಮ್, ವಿಶ್ವ ಕನ್ನಡದ ಪವನಜ ಸಹಿತ ನಿಮ್ಮೆಲ್ಲರನ್ನೂ ಮುಖತಃ ಭೇಟಿ ಆಗುವ ಅವಕಾಶ ಇಷ್ಟು ಬೇಗ ಲಭಿಸಬಹುದೆಂದು ನಾನು ನಿರೀಕ್ಷಿಸಿರಲಿಲ್ಲ.
ಅದ್ರೂ ನಿರಾಶೆಯಾಯಿತು...
ಮೊದಲ ಭೇಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅವಶ್ಯ ವೆನ್ನಿಸಿದ ಮಾಹಿತಿಗಳನ್ನು ನೀಡಿದ್ದೇನೋ ಸರಿ ಆದ್ರೆ...
ಎಲ್ಲರ ಪರಿಚಯ ಮಾಡಲು ಪ್ರಣತಿ ಒಂದು ಅವಕಾಶ ಕಲ್ಪಿಸಿದ್ದರೆ....?
ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತಿತ್ತು. ಗುಂಪು ಚಟುವಟಿಕೆ ಮುಂತಾದವುಗಳ ಮುಖಾಂತರ ಒಬ್ಬರಿಗೊಬ್ಬರ ಪರಿಚಯ ಮಾಡಿಸುತ್ತಿದ್ದರೆ ಪ್ರಣತಿಗೆ ಡಬ್ಬಲ್ ಕ್ರೆಡಿಟ್ ಬರುತ್ತಿತ್ತೇನೋ...
ಪರವಾಗಿಲ್ಲ ... ಮುಂದಿನ ಬಾರಿ ಪ್ರಣತಿ ತಂಡ ಅಂಥಹ ಲೋಪಗಳಿಗೆ ಅವಕಾಶ ಕೊಡಲ್ಲ ಹಾಗೂ ಬಹು ಬೇಗನೇ ಮಗದೊಂದು ಬ್ಲಾಗರ್ಸ್ ಮಿಲನವನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯ ನನ್ನದು. ಅ ದಿನ ನಾವೆಲ್ಲ ಮತ್ತೆ ಭೇಟಿಯಾಗೋಣ... ಅಲ್ಲಿಯವರೆಗೆ ಇದೇ ಅಂತರ್ಜಾಲದಲ್ಲಿ ಭೇಟಿಯಾಗುತ್ತಿರೋಣ...
February 27, 2008
ನನ್ನ ಸಾವಿಗೆ ನಾನೇ ಕಾರಣ!!!
ಆತ್ಮಹತ್ಯೆ ಮಾಡುವವರು ದೈರ್ಯಶಾಲಿಗಳಾ ಅಥವಾ ಹೇಡಿಗಳಾ? ಆತ್ಮಹತ್ಯೆ ಮಾಡಲು ಸಾಮಾನ್ಯರಿಗಂತೂ ಅಸಾಧ್ಯವಂತೆ ನಿಜನಾ?ಸಾವಿಗೆ ಹೆದರದವರು ಯಾರಿಗೆ ಹೆದರಿ ಸಾವಿಗೆ ಶರಣಾಗುತ್ತಾರೆ?
ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾದಂತಹ ಆತ್ಮಹತ್ಯೆ ಪ್ರಕರಣಗಳಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಪತ್ರ ಬರೆದು ಆಕೆ/ಆತ ಸಾವಿಗೆ ಶರಣಾಗಿದ್ದಾಳೆ/ನೆ ಎಂಬ ವಾಕ್ಯವನ್ನು ಓದುತ್ತಿರುತ್ತೇವೆ.
ಆತ್ಮಹತ್ಯೆ ಮಾಡುವ ಮನಸ್ಸು
ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?
ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?ಸಾವಿನ ನಂತರ ಸ್ವರ್ಗ ಮತ್ತು ನರಕ ಗಳೆರಡು ಸ್ಥಳಗಳಲ್ಲಿ ಒಂದಕ್ಕೆ ಹೋಗಬೇಕಾದ ಅನಿವಾರ್ಯ ಇದೆ ಎಂದರಿತ ಜನ ಸಾಯುವ ಮುಂಚೆ ‘ ನನ್ನ ಸಾವಿಗೆ ನಾನೇ ಕಾರಣವೆಂದು ಬರೆದು ಉಳಿದವರಿಗೆ ಆಗಬಹುದಾದ ಶಿಕ್ಷೆ ತಪ್ಪಿಸಿ, ಅವರಿಂದ ಸತ್ತವರು ಗ್ರೇಟ್ ಎನ್ನಿಸಿದಾಕ್ಷಣ ಆತ್ಮಹತ್ಯೆ ಮಾಡಿದವರಿಗೆ ಸ್ವರ್ಗ ಶಿಕ್ಷೆ ಲಭಿಸುತ್ತೇನು?
