October 1, 2017

ವಿದಾಯ ಹೇಳಬಂದಾಗ ಕಾಡುವ ಸವಿನೆನಪು

ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ.
ಹೌದು. ಇದು ವಿದಾಯ ಹೇಳುವ ಸಮಯ....
ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾಗ್ ಸ್ನೇಹಿತರಿಗಾಗಲಿ ವಿದಾಯ ಹೇಳುತ್ತಿಲ್ಲ! ಹೇಳುವುದೂ ಇಲ್ಲ. ಏಕೆಂದರೆ ಬ್ಲಾಗ್ ನನ್ನ ಒಂಟಿತನವನ್ನು ದೂರವಿರಿಸಲು ನಾನು ಕಂಡುಕೊಂಡ ಹೊಸ ವಿಧಾನ.
ಸ್ನೇಹ ಮಾಡಬಾರದು. ಮಾಡಿದ ಕೆಲವು ತಿಂಗಳುಗಳಲ್ಲೇ ದೂರವಾಗುವ ಸನ್ನಿವೇಷ ಬಂದಾಗ ತುಂಬಾನೇ ಬೇಜಾರಾಗುತ್ತದೆ ಎಂಬ ಅರಿವಿದ್ದರೂ ಮತ್ತೆ ಬೇಡ ಬೇಡವೆಂದರೂ ಇತರರ ಒಳ್ಳೆಯತನಕ್ಕೆ ಮರುಳಾಗಿ ಸ್ನೇಹಿತರಾಗುತ್ತೇವೆ. ಕಾಲೇಜು ಸಂದರ್ಭದಲ್ಲಿ ಅದೆಷ್ಟು ಸಂತೋಷದಿಂದಿದ್ದೇವೊ ಅದನ್ನು ಮರು ನೆನಪಿಸಲು ಪಿಜಿ ಸ್ನೇಹಿತರು ನನಗೆ ಜತೆಯಾದರು.

ಜತೆಜತೆಯಲ್ಲೇ ತಿರುಗಾಟ(ಬೆಂಗಳೂರಿನ ಎಲ್ಲಾ ಶಾಪಿಂಗ್ ಷಾಪ್ ಗಳು), ಧರ್ಮ ಬೇರೆಯಾದರೂ ದರ್ಗ, ದೇವಸ್ಥಾನ ಗಳಿಗೆಲ್ಲಾ ಮುರು ಧರ್ಮದವರೂ ಜತೆಯಾಗಿ ಹೋಗಿ ಇತರರನ್ನು ಹೊಟ್ಟೆ ಉರಿಸಿದ್ದು, ಬೆಳಿಗ್ಗೆ ಜಗಳವಾಡಿ ರಾತ್ರಿ ಜತೆಯಾಗಿ ಊಟಮಾಡಿದ್ದು, ನಾನ್ ವೆಚ್ ಗಾಗಿ ಎಲ್ಲೆಡೆ ಹೋದದ್ದು, ಬೇಡ ಬೇಡವೆಂದರೂ ಪ್ರತಿ ಶನಿವಾರ ಚಿಕನ್ ತರಿಸಿ ತಿಂದದ್ದು, ಗೋಳಾಡಿಸಿದ್ದು, ಹೊಸ ವರ್ಷ, ಕ್ರಿಸ್ಮಸ್ ಸಂಭ್ರಮವನ್ನು ರಾತ್ರಿ ೧೨ರ ನಂತರನೂ ಡ್ಯಾನ್ಸ್ ಜೊತೆಗೆ ಸಂಭ್ರಮಿಸಿದ್ದು, ಹುಟ್ಟಿದ ಹಬ್ಬಗಳ ಭರ್ಜರಿ ಪಾರ್ಟಿ... ಹೋಲಿ ದಿನವನಂತೂ ಮರೆಯಲ್ಲಿಕ್ಕೇ ಸಾಧ್ಯವಿಲ್ಲ. ರಾತ್ರಿಯಿಡೀ ರೇಡಿಯೋ ಆನ್ ಇಟ್ಟು ಮಲಗಿದ್ದು, ಫೂಲ್ ಮಾಡೋಕೆ ಹೋಗಿ ನಾನೇ ಫೂಲ್ ಆದದ್ದು... ಎಲ್ಲವೂ ಇನ್ನು ಬರಿಯ ಸವಿನೆನಪು ಮಾತ್ರ.


ಕಣ್ಣೀರು, ಸಂತೋಷ ಎಲ್ಲವನ್ನು ಸಮನಾಗಿ ಹಂಚಿದ್ದು!! ಗೆಳತಿ ಹೇಗೆ ಮರಿಯಲಿ ನಾ! ಅ ಮಧುರ ದಿನಗಳನ್ನು! ಮಧುರ ಕ್ಷಣಗಳನ್ನು!


