May 7, 2009

ಮಮ್ಮಿ ನಿನ್ನ ಪ್ರೀತಿ ಬಲು ಮಧುರ

ಮಮ್ಮಿ , ಮಮ್ಮಾ, ಮಮ್ಮೇ , ಮಮ್ಮಿ ಡಿ ಸೋಜಾ, ಮದರ್ ಇಂಡಿಯಾ ಹೀಗೆ ಹಲವು ಹೆಸರುಗಳಿಂದ ಅದೆಷ್ಠು ಬಾರಿ ನಾನು ಮಮ್ಮಿನ ಕರೆದರೂ ಪ್ರತಿ ಬಾರಿನೂ ಕರೆಗೆ ಓಗೂಡುವ ನನ್ನ ಮುದ್ದಿನ ಮಮ್ಮಿ ನಿನ್ನ ಬಗ್ಗೆ ನಾ ಏನೆಂದು ಬರೆಯಲಿ? ಹೇಗೆ ವರ್ಣಿಸಲಿ?

ಎಂದೆಂದಿಗೂ ನೀನೇ ನನ್ನ ಬಾಳಿಗೆ ದೀಪ, ಚೇತನ, ದಾರಿ, ಆದರ್ಶವಾದಿ. ಬಹುಶ: ನಿನಗೆ ಮಾತ್ರವೇ ಕಾಣುತ್ತೆ ಮಮ್ಮಿ, ನಾ ಹೇಳದಿದ್ದರೂ ನನ್ನ ಸಂತೋಷ, ನೋವು, ನಲಿವು, ಆನಾರೋಗ್ಯ, ಸಂಭ್ರಮದ ನಿಜ ಅರ್ಥ ತಿಳಿಯುತ್ತದೆ. ನನ್ನನ್ನು ಒಬ್ಬ ಆಪ್ತ ಸ್ನೇಹಿತೆಗಿಂತಲೂ ಹೆಚ್ಚಾಗಿ ಕಂಡವಳು ನೀನು.
ವಿದ್ಯಾಭ್ಯಾಸ, ಅದ ನಂತರ ಉದ್ಯೋಗ ನಿಮಿತ್ತ ನಿನ್ನಿಂದ ದೂರವಾದ ಮೇಲೆ ನಿನ್ನ ತೋಳಿನಲ್ಲಿ ಮಲಗಬೇಕು ಎಂದು ಅನ್ನಿಸಿದ್ದ ದಿನಗಳೆಷ್ಟು!! ಪ್ರತೀ ಒಂದು ವಿಷಯವನ್ನು ಮರೆಯದೆ, ಮರೆಮಾಚದೇ ನಿನ್ನಲ್ಲಿ ಬಿಚ್ಚಿಟ್ಟಾಗಲೇ ಅಲ್ವೇ ನನಗೆ ನೆಮ್ಮದಿ!!
ನೀನು ಜತೆಗಿದ್ದರೆ ನಾನ್ ಸ್ಟಾಪ್ ಮಾತುಗಳು ನನ್ನ ಬಾಯಲ್ಲಿ. ಅದೇಕೋ ಗೊತ್ತಿಲ್ಲ ಯಾವಗಲೂ ಮೌನಿಯಾಗಲು ಬಯಸುವ ನಾನು ನೀನು ಮುಂದಿರುವಾಗ ಅಂತೂ ಪಟ ಪಟ ಅಂತ ಮಾತನಾಡುತ್ತಲೇ ಇರುತ್ತೇನೆ. ನನ್ನ ಮಾತಿನಿಂದ ನೀನು ಯಾವತ್ತೂ ಬೇಸರಗೊಂಡಿಲ್ಲ. ಯಾವುದೋ ಚಿಕ್ಕ ಕಾರಣವನ್ನಿಟ್ಟು ಊಟಮಾಡದೇ ಮಲಗಿದಾಗೆಲ್ಲಾ ‘ನೀನು ಊಟ ಮಾಡಲ್ಲದಿದ್ದರೆ ನನಗ್ಯಾಕೆ’ ಅಂತ ಹೇಳಿ ನನ್ನನ್ನೂ ಊಟ ಮಾಡಿಸಿಯೇ ಮಲಗುತ್ತಿದ್ದೆ. ಅವಗೆಲ್ಲಾ ಅಪ್ಪನೂ ಸಾಥ್ ಕೊಟ್ಟಿದ್ದರಲ್ಲಾ!
ನಿನ್ನ ಆಶೀರ್ವಾದ ನನ್ನ ಜತೆಗಿದ್ದುದರಿಂದಲೇ ಮಮ್ಮಿ ನಾ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದು. ನನಗೆ ಸಿಕ್ಕ ಸ್ಥಾನ ಮಾನಗಳಿಗೆ ನೀನೇ ಸ್ಪೂರ್ತಿ.
ಒಂದು ಸತ್ಯ ಹೇಳ್ತೆನೆ: ಈ ಪ್ರಪಂಚದ ಯಾವುದೇ ಮುಲೆಯಲ್ಲಿ ಹುಡುಕಿದರೂ ನಿನ್ನಂಥ ಮಮ್ಮಿ ಯಾರಿಗೂ ಸಿಗಲ್ಲ. ನೀನು ನನ್ನ ಮೇಲೆ ಇಟ್ಟ ನಂಬಿಕೆ ವಿಶ್ವಾಸಕ್ಕೆ ನಾನು ಅಭಾರಿ. ನಿನ್ನ ಪ್ರೀತಿಗೆ, ತ್ಯಾಗಕ್ಕೆ ಪ್ರತಿಯಾಗಿ ನನ್ನಿಂದ ಏನನ್ನೂ ಕೊಡಲು ಸಾಧ್ಯವಾಗುತ್ತಿಲ್ಲ... ಮಮ್ಮಿ ಮೇ ೧೦ (ಭಾನುವಾರ) ಮಾತ್ರವಲ್ಲ ಪ್ರತೀ ದಿನನೂ ಹ್ಯಾಪಿ ಮದರ್ಸ್ ಡೇ ಅನ್ನುವ ಬಯಕೆ ನನ್ನದು.
ಮಮ್ಮಿ ನಿನ್ನ ತುಂಬಾನೇ ಮಿಸ್ ಮಾಡುತ್ತಿರುವ ನಿನ್ನ ಮುದ್ದಿನ ಮಗಳು ನಾ!!!!

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...