October 7, 2009

ಯಾಂತ್ರಿಕ ಬದುಕಿನತ್ತ ಈ ಜೀವನ


ಬದುಕು ಯಾಕೋ artificial ಅಂತ ಅನಿಸುತ್ತಿದೆ. ಯಾಂತ್ರಿಕ ಬದುಕಿನಿಂದಾಗಿ ನಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೆವೋ ಗೊತ್ತಾಗುತ್ತಿಲ್ಲ. ಕೆಲಸ, ನಿದ್ದೆ, ಓದು, ಊಟ, ಶುಚಿತ್ವ, ಪಯಣ ಹೀಗೆ ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತಿರುವಂತೆ ಭಾಸವಾಗುತ್ತಿದೆ.

Life ಅದೆಷ್ಟು ಯಾಂತ್ರಿಕ/ಕ್ರತಕ ವಾಗಿದೆ ಎಂದರೆ, ನಾವು ಅದೆಷ್ಟೋ ಬಾರಿ ಶಾಪಿಂಗ್ ಮಾಲ್ ಗೆ ಹೊರಟವರು ಅಫೀಸ್ ಕಡೆ ಹೆಜ್ಜೆ ಹಾಕಿಲ್ಲ? ಅಫೀಸ್ ಪಾಸ್ ವರ್ಡ್ ಅನ್ನು personnal Mail ID ಗೆ ಬಳಸಿಲ್ಲ? ಮೊಬೈಲ್ ನಲ್ಲಿ ಅದೆಷ್ಟು ಬಾರಿ deleated items ಗೆ ಹೋಗಿ ನೋಡಿಲ್ಲ?  ನಿದ್ದೆಯಲ್ಲಿ ಅದೆಷ್ಟು ಬಾರಿ office ಗೆ ಹೊತ್ತಾಯಿತು ಎಂದು ಮಧ್ಯರಾತ್ರಿಯಲ್ಲಿ ಎದ್ದಿಲ್ಲ? ಸ್ನೇಹಿತರು ಕರೆ ಮಾಡಿಗಾಗೆಲ್ಲ status report ಏನಾಯಿತು ಎಂಬ ಬಗ್ಗೆ ಅದೆಷ್ಟು ಬಾರಿ ನಾವು ಕೇಳಿಲ್ಲ. ಮೊದಲೆಲ್ಲ sms ಗಳನ್ನು forward ಮಾಡುತ್ತಿದ್ದವರು ಈಗ ಬಂದ sms ಗಳನ್ನು ಓದಲು ಪುರಸೊತ್ತಿಲ್ಲದೇ ಒದ್ದಾಡಿಲ್ಲ? ಅದೆಷ್ಟು ವರ್ಷಗಳಾದವು ಸ್ನೇಹಿತರನ್ನು, ಸಂಬಂಧಿಕರನ್ನು ಬೇಟಿ ಯಾಗದೇ?

ಚಿಕ್ಕಂದಿನಲ್ಲಿ ಕಂಡ ಪುಟ್ಟ ಪುಟ್ಟ ಕನಸುಗಳು ಇನ್ನೂ ಚಿಗುರಲೇ ಇಲ್ಲ!! ನಿಜ ಹೇಳಿ ಅದೆಷ್ಟು ಬಾರಿ ನೀವು office ID ಕಾರ್ಡ್ ಅನ್ನು ಇತರೆ ವಿಷಯಗಳಿಗೆ ತಮಗೆ ಅರಿವಾಗದಂತೆ ಬಳಸಿಲ್ಲ?

ನಮ್ಮ ಕಣ್ಣು ಯಾವಗಲೂ ಕಂಪ್ಯೂಟರ್, ಮೊಬೈಲ್ ಅಥವಾ ಟಿವಿ ಮುಂದೆನೇ ಇರುತ್ತೆ! ಯಾಕೆ ಹೀಗೆ? ಮೊದಲೆಲ್ಲ ಹತ್ತು ಹಲವು ಪುಸ್ತಕಗಳನ್ನು ವಾರದಲ್ಲಿ ಓದಿ ಮುಗಿಸಿದವರು ಇಂದು ಒಂದು ಪುಸ್ತಕವನ್ನು ಮುಗಿಸಲು ಕಡೇಯ ಪಕ್ಷ ೨ ತಿಂಗಳಾದರೂ ಬೇಕು. ನಾವು ಯಾರಿಗಾಗಿ, ಹೇಗೆ, ಯಾಕೆ ಬದುಕುತ್ತಿದ್ದೇವೆ ಎಂಬುವುದನ್ನು ಮರೆತಂತೆ ಮಾಡಿದೆ ಈ ಯಾಂತ್ರಿಕ ಜೀವನ. ಅದು ಏನ್ನನ್ನು ಪಡೆದೆವು/ಗಳಿಸಿದೆವು ಮತ್ತು ಏನನ್ನು ತೊರೆದೆವು ಎಂಬುದನ್ನು ಅರಿಯದಾದೆವು.
ಇನ್ನೆಷ್ಟು ದಿನ ಈ ಯಾಂತ್ರಿಕ ಬದುಕು!!?

