June 22, 2010

ಐಶ್ವರ್ಯ ರೈ ಅಂದಾಕ್ಷಣ...

ತನ್ನ ಎರಡು ನೀಲಿ ಬಣ್ಣದ ಕಣ್ಣುಗಳಿಂದ ಜಗ್ಗತ್ತನ್ನು ಸೂರೆಗೊಂಡ ಮಂಗಳೂರು ಬೆಡಗಿ, ಆಕೆ ಸೌಂದರ್ಯದ ರೂಪಕಿ, ಬಾಲಿವುಡ್ ತಾರೆ, ಅಭಿಷೇಕ್ ಮಡದಿ ಹೀಗೆ ಸಾವಿರಾರು ಬಗೆಯ ಅಭಿಪ್ರಾಯಗಳು ಐಶ್ವರ್ಯ ರೈ ಬಗ್ಗೆ ಬರೆಯಿರಿ ಎಂದಾಕ್ಷಣ ನಮ್ಮುಂದೆ ಬರುತ್ತವೆ.

ಆದರೆ!! ಇಲ್ಲಿ ನೋಡಿ ಕೆಲವು  ಜನರ ಅನಿಸಿಕೆಗಳು! ಕುತೂಹಲಕಾರಿಯಾಗಿವೆ!!

  • ದೇವರೂ ಇತ್ತೀಜೆಗೆ ತೀರಾ ಸ್ವಾರ್ಥಿಯಾಗಿಬಿಟ್ಟ,
          ಸೌಂದರ್ಯ, ಹೆಸರು, ಕೀರ್ತಿ, ವೈಡೂರ್ಯ, ಸಂಪತ್ತು ಎಲ್ಲವನ್ನೂ ಒಂದೆಡೆ ಸುರಿದು ಬಿಟ್ಟ.

  • ಸೌಂದರ್ಯವೆನ್ನುವುದು ಒಂದು ಮಳೆಯಂತೆ
         ಕೆಲವೊಮ್ಮೆ ಅತಿವ್ರಷ್ಠಿ

         ಇನ್ನು ಕೆಲವೊಮ್ಮೆ ಅನಾವ್ರಷ್ಠಿ
        
         ಎರಡೂ ತೊಂದರೇನೆ...

ಐಶ್ವರ್ಯವೆಂದರೆ, ಬಂಡವಾಳಶಾಹಿಗಳು ತಮ್ಮ ಟೂತ್ ಪೇಶ್ಟ್, ಒಡವೆ, ಸಾಬೂನು, ವಸ್ತ್ರ
ಮುಂತಾದವುಗಳನ್ನು ಮಾರಾಟ ಮಾಡಲು ಬಳಸುವ ಒಂದು ಅಸ್ತ್ರ!!

ಅವಳದೇನು ಸೌಂದರ್ಯ ಬಿಡಿ!
ಅವಳಿಗಿಂತಲೂ ಸುಂದರಿಯರು ನಮ್ಮ ಸ್ಲಂಗಳಲ್ಲಿ ಹಲವರಿದ್ದಾರೆ.
ಅದರೇನು ಮಾಡುವುದು ಅವರಿಗೆ ಮುಖ ತೊಳೆಯಲು ನೀರಿಲ್ಲವಾಗಿದೆ.

ನಿಮಗೇನು ಅನ್ನಿಸುತಿದೆ???

February 16, 2010

ಯಾವ ಊರು ಚೆಂದ?

ನಮ್ಮ ದುಂಡಿರಾಜ್ ಅವರು ಬರೆದ ನಮ್ಮೂರು ಚೆಂದನೋ ನಿಮ್ಮೂರು ಚೆಂದನೋ? ಕವನವನ್ನ ಇತ್ತೀಜೆಗೆ ಪ್ರಜಾವಾಣಿಯಲ್ಲಿ ಓದಿದೆ. ದುಂಡಿರಾಜ್ ಅವರ ಕವನ/ಹನಿಗವನಗಳನ್ನು ಓದುವಾಗ ಅದೆನೋ ಖುಷಿ... ತುಂಬಾ ಸೊಗಸಾಗಿ ಬರೆಯುವ ಅವರು ಓದುಗರಲ್ಲಿ ಮುಗುಳು ನಗೆ ಮುಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಅವರದೊಂದು ಗೀತೆ ಹೀಗಿದೆ:
(ಧಾಟಿ: ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು)
ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಮಂಗ್ಳೂರೋ, ನಿಮ್ಮುರು ಬೆಂಗ್ಳೂರೋ
ಚೆಂದ ನಿನಗಾವುದೆಂದು

ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ
ಎಂದೆನ್ನ ಕೇಳಬೇಕೆ?
ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು
ವಿಸ್ತರಿಸಿ ಹೇಳಬೇಕೆ?
ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ
ಫೋನಲ್ಲಿ ಚರ್ಚೆ ಏಕೆ?
ರಜೆ ಹಾಕಿ ಬಂದು ಬಿಡಿ ಎಂದಳಾಕೆ?