ಹಾಗೇ ಪತ್ರ ಬರೆದಾಕ್ಷಣ ಎಲ್ಲಾ ಪರಿಹಾರವಾಗುತ್ತಾ? ಆಕೆ / ಆತನ ಸಾವಿಗೆ ಮನೆಯವರೊ/ ಸ್ನೇಹಿತರೊ ಅಥವ ಇನ್ನಾರೊ ಕಾರಣ.. ಇಲ್ಲದಿದ್ದರೆ ಆಕೆ/ಆತ ಆತ್ಮಹತ್ಯೆ ಮಾಡುತ್ತಿರಲಿಲ್ಲ ಎಂಬ ಹುಳ ಎಲ್ಲರ ಮನದಲ್ಲೂ ಮನೆಮಾತಾಗಿರುವುದಿಲ್ಲವಾ?
ಅನ್ಯಾಯ ಕಂಡಾಕ್ಷಣ ಸಾವಿಗೆ ಶರಣಾಗುವ ಬದಲು ಅನ್ಯಾಯವನ್ನು ದಿಟ್ಟವಾಗಿ ಪ್ರತಿಭಟಿಸಿ ಸಾಯಲು ಸಿದ್ದರಿರಬೇಕೆಂದು ಯಾಕೆ ಯಾರು ಯೋಚಿಸುತ್ತಿಲ್ಲ. ಆತ್ಮಹತ್ಯೆ ಮಾಡಲೇ ಬೇಕೆಂಬ ಇಚ್ಛೆ ಇದ್ದರೆ ಪ್ಲೀಸ್ ಮೊದಲು ಏನನ್ನಾದರೂ ಸಾಧಿಸಿ... ನಿಮ್ಮಿಂದ ಒಂದಿಬ್ಬರಿಗಾದರೂ ಒಳಿತಾಗಲಿ. ನಿಮ್ಮ ಸಾವಿನಿಂದ ಇತರರಿಗೆ ತ್ರಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಖಂಡಿತ ಬೇಡ. ವಿದ್ಯಾವಂತರಾಗಿಯು ಚಿಲ್ಲರೆ ವಿಷಯಗಳಿಗೆ ನೊಂದು ಆತ್ಮಹತ್ಯೆ ಮಾಡಲು ಮುಂದೆ ಹೋಗುವ ನೀವುಗಳು ಹೇಡಿಗಳೇ ಸರಿ...
ನಿಮ್ಮ ಜನನಕ್ಕೆ ನೀವು ಕಾರಣವಲ್ಲ! ಆಗಿದ್ದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಹಕ್ಕು ನಿಮಗಿಲ್ಲ.. ಪ್ರಪಂಚದಲ್ಲಿ ಅದೆಷ್ಟು ಮಂದಿ ತಮ್ಮ ಕುಟುಂಬದವರನ್ನೆಲ್ಲಾ ಕಳೆದು ಕೊಂಡು, ಭಯಾನಕ ಖಾಯಿಲೆ ಬಂದಿದ್ದರೂ ನೊಂದು ಕೊಳ್ಳದೇ ಬದುಕಿ ಸಾಧಿಸಿದ್ದಾರೆ. ನಮ್ಮ ನಾಳೆಗಳು ನಮಗಾಗಿ ಕಾದಿರುತ್ತವೆ. ಅವುಗಳನ್ನು ಹಸನ್ಮುಖದಿಂದ ಸ್ವೀಕರಿಸೋಣ.
ಮತ್ತೂ ಸಾಯಲೇ ಬೇಕೆಂದು ನಿರ್ಧರಿಸಿದ್ದರೆ ಒಂದ್ನಿಮಿಷ... ನಿಮ್ಮ ಸುತ್ತಮುತ್ತಲು ನಡೆಯುವ ಹಗರಣ, ಮೋಸ, ವಂಚನೆಗಳನ್ನು ಬಯಲಿಗೆಳೆದು she/he is great ಅಂತ ಅನ್ನಿಸಿಕೊಳ್ಳಿ.. ಬಹುಶಃ ಆ ಹೊತ್ತಿಗೆ ನಿಮ್ಮ ಆತ್ಮಹತ್ಯೆಯ ಯೋಚನೆ ಮಾರುದೂರ ಹೋಗಿರುತ್ತೆ.