August 5, 2009

ಸಂಬಂಧಗಳು ಬೋರು ಅನ್ನಿಸುತ್ತಿವೆಯೇ?

ಸ್ನೇಹವನ್ನು ವರ್ಣಿಸಲು ಪದಗಳೇ ಸಾಲದು. ಸ್ನೇಹಿತರ ದಿನದಂದು ಮಾತ್ರವಲ್ಲದೇ ವರ್ಷಪೂರ್ತಿ ನಮಗೆ ಸ್ನೇಹ ಸಂಬಂಧಿ ಎಸ್ಸೆಮ್ಮೆಸ್ ಗಳು ಬರುತ್ತಲೇ ಇರುತ್ತವೆ. ನಮ್ಮ ಬಾಳ ಪಯಣದಲ್ಲಿ ಅದೆಷ್ಟು ಮಂದಿ ಪರಿಚಿತರಾಗುತ್ತಾರೆ! ಅದರಲ್ಲಿ ಹೆಚ್ಚಿನವರು ಸ್ನೇಹಿತರಾಗಿ ಉಳಿಯುತಾರೆ. ಸ್ನೇಹಿತರಾಗಲು ಯಾವುದೋ ಒಂದು ಚಿಕ್ಕ ವಿಷಯದಿಂದ ಜೊತೆಯಾಗುತ್ತಾರೆ. ಅಷ್ಟೇ ಚಿಕ್ಕ ವಿಷಯಕ್ಕೆ ನಮ್ಮಿಂದ ದೂರವಾಗುತ್ತಾರೆ.


ಕೆಲವೊಮ್ಮೆ ನಾವು ಅವರೊಡನೆ ಅದೆಷ್ಟು ಬಾರಿ ಜಗಳವಾಡಿದರೂ ಸ್ನೇಹ ದೂರವಾಗುವುದಿಲ್ಲ. ದಿನಕ್ಕೆ ನೂರು ಬಾರಿ ಜಗಳ ಕಾದರೂ ಸ್ನೇಹಕ್ಕೆ ಅಡ್ಡಿಯಿಲ್ಲ.


