January 10, 2011

Nick Name (ಅಡ್ಡ ಹೆಸರು) ತರಲೆಗಳು!

ಈ ಅಡ್ಡ ಹೆಸರುಗಳ ಮಲಾಮತಿಯಿಂದ ಇಂದು ನಾವು ನಿಜವಾದ ಹೆಸರುಗಳನ್ನೇ ಮರೆಯುತ್ತೇವೆ. ಒಂದು ಕಾಲದಲ್ಲಿ ಬರಿ ಮನೆ ಮಂದಿಗೆ ಅಥವಾ ಆತ್ಮೀಯ ಸ್ನೇಹಿತರೊಳಗೆ ಮಾತ್ರ ಇರುತ್ತಿದ್ದ ಅಡ್ಡ ಹೆಸರುಗಳ ಬಳಕೆ ಇಂದು ಪ್ರಪಂಚದಾದ್ಯಂತ ವಿಸ್ತರಿಸಿದೆ. ಮಾಧ್ಯಮಗಳಂತೂ ತಮಗಿಷ್ಟಬಂದಂತೆ ಅಡ್ಡ ಹೆಸರುಗಳನ್ನು ಬಳಸುತ್ತಿದ್ದಾರೆ. ಯುಡಿಯೂರಪ್ಪ "ಯಡ್ಡಿ" ಯಾದರೆ, ಒಬಾಮಾ "ದೊಡ್ಡಣ್ಣ"ನಂತೆ! ಸಚ್ಚಿನ್ ತೆಂಡ್ಕುಲರ್ ದೇವರಂತೆ! ಕತ್ರಿನಾ ಕೈಫ್ "ಕ್ಯಾಟ್", ಇನ್ಯಾರೊ "ಡಾಗ್" ಮತ್ತಿನ್ಯಾರೋ ಡಾನ್ ಅಂತೆ! ಒಬ್ಬರು ಚಿಂಕೆ ಮರಿಯಾದರೆ ಇನ್ನೊಬ್ಬರು ಕರಿಚಿರತೆ ಯಂತೆ!

ಇನ್ನು ಕೆಲವು ಮಾಮೂಲು ಅಡ್ಡ ಹೆಸರುಗಳಿವೆ. ಅವುಗಳಲ್ಲಿ ಪ್ರಮುಖವಾದದು ಇಡಿಯಟ್, ಲಂಬು, ಡುಮ್ಮ....
ಅಡ್ಡಹೆಸರುಗಳ ಪಟ್ಟಿ ಮಾಡುವುದಾದರೆ ಅದೆಷ್ಟೊ ಇವೆ ಬಿಡಿ. ಅದನ್ನು ಬರೆಯಲು ಪುರುಸೊತ್ತು ನನಗೂ ಇಲ್ಲ, ಓದುವ ಸಹನೆ ನಿಮಗೂ ಇರಲ್ಲ! ಅದ್ರೆ ಒಂದು ಮಾತ್ರ ನಿಜ ಕಣ್ರಿ... ಪ್ರತಿ ಅಡ್ಡ್ ಹೆಸರುಗಳ ಹಿಂದೆ ಒಂದೊಂದು ಕತೆ ಇದೆ, ಕೆಲವೊಮ್ಮೆ ಅದು ಕಾದಂಬರಿಯಾಗಲೂ ಬಹುದು.

ಅಡ್ಡ ಹೆಸರಿನ ಅಪತ್ತುಗಳ ವಿವರ ನೀಡ ಹೊರಟರೆ ಅದು ಮುಗಿಯದ ಪುರಾಣ! ಅದ್ರೂ ಒಂದು ನಿದರ್ಶನ ಕೊಡುವುದಾದರೆ, ಒಮ್ಮೆ ನನ್ನ ಅಂಕಲ್ "ಜೆರಾಲ್ಡ್" ಎಂಬವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಮ್ಮ ಡ್ಯಾಡಿ ಅವರನ್ನು ನೋಡಲೆಂದು ಆಸ್ಪತ್ರೆಗೆ ಹೋಗಿ, "ಜೆರಿ" (ಅವರ ಅಡ್ಡ ಹೆಸರು) ಯಾವ ವಾರ್ಡ್ ನಲ್ಲಿ ದಾಖಲಾಗಿದ್ದಾರೆ ಎಂದು ಕೇಳಿದಾಗ ಆ ಹೆಸರಿನವರು ಯಾರು ಇಲ್ಲ ಎಂದು ಪ್ರತಿಕ್ರಿಯೆ ಬಂದಾಗ ಪಟ್ಟ ಪಾಡು ಅಷ್ಟಿಷ್ಟಲ್ಲ...

ಹೆಚ್ಚಿನೆಡೆ ಅಡ್ಡ ಹೆಸರುಗಳು ಹಾಸ್ಯಾಸ್ಪದವಾಗಿದ್ದರೆ, ಇನ್ನು ಕೆಲವೆಡೆ ನಿಜ ಹೆಸರುಗಳೇ ಹಾಸ್ಯಾಸ್ಪದವಾಗಿರುತ್ತವೆ. ಉದಾಹರಣೆಗೆ ಕೆಲವರ ಹೆಸರುಗಳೇ ಹೀಗಿವೆ: ಶ್ರೀಮತಿ, ಕುಮಾರಿ, ಬಣ್ಣ, ಪಚ್ಚ, ಮಚ್ಚ, ಗುಗ್ಗು...

ಓ ಮರೆತೆ ಬಿಡಿ... ಅಂದಹಾಗೆ ನಿಮ್ಮ ಅಡ್ಡ ಹೆಸರು ಏನು?


ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...