February 4, 2008
ಮನುವಿನ ನೂಪುರ ಭ್ರಮರಿ
ಹಾಯ್,
ನನಗೊಬ್ಬಳು ಗೆಳತಿಯಿದ್ದಾಳೆ. ಶುದ್ಧ ತರಲೆ ಅಂಥನೇ ಹೇಳಬಹುದು. ನನಗಿಂತಲೂ ಒಂದು ಪಟ್ಟು ಜಾಸ್ತಿನೇ ಅವಳ ತುಂಟಾಟಗಳು ನಡೆಯುತ್ತವೆ ಎಂದರೂ ತಪ್ಪಾಗದು. ಅವಳ ಮೇಲೆ ಪ್ರೀತಿ ಹೆಚ್ಚಾದಗೆಲ್ಲಾ ನನ್ನ ಮೊಬೈಲ್ ನಲ್ಲಿ ಅವಳ ಹೆಸರು ಮನು ಎಂದಿರುತ್ತಿದ್ದರೆ, ಕೋಪ ಬಂದಾಗ ಮನೋರಮಾ ಬಿ ಎನ್ ಎಂದು ಪೂರ್ಣ ಹೆಸರನ್ನು ಕಾಣಬಹುದು.
ಈ ಮನುಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ದೈರ್ಯವಿಲ್ಲ ಎಂಬುದಾಗಿ ಒಂದೊಮ್ಮೆ ನಾನು ಕನ್ನಡ ಪ್ರಭದ ‘ಕಾಲೇಜು ರಂಗ’ದ ಮುಖಾಂತರ ತಿಳಿಸಿದ್ದೆ. ಆ ದಿನಗಳಲೆಲ್ಲಾ ಆಕೆ ನನ್ನಲ್ಲಿ ಮಾತು ಬಿಟ್ಟಿದ್ದಳು. ಆದ್ರೂ ನಮ್ಮಿಬ್ಬರ
ಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು.
ಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು. ಕ್ಷಮಿಸಿ. ಇಂದು ಅವಳ ಬಗ್ಗೆ ಬ್ಲಾಗಿನಲ್ಲಿ ಬರೆಯಲು ಮುಖ್ಯ ಕಾರಣ.... ಅವಳು ಭರತನಾಟ್ಯಂ ಹಾಗೂ ಇತರೆ ನ್ರತ್ಯಗಳ ಕುರಿತಾಗಿನ ತನ್ನದೇ ಆದ ದ್ವೈಮಾಸಿಕ (ಎರಡು ತಿಂಗಳಿಗೊಮ್ಮೆ) ವೊಂದನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದ್ದಳು. ‘ನೂಪುರ ಭ್ರಮರಿ’ ಕಳೆದ ಒಂದು ವರ್ಷದಲ್ಲೇ ಬಹು ಖ್ಯಾತಿಯನ್ನೇ ಪಡೆಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇದೇ ಫೆಬ್ರವರಿ ೧೦ರಂದು ಮಡಿಕೇರಿಯಲ್ಲಿ ‘ನೂಪುರ ಭ್ರಮರಿ’ಯ ವರ್ಷಾಚರಣೆಯು ಸಾಯಂಕಾಲ ೪ ಗಂಟೆಗೆ ಭಾರತೀಯ ವಿದ್ಯಾ ಭವನ ಮಡಿಕೇರಿಯ ದೇವಸ್ಥಾನ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿದೆ. ಅಂದು ‘ನೂಪುರ ಭ್ರಮರಿ’ಯ ವೆಬ್ ಸೈಟನ್ನು ಉದ್ಟಾಟಿಸುವ ಗುಟ್ಟೊಂದನ್ನು ಮನು ನನ್ನಲ್ಲಿ ತಿಳಿಸಿದ್ದಾಳೆ...
ಮನು ನಿನಗೆ ನನ್ನ ಆತ್ಮೀಯ ವಂದನೆಗಳು. ನಿನ್ನ ಕಾರ್ಯದಲ್ಲಿ ಯಶಸ್ಸು ಲಭಿಸಲಿ ಎನ್ನುವ ಹಾರೈಕೆ ನಿನ್ನ ಜಗಳಗಂಟಿ ಗೆಳತಿಯದು.
Subscribe to:
Posts (Atom)
ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'
'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...
-
ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ. ಹೌದು. ಇದು ವಿದಾಯ ಹೇಳುವ ಸಮಯ.... ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾ...
-
ಮಂಗಳೂರಿನ ಸಂಸ್ಕ್ರತಿ, ಸಂಪ್ರದಾಯ, ವ್ಯವಹಾರ, ವಿದ್ಯಾಬ್ಯಾಸ ಪದ್ದತಿ, ಕಡಲ ಕಿನಾರೆ ಹೀಗೆ ಎಲ್ಲವನ್ನೂ ಇಷ್ಟ ಪಡುವವರು ಮಂಗಳೂರಿನ ಕನ್ನಡವನ್ನು ಮಾತ್ರ ವ್ಯಂಗ್ಯವಾಗಿ ಬಳಸು...
-
ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟು ಮಾಡುತ್ತದೆ. ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ...
