October 1, 2017

ವಿದಾಯ ಹೇಳಬಂದಾಗ ಕಾಡುವ ಸವಿನೆನಪು

ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ.
ಹೌದು. ಇದು ವಿದಾಯ ಹೇಳುವ ಸಮಯ....
ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾಗ್ ಸ್ನೇಹಿತರಿಗಾಗಲಿ ವಿದಾಯ ಹೇಳುತ್ತಿಲ್ಲ! ಹೇಳುವುದೂ ಇಲ್ಲ. ಏಕೆಂದರೆ ಬ್ಲಾಗ್ ನನ್ನ ಒಂಟಿತನವನ್ನು ದೂರವಿರಿಸಲು ನಾನು ಕಂಡುಕೊಂಡ ಹೊಸ ವಿಧಾನ.
ಸ್ನೇಹ ಮಾಡಬಾರದು. ಮಾಡಿದ ಕೆಲವು ತಿಂಗಳುಗಳಲ್ಲೇ ದೂರವಾಗುವ ಸನ್ನಿವೇಷ ಬಂದಾಗ ತುಂಬಾನೇ ಬೇಜಾರಾಗುತ್ತದೆ ಎಂಬ ಅರಿವಿದ್ದರೂ ಮತ್ತೆ ಬೇಡ ಬೇಡವೆಂದರೂ ಇತರರ ಒಳ್ಳೆಯತನಕ್ಕೆ ಮರುಳಾಗಿ ಸ್ನೇಹಿತರಾಗುತ್ತೇವೆ. ಕಾಲೇಜು ಸಂದರ್ಭದಲ್ಲಿ ಅದೆಷ್ಟು ಸಂತೋಷದಿಂದಿದ್ದೇವೊ ಅದನ್ನು ಮರು ನೆನಪಿಸಲು ಪಿಜಿ ಸ್ನೇಹಿತರು ನನಗೆ ಜತೆಯಾದರು.

ಜತೆಜತೆಯಲ್ಲೇ ತಿರುಗಾಟ(ಬೆಂಗಳೂರಿನ ಎಲ್ಲಾ ಶಾಪಿಂಗ್ ಷಾಪ್ ಗಳು), ಧರ್ಮ ಬೇರೆಯಾದರೂ ದರ್ಗ, ದೇವಸ್ಥಾನ ಗಳಿಗೆಲ್ಲಾ ಮುರು ಧರ್ಮದವರೂ ಜತೆಯಾಗಿ ಹೋಗಿ ಇತರರನ್ನು ಹೊಟ್ಟೆ ಉರಿಸಿದ್ದು, ಬೆಳಿಗ್ಗೆ ಜಗಳವಾಡಿ ರಾತ್ರಿ ಜತೆಯಾಗಿ ಊಟಮಾಡಿದ್ದು, ನಾನ್ ವೆಚ್ ಗಾಗಿ ಎಲ್ಲೆಡೆ ಹೋದದ್ದು, ಬೇಡ ಬೇಡವೆಂದರೂ ಪ್ರತಿ ಶನಿವಾರ ಚಿಕನ್ ತರಿಸಿ ತಿಂದದ್ದು, ಗೋಳಾಡಿಸಿದ್ದು, ಹೊಸ ವರ್ಷ, ಕ್ರಿಸ್ಮಸ್ ಸಂಭ್ರಮವನ್ನು ರಾತ್ರಿ ೧೨ರ ನಂತರನೂ ಡ್ಯಾನ್ಸ್ ಜೊತೆಗೆ ಸಂಭ್ರಮಿಸಿದ್ದು, ಹುಟ್ಟಿದ ಹಬ್ಬಗಳ ಭರ್ಜರಿ ಪಾರ್ಟಿ... ಹೋಲಿ ದಿನವನಂತೂ ಮರೆಯಲ್ಲಿಕ್ಕೇ ಸಾಧ್ಯವಿಲ್ಲ. ರಾತ್ರಿಯಿಡೀ ರೇಡಿಯೋ ಆನ್ ಇಟ್ಟು ಮಲಗಿದ್ದು, ಫೂಲ್ ಮಾಡೋಕೆ ಹೋಗಿ ನಾನೇ ಫೂಲ್ ಆದದ್ದು... ಎಲ್ಲವೂ ಇನ್ನು ಬರಿಯ ಸವಿನೆನಪು ಮಾತ್ರ.


ಕಣ್ಣೀರು, ಸಂತೋಷ ಎಲ್ಲವನ್ನು ಸಮನಾಗಿ ಹಂಚಿದ್ದು!! ಗೆಳತಿ ಹೇಗೆ ಮರಿಯಲಿ ನಾ! ಅ ಮಧುರ ದಿನಗಳನ್ನು! ಮಧುರ ಕ್ಷಣಗಳನ್ನು!


ನನಗೆ ಗೊತ್ತು ಇನ್ನು ನಮ್ಮ ಸ್ನೇಹ ಬರಿಯ ಫೋನ್ ಕರೆಗಳಿಗೆ, ಎಸ್ಎಂಎಸ್ ಮತ್ತು ಮೇಲ್ ಸಂದೇಶಗಳಿಗೆ ಮಾತ್ರ ಮೀಸಲೆಂದು.
ಗೀ, ನಿಧಿ ನನ್ನ ಬಿಟ್ಟು ಬೆಂಗಳೂರನ್ನು ತೊರೆದು ಹೋದಾಗ ನಾನು ಭಾಗಶ: ಮೌನಿ ಯಾಗಿದ್ದೆ. ಅದು ಅನಿರೀಕ್ಷಿತ ಅಘಾತವಾಗಿತ್ತು. ಜತೆಯಾಗಿ ಇರುತ್ತೇವೆ ಅಂದುಕೊಂಡದ್ದು ಸಾಧ್ಯವಾಗಲೇ ಇಲ್ಲ. ಬದಲಾವಣೆಯನ್ನು ಬಯಸಿ ಅವರು ದೂರವಾದರು.