ನನಗೆ ಗೊತ್ತು ಇನ್ನು ನಮ್ಮ ಸ್ನೇಹ ಬರಿಯ ಫೋನ್ ಕರೆಗಳಿಗೆ, ಎಸ್ಎಂಎಸ್ ಮತ್ತು ಮೇಲ್ ಸಂದೇಶಗಳಿಗೆ ಮಾತ್ರ ಮೀಸಲೆಂದು.
ಗೀ, ನಿಧಿ ನನ್ನ ಬಿಟ್ಟು ಬೆಂಗಳೂರನ್ನು ತೊರೆದು ಹೋದಾಗ ನಾನು ಭಾಗಶ: ಮೌನಿ ಯಾಗಿದ್ದೆ. ಅದು ಅನಿರೀಕ್ಷಿತ ಅಘಾತವಾಗಿತ್ತು. ಜತೆಯಾಗಿ ಇರುತ್ತೇವೆ ಅಂದುಕೊಂಡದ್ದು ಸಾಧ್ಯವಾಗಲೇ ಇಲ್ಲ. ಬದಲಾವಣೆಯನ್ನು ಬಯಸಿ ಅವರು ದೂರವಾದರು.

ಈಗ, ನಾz, ಪ್ರೀತಿ, ಅನಿ ಎಲ್ಲರೂ ಜೀವನದ ಪಯಣದ ಮಹತ್ತರ ಬದಲಾವಣೆಯ ಉದ್ದೇಶವಾಗಿ ರೂಮನ್ನು, ಬೆಂಗಳೂರಿನ ಈ ಪ್ರಪಂಚವನ್ನು ತೊರೆದು ತಮ್ಮ ಊರಿಗೆ ತೆರಲುತಿದ್ದಾರೆ. ಬೇಡ ಅನ್ನಲೇ... ಅದೇಗೆ ತಡೆಯಲಿ ಅವರನ್ನು...?

ನಾವಂದು ಕೊಂಡ ಹಾಗೇ ಯಾವುದೂ ಸಾಧ್ಯವಿಲ್ಲ... ಪುಸ್ತಕದ ಹುಳುವಾಗಿದ್ದ ನಾ ಪುಸ್ತಕವನ್ನೇ ಮರೆತಿದ್ದೆ! ಬರಹಗಳೆಲ್ಲಾ ಮರೆತೇ ಹೋಗಿತ್ತು. ಈಗ ಮತ್ತೆ ಪ್ರಾರಂಭಿಸಬೇಕು... ಒಂಟಿತನ ದೂರವಾಗಿಸಬೇಕು...

ಇರಲಿ ನೆನಪಿರಲಿ ನಮ್ಮ ಗೆಳೆತನದ ಸವಿ ನೆನಪಿರಲಿ. ಈ ನೆನಪೇ ಶಾಶ್ವತವೂ ಅದುವೇ ಚಿರ ನೂತನವೂ... ಮನು ಗುನು ಗುನುಡುತ್ತಿದ್ದ ಹಾಡು ಮತ್ತೆ ನೆನಪಾಗುತ್ತಿದೆ.

ಮಾತುಗಳು

ಕಳೆದು ಹೋದ ನಿನ್ನೆಗಳ ಕುರಿತು ಕೊರಗಬೇಡಿ. ನಾಳೆಗಳು ಬರಬಹುದು. ಆದರೆ ಇಂದು ಇಂದಿಗೆ ಮಾತ್ರ. ಅದನ್ನು ತಪ್ಪಿಸಿಕೊಳ್ಳಬೇಡಿ. ಅನುಭವಿಸಿ, ಖುಷಿಪಡಿ.

ಇನ್ನೊಬ್ಬರು ನಿಮಗೆ ನೋವುಂಟು ಮಾಡಿದಾಗ ಬೇಸರಿಸಿ ಕೊಳ್ಳಬೇಡಿ. ಯಾಕೆಂದರೆ, ಸಿಹಿಯಾದ ಹಣ್ಣುಗಳನ್ನು ನೀಡುವ ಮರಕ್ಕೇ ಹೆಚ್ಚಿನ ಕಲ್ಲೇಟು ಬೀಳುವುದು.

ಒಂದೇ ತಾಯಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸಹಜವಾಗಿರುವಾಗ, ಬಸ್ಸಿನಲ್ಲಿ, ಕಚೇರಿಯಲ್ಲಿರುವವರ ಜತೆಯು ಅದು ಸಹಜ. ಭಿನ್ನಾಭಿಪ್ರಾಯ ಬಂತೆಂದು ಮನೆ ಮುರಿಯಲಾಗುವುದಿಲ್ಲ. ಹಾಗೆಯೇ ಮನಸ್ಸನ್ನೂ ಮುರಿದುಕೊಳ್ಳಬಾರದು.

ಬಹುಶ: ನೇಮಿಚಂದ್ರ ಬರೆದಂತಹ ವಾಕ್ಯಗಳಿರಬಹುದು  

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...