ಬೆಂಗ್ಳೂರು ರಸ್ತೆಯಲಿ ಬಸ್ಸುಗಳು ಕಾರುಗಳು
ಲಾರಿಗಳು ಸಾಲು ಸಾಲು ಬಸ್ಸು ಲಾರಿಗೆ ಬಡಿದು
ಮುಸುಡಿ ಸೀಟಿಗೆ ಹೊಡೆದು
ಉದುರಿ ಹೋಗುವುದು ಹಲ್ಲು

ಶಿರಾಡಿ ಘಾಟಿಯಲಿ ಎಷ್ಟೊಂದು ಹೊಂಡಗಳು
ಗಬ್ಬೆದ್ದು ಹೋಗಿ ರೋಡು
ಉದ್ದಕ್ಕೂ ಕುಲುಕಾಟ ಬೆನ್ನು ಮೂಳೆಗೆ ಏಟು
ಯಾರಿಗೂ ಬೇಡ ಪಾಡು

ಬೆಂಗ್ಳೂರಿನಲ್ಲೀಗ ವಿಪರೀತ ಟ್ರಾಪಿಕ್ಕು
ಓಡಾಟ ದೊಡ್ಡ ಗೋಳು
ಬೆಂಗ್ಳೂರಿಗಿಂತಲೂ ಮಂಗ್ಳೂರೆ ಸುಖವೆಂದು
ಅನ್ನಿಸದೆ ಸತ್ಯ ಹೇಳು
ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ ಸುಮ್ಮನೆ ವಾದವೇಕೆ?
ಸಾಕು ಬಿಡಿ, ಫೋನು ಇಡಿ ಎಂದಳಾಕೆ

February 5, 2010

ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...

ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ ಹಠಾತ್ತ್ ಆಗಿ ಅನಿ ತಾನು ಇಂದು ಸ್ನೇಹ ಜೊತೆ ಸಿ ಎಂ ಅನ್ನು ಭೇಟಿ ಆಗಲು ಹೋಗುತ್ತೇನೆ ಎಂದಾಗ ಆವಕ್ಕಾದೆ!
ಆಫೀಸ್ ಕೆಲಸ ಮುಗಿಸಿ ಸಿ ಎಂ ಭೇಟಿ ವಿವರ ಕೇಳಲು ಹಾತೊರೆಯುತ್ತಿದ್ದ ನಾನು ಸಾಯಂಕಾಲ ರೂಮ್ ಗೆ ಹೋದಾಗ ಅನಿ ಟೀ ಕುಡಿಯುತ್ತಾ ಟಿವಿ ಮುಂದೆ ಕುಳಿತಿದ್ದಳು.