ಈಗ, ನಾz, ಪ್ರೀತಿ, ಅನಿ ಎಲ್ಲರೂ ಜೀವನದ ಪಯಣದ ಮಹತ್ತರ ಬದಲಾವಣೆಯ ಉದ್ದೇಶವಾಗಿ ರೂಮನ್ನು, ಬೆಂಗಳೂರಿನ ಈ ಪ್ರಪಂಚವನ್ನು ತೊರೆದು ತಮ್ಮ ಊರಿಗೆ ತೆರಲುತಿದ್ದಾರೆ. ಬೇಡ ಅನ್ನಲೇ... ಅದೇಗೆ ತಡೆಯಲಿ ಅವರನ್ನು...?

ನಾವಂದು ಕೊಂಡ ಹಾಗೇ ಯಾವುದೂ ಸಾಧ್ಯವಿಲ್ಲ... ಪುಸ್ತಕದ ಹುಳುವಾಗಿದ್ದ ನಾ ಪುಸ್ತಕವನ್ನೇ ಮರೆತಿದ್ದೆ! ಬರಹಗಳೆಲ್ಲಾ ಮರೆತೇ ಹೋಗಿತ್ತು. ಈಗ ಮತ್ತೆ ಪ್ರಾರಂಭಿಸಬೇಕು... ಒಂಟಿತನ ದೂರವಾಗಿಸಬೇಕು...

ಇರಲಿ ನೆನಪಿರಲಿ ನಮ್ಮ ಗೆಳೆತನದ ಸವಿ ನೆನಪಿರಲಿ. ಈ ನೆನಪೇ ಶಾಶ್ವತವೂ ಅದುವೇ ಚಿರ ನೂತನವೂ... ಮನು ಗುನು ಗುನುಡುತ್ತಿದ್ದ ಹಾಡು ಮತ್ತೆ ನೆನಪಾಗುತ್ತಿದೆ.

3 comments:

... said...

Hi Veena,

“Life: a cycle. A series of events, meetings, and departures. Friends discovered, others lost, Precious time, wastes away. Big droplet tears are shed for yesterday, but are dried in time for tomorrow, until all that remain are foggy, broken memories of a happy yesteryear.”



Yahya Abbas U. A. E
abbasujire@gmail.com

Enigma said...

:)

ನೇಸರ ಕಾಡನಕುಪ್ಪೆ said...

ವೀಣಾ,

ನಿಮ್ಮ ಬಹುತೇಕ ಬ್ಲಾಗ್ ಪೋಸ್ಟ್ ಗಳನ್ನು ಓದಿದೆ. ಭಾಷೆ ಅದ್ಭುತ. ಓದುತ್ತಿದ್ದರೆ ಯಾವುದೋ ಲೋಕಕ್ಕೆ ಕೊಂಡಯ್ಯುತ್ತೀರ. ಇಷ್ಟು ದಿನ ನೀವೇಕೆ ನನಗೆ ಪರಿಚಯವೇ ಆಗಲಿಲ್ಲ ಎಂದು ಬೇಸರವಾಯಿತು. ಈಗಲಾದರೂ ಪರಿಚಯವಾಯಿತಲ್ಲ ಎಂದು ಸಂತಸವೂ ಆಯಿತು.

ನಿಮ್ಮ ಆರ್ಕುಟ್ ಪ್ರೆಫೈಲ್ ನೋಡಿದೆ. ನೀವು ನಮ್ಮ ಬ್ಯಾಚ್ ಎಂದೇ ತಿಳಿಯಿತು. ಆದರೆ ನಾನು ಪತ್ರಿಕೋದ್ಯಮ ಎಂ.ಎ ಮೈಸೂರಿನಲ್ಲಿ ಮಾಡಿದ್ದೇನೆ ಅಷ್ಟೆ. ಈಗ ಮೈಸೂರಿನಲ್ಲಿ ಕನ್ನಡಪ್ರಭ ವರದಿಗಾರ. ನೀವು ಏನು ಕೆಲಸ ಮಾಡಿಕೊಂಡಿದ್ದೀರಿ?

ಹೀಗೇ ಬ್ಲಾಗ್ ಪೋಸ್ಟ್ ಗಳನ್ನು ಹಾಕುತ್ತಿರಿ. ನಿಮ್ಮ ಸಲಹೆಗಳನ್ನು ನಾನು ಸ್ವೀಕರಿಸಿದ್ದೇನೆ. ಆ ವಿಷಯಗಳ ಬಗ್ಗೆಯೂ ಬರೆಯುತ್ತೇನೆ. ಕಳೆದ ೧ ತಿಂಗಳಿಂದ ಚುನಾವಣಾ ಕಾರ್ಯದಲ್ಲಿ ಕೊಂಚ ಬ್ಯುಸಿ ಇದ್ದೆ. ಇನ್ಮುಂದೆ ಬರೆಯುತ್ತೇನೆ.

ನಮ್ಮ ಸ್ನೇಹ ಮುಂದುವರೆಯಲಿ.

ನಿಮ್ಮ ಸ್ನೇಹಿತ,

ನೇಸರ ಕಾಡನಕುಪ್ಪೆ

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...