ಸಂಬಂಧಗಳು ಹಲವಿದ್ದರೂ ಇನ್ನೊಂದು ಪ್ರಮುಖ ಹಾಗೂ ಇಂದಿನ ದಿನ ಹೇಳಲೇ ಬೇಕಾದ ಬಾಂಧವ್ಯ ‘ರಾಕಿ’ ಬಗ್ಗೆ. ಅರ್ಥಾತ್ ಅಣ್ಣ ತಂಗಿ ಸಂಬಂಧ. ಈ ಬಾಂಧವ್ಯ ಬಹು ಅಮುಲ್ಯವಾದದ್ದು. ರಾಕಿ ದಿನದಂದು ನಮ್ಮ ದೇಶದಲ್ಲಿ ಅದೆಷ್ಟು ಅಣ್ಣ ತಂಗಿ ಸಂಬಂಧಗಳು ಪ್ರಾರಂಭ ಕಾಣುತ್ತವೆ!. ನಿಜ ಹೇಳಬೇಕೆಂದರೆ ಅಣ್ಣನಿಲ್ಲದ ನನ್ನ ಬಾಳಿಗೆ ಇವತ್ತು ಅಣ್ಣ ಸಿಕ್ಕ. ತುಂಬಾನೇ ಖುಷಿ ಎನಿಸುತ್ತಿದೆ.
ಒಂದಲ್ಲ ಒಂದು ದಿನ ಸಂಬಂಧಗಳು ಬೋರ್ ಅನ್ನಿಸಬಹುದಾ? ನಾವೆಲ್ಲ ಒಂಟಿಯಾಗಿ ಇರಬೇಕು. ಸಂಬಂಧಗಳಿಗೆ ಅರ್ಥ ಕಲ್ಪಿಸಿ ಹೋಗುವುದಕ್ಕಿಂತ ಸಂಬಂಧಗಳಿಂದಲೇ ದೂರವಾದರೆ... ಮಾತೆ ಮರೆದರೆ? ಜೈಲು ಶಿಕ್ಷೆ ಅನುಭವಿಸಿದಂತೆ!! ಸ್ನೇಹಿತರ ದಿನ, ಪ್ರೇಮಿಗಳ ದಿನವನ್ನು ಆಚರಿಸಲು ಭಾರತದಲ್ಲಿ ಅಡೆತಡೆಗಳು ಲೆಕ್ಕವಿಲ್ಲದಷ್ಟಿವೆ. ಅದ್ರೆ ಅಣ್ಣ ತಂಗಿಯರ ದಿನವಾದ ‘ರಕ್ಷಾ ಬಂಧನ’ವನ್ನು ತಡೆಯುವ ಸಾಹಸ ಇಲ್ಲಿಯವರೆಗೂ ಮಾಡಿಲ್ಲ.
ಕೆಲವೊಂದು ಬಾರಿ ಅಣ್ಣ ತಂಗಿಯರ ಸಂಬಂಧವನ್ನು ಅಪಾರ್ಥಮಾಡಿ ಅವರನ್ನು ಪ್ರೇಮಿಗಳನ್ನಾಗಿಸುವುದು ಕೆಲವರಿಗೆ ಅದೇನೂ ಸಂತಸ ಕೊಡುತ್ತೋ!!! ತಿಳಿಯದು. ಒಡವುಟ್ಟಿದವರೇ ಅಣ್ಣ ತಂಗಿಯರಾಗಬೇಕಾ? ಇಲ್ಲವಾದರೆ ಸಹೋದರ ಭಾವನೆ ನಮ್ಮಲ್ಲಿ ಇರುವುದಿಲ್ಲವೇ?

June 5, 2009

ಸಾಧ್ಯವಾದರೆ ಚಿತ್ರದಲ್ಲಿರುವವರನ್ನು ಗುರುತಿಸಿ


double click on the image...
ಗಾಂಧೀಜಿ, ಐನ್ ಸ್ಟೇನ್, ಚಾರ್ಲಿ ಜಾಪ್ಲಿನ್,ಬ್ರೂಸ್ ಲಿ, ಜಾಕಿ ಜಾನ್, ಅಬ್ರಹಾಂ ಮುಂತಾದ ಹಲವು ಪ್ರಮುಖರು ಈ ಚಿತ್ರದಲ್ಲಿದ್ದಾರೆ.

May 7, 2009

ಮಮ್ಮಿ ನಿನ್ನ ಪ್ರೀತಿ ಬಲು ಮಧುರ

ಮಮ್ಮಿ , ಮಮ್ಮಾ, ಮಮ್ಮೇ , ಮಮ್ಮಿ ಡಿ ಸೋಜಾ, ಮದರ್ ಇಂಡಿಯಾ ಹೀಗೆ ಹಲವು ಹೆಸರುಗಳಿಂದ ಅದೆಷ್ಠು ಬಾರಿ ನಾನು ಮಮ್ಮಿನ ಕರೆದರೂ ಪ್ರತಿ ಬಾರಿನೂ ಕರೆಗೆ ಓಗೂಡುವ ನನ್ನ ಮುದ್ದಿನ ಮಮ್ಮಿ ನಿನ್ನ ಬಗ್ಗೆ ನಾ ಏನೆಂದು ಬರೆಯಲಿ? ಹೇಗೆ ವರ್ಣಿಸಲಿ?

ಎಂದೆಂದಿಗೂ ನೀನೇ ನನ್ನ ಬಾಳಿಗೆ ದೀಪ, ಚೇತನ, ದಾರಿ, ಆದರ್ಶವಾದಿ. ಬಹುಶ: ನಿನಗೆ ಮಾತ್ರವೇ ಕಾಣುತ್ತೆ ಮಮ್ಮಿ, ನಾ ಹೇಳದಿದ್ದರೂ ನನ್ನ ಸಂತೋಷ, ನೋವು, ನಲಿವು, ಆನಾರೋಗ್ಯ, ಸಂಭ್ರಮದ ನಿಜ ಅರ್ಥ ತಿಳಿಯುತ್ತದೆ. ನನ್ನನ್ನು ಒಬ್ಬ ಆಪ್ತ ಸ್ನೇಹಿತೆಗಿಂತಲೂ ಹೆಚ್ಚಾಗಿ ಕಂಡವಳು ನೀನು.
ವಿದ್ಯಾಭ್ಯಾಸ, ಅದ ನಂತರ ಉದ್ಯೋಗ ನಿಮಿತ್ತ ನಿನ್ನಿಂದ ದೂರವಾದ ಮೇಲೆ ನಿನ್ನ ತೋಳಿನಲ್ಲಿ ಮಲಗಬೇಕು ಎಂದು ಅನ್ನಿಸಿದ್ದ ದಿನಗಳೆಷ್ಟು!! ಪ್ರತೀ ಒಂದು ವಿಷಯವನ್ನು ಮರೆಯದೆ, ಮರೆಮಾಚದೇ ನಿನ್ನಲ್ಲಿ ಬಿಚ್ಚಿಟ್ಟಾಗಲೇ ಅಲ್ವೇ ನನಗೆ ನೆಮ್ಮದಿ!!
ನೀನು ಜತೆಗಿದ್ದರೆ ನಾನ್ ಸ್ಟಾಪ್ ಮಾತುಗಳು ನನ್ನ ಬಾಯಲ್ಲಿ. ಅದೇಕೋ ಗೊತ್ತಿಲ್ಲ ಯಾವಗಲೂ ಮೌನಿಯಾಗಲು ಬಯಸುವ ನಾನು ನೀನು ಮುಂದಿರುವಾಗ ಅಂತೂ ಪಟ ಪಟ ಅಂತ ಮಾತನಾಡುತ್ತಲೇ ಇರುತ್ತೇನೆ. ನನ್ನ ಮಾತಿನಿಂದ ನೀನು ಯಾವತ್ತೂ ಬೇಸರಗೊಂಡಿಲ್ಲ. ಯಾವುದೋ ಚಿಕ್ಕ ಕಾರಣವನ್ನಿಟ್ಟು ಊಟಮಾಡದೇ ಮಲಗಿದಾಗೆಲ್ಲಾ ‘ನೀನು ಊಟ ಮಾಡಲ್ಲದಿದ್ದರೆ ನನಗ್ಯಾಕೆ’ ಅಂತ ಹೇಳಿ ನನ್ನನ್ನೂ ಊಟ ಮಾಡಿಸಿಯೇ ಮಲಗುತ್ತಿದ್ದೆ. ಅವಗೆಲ್ಲಾ ಅಪ್ಪನೂ ಸಾಥ್ ಕೊಟ್ಟಿದ್ದರಲ್ಲಾ!
ನಿನ್ನ ಆಶೀರ್ವಾದ ನನ್ನ ಜತೆಗಿದ್ದುದರಿಂದಲೇ ಮಮ್ಮಿ ನಾ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದು. ನನಗೆ ಸಿಕ್ಕ ಸ್ಥಾನ ಮಾನಗಳಿಗೆ ನೀನೇ ಸ್ಪೂರ್ತಿ.
ಒಂದು ಸತ್ಯ ಹೇಳ್ತೆನೆ: ಈ ಪ್ರಪಂಚದ ಯಾವುದೇ ಮುಲೆಯಲ್ಲಿ ಹುಡುಕಿದರೂ ನಿನ್ನಂಥ ಮಮ್ಮಿ ಯಾರಿಗೂ ಸಿಗಲ್ಲ. ನೀನು ನನ್ನ ಮೇಲೆ ಇಟ್ಟ ನಂಬಿಕೆ ವಿಶ್ವಾಸಕ್ಕೆ ನಾನು ಅಭಾರಿ. ನಿನ್ನ ಪ್ರೀತಿಗೆ, ತ್ಯಾಗಕ್ಕೆ ಪ್ರತಿಯಾಗಿ ನನ್ನಿಂದ ಏನನ್ನೂ ಕೊಡಲು ಸಾಧ್ಯವಾಗುತ್ತಿಲ್ಲ... ಮಮ್ಮಿ ಮೇ ೧೦ (ಭಾನುವಾರ) ಮಾತ್ರವಲ್ಲ ಪ್ರತೀ ದಿನನೂ ಹ್ಯಾಪಿ ಮದರ್ಸ್ ಡೇ ಅನ್ನುವ ಬಯಕೆ ನನ್ನದು.
ಮಮ್ಮಿ ನಿನ್ನ ತುಂಬಾನೇ ಮಿಸ್ ಮಾಡುತ್ತಿರುವ ನಿನ್ನ ಮುದ್ದಿನ ಮಗಳು ನಾ!!!!

January 30, 2009

ಮೊಗ್ಗಿನ ಮನಸ್ಸು ಚೆನ್ನಾಗಿತ್ತು!!

ಅದೆಷ್ಟೋ ದಿನಗಳು ಕಳೆದ ನಂತರ ಒಂದು ಉತ್ತಮ ಸಿನಿಮಾ ನೋಡಿದ ಅನುಭವ ಮೊಗ್ಗಿನ ಮನಸ್ಸನ್ನು ನೋಡಿದ ಮೇಲಾಯಿತು. ಮೊಗ್ಗಿನ ಮನಸ್ಸು ನೋಡುವ ಹಂಬಲ ನಮ್ಮ ಮನಸ್ಸಿನಲ್ಲಿರಲಿಲ್ಲ ಆದರೂ ಸಮಯ ವ್ಯಯಿಸಲೆಂದು ರೂಮಿನಲ್ಲಿ ಕೂತು ಸಿನಿಮಾ ನೋಡಿದೆವು. ಪಿನ್ ಪಾಯಿಂಟ್ ಸದ್ದಿಲ್ಲದೇ ಎಲ್ಲರೂ ಮೌನವಾಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ಮುಗಿದ್ದದ್ದೇ ತಡ ಎಲ್ಲರೂ ‘ಇದು ಮುಂಗಾರು ಮಳೆಗಿಂತಲೂ ಚೆನ್ನಾಗಿದೆ ಅಲ್ವಾ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಡುಗಳಂತೂ ಸುಪರ್... ಹುಡುಗಿರ ಅಭಿನಯವನ್ನು ಕಂಡು ಹುಡುಗರು (ಯಶ್ ಅಭಿನಯ ಓಕೆ) ಅಭಿನಯ ಕಲಿಯಬೇಕಿತ್ತು. ಸಿನಿಮಾದಲ್ಲಿ ಹುಡುಗರ ನಟನೆ ನಾಟಕೀಯವಾಗಿತ್ತು ಎಂಬುದರ ಹೊರತು ಎಲ್ಲವೂ ಸುಪರ್... ಕ್ಯಾಮೆರಾ ವನ್ನು ಮಂಗಳೂರಿಗೆ ಒಂದು ಬಾರಿ ಹೋಗುವಂತೆ ಪ್ರಚೋದಿಸುತ್ತದೆ.

ಹೆಣ್ಣಿನ ಮನಸ್ಸು, ಅವಳ ಪ್ರತಿನಿತ್ಯದ ಬದುಕನ್ನು ಚೆನ್ನಾಗಿ ಬಿಂಬಿಸಿದ ‘ಮೊಗ್ಗಿನ ಮನಸ್ಸು’ ನಮ್ಮ ಮನಸ್ಸನ್ನು ಗೆದ್ದಿದೆ. ನಿರ್ದೇಶಕರಿಗೆ ಅನಂತ ವಂದನೆಗಳು. ಇಂಥಹ ಉತ್ತಮ ಕಥೆಯನ್ನು ಆಯ್ಕೆ ಮಾಡಿ ನಮಗೆ ತೋರಿಸಿದ ಸಿನಿಮಾ ನಿರ್ಮಾಪಕ ಹಾಗೂ ತಂಡಕ್ಕೆ ಅಭಿನಂದನೆಗಳು. ಸಿನಿಮಾ ನೋಡಿದ ಮೇಲೆ ಅದೆಷ್ಟೊ ಬಾರಿ ಅಂದು ಕೊಂಡಿದ್ದೆ. ನನ್ನ ಬ್ಲಾಗ್ ನಲ್ಲಿ ಮೊಗ್ಗಿನ ಮನಸ್ಸಿನ ಕುರಿತು ಬರೆಯಬೇಕೆಂದು... ಇಂದು ಸಮಯ ಸಿಕ್ಕಿತು.


ಧನ್ಯವಾದಗಳು!!

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...