"ಒಳಗೆ ಬಾ" ಎಂದು ಕರೆದು ಅವಳಲ್ಲಿ "ಹೇಗಿತ್ತು ಅನುಭವ" ಎಂದು ಕೇಳಿದಾಗ, ಯಾವಗಲೂ ಬಿ ಜೆ ಪಿ ಯನ್ನು ಹೊಗಳುತ್ತಿದ್ದ ಸುಬ್ಬಿ, ಯುಡಿಯುರಪ್ಪರನ್ನ ಸರಿಯಾಗಿ ಬೈದಳು. ‘ಯಾಕಲೇ ಏನಾಯಿತು? ಎಂದು ಕೇಳಿದಾಗ, "ಸ್ವಲ್ಪ ಮಾನವೀಯತೆನೂ ಇಲ್ಲ ಅವರಿಗೆ... ಸಿ ಎಂ ಅಂತೆ ಸಿ ಎಂ... ಜನರನ್ನು ಹೇಗೆ ಮಾತನಾಡಿಸಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಯಲ್ಲ ಅವರಿಗೆ. ಅವರಿಗಿಂತ ಅವರ ಸೆಕ್ರೆಟರಿ ಅವರನ್ನು ಸಿ ಎಂ ಮಾಡುತ್ತಿದ್ದರೆ ನಮ್ಮ ಕರ್ನಾಟಕ ಉದ್ದಾರವಾಗುತ್ತಿತ್ತೋ ಏನು... at least ಜನ ಸಮಾನ್ಯ ಮಾತನಾಡಿದ್ದ ಇಂಗ್ಲಿಷ್ ಅವರಿಗೆ ಅರ್ಥ ವಾಗಲ್ಲ...’ ಹೀಗೆ ಉಸಿರು ಬಿಡದೇ ಬೈಯುತ್ತಿದ್ದಳು.  (ಅವಳು ಅಲ್ಲಿ ಕಂಡಂತಹ ಪ್ರತಿಯೊಂದು ದ್ರಶ್ಯವನ್ನು ವಿವರಿಸ ಹೊರಟರೆ ಮಿನಿ ಧಾರವಾಹಿ ಆಗಿ ಹೋಗುತ್ತೆ...ಅವರೇನೂ ಸಿ ಎಂ ಅವರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿಲ್ಲ... ತಮ್ಮ ಸಮಸ್ಯೆಯ ಕೆಲವು ಪದಗಳನ್ನು ಇಂಗ್ಲಿಷ್ ನಲ್ಲಿ ಬಳಸಬೇಕಾಯಿತು)

"ಕರ್ನಾಟಕದವರಾಗಿ ಕನ್ನಡ ಮಾತನಾಡಿ ಎಂಬರ್ಥದಲ್ಲಿ ಅವರು ವರ್ತಿಸಿರಬಹುದು’ ಎಂದು ನಾನು ಸಮಜಾಯಿಸಿ ನೀಡಲು ಹೋದರೆ, "ಇಲ್ಲ... ಅಂಥನೇನಾಗಿರುತ್ತಿದ್ದರೆ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೆ. ನಿಮ್ಮ ಸಮಸ್ಯೆನಾ ಕನ್ನಡದಲ್ಲೇ ಹೇಳಿ... ಅಥವಾ ಕರ್ನಾಟಕದಲ್ಲಿ ಕನ್ನಡ ಮಾತನಾಡಿ’ ಎಂದು ಹೇಳಿದರೆ ನಾವು ಸಂತೋಷವಾಗಿ ಮಾತನಾಡುತ್ತಿದ್ದೇವು. ಅದರೆ ಅವರ ಮಾತಿನ ಶೈಲಿ ಚೆನ್ನಾಗಿರಲಿಲ್ಲ. ಅವರು ಪಕ್ಕದಲ್ಲಿದ್ದವರಲ್ಲಿ ಇಂಗ್ಲಿಷ್ನಲ್ಲಿದ್ದುದನ್ನು ಕನ್ನಡಕ್ಕೆ ಭಾಷಾಂತರಿಸಲು ಹೇಳಿದರು.’ "ಛೆ! ಸರಿಯಾಗಿ ವ್ಯವಹರಿಸಲು, ಗೌರವದಿಂದಲು, ಹೆಣ್ಣು ಮಕ್ಕಳನ್ನು ಅದೆಷ್ಟು ಕೇವಲವಾಗಿ ನೋಡುತ್ತಾರೆ ಗೊತ್ತಾ... ?’ "ಬಿಡು ನಾನು ಅಪ್ಪಂಗೆ ಹೇಳ್ತೆನೆ ಅವರಿಗೆ ಓಟು ಕೊಡಬೇಡಿ ಅಂತ. ಅವರಿಗೆ ಓಟು ಬೇಕಾದಾಗ ಜಾತಿ, ಮತ, ಭಾಷೆ, ಸ್ತ್ರೀ ಪುರುಷ ಎಲ್ಲರೂ ಒಂದೇ... ಆದರೆ ಸಹಾಯ ಕೋರಿ ಹೋದಾಗ ಅಲ್ಲಿದ್ದವರನ್ನು ಎಷ್ಟು ಕೇವಲವಾಗಿ ನೋಡುತ್ತಿದ್ದರು ಗೊತ್ತಾ? ಒಬ್ಬಾಕೆಗೆ ನಿಮ್ಮ ಪತಿ ಏನು ಸರ್ಕಾರಿ ಕೆಲಸದಲ್ಲಿದ್ದಾನ ಎಂದು ಕೇಳಿದ್ದರು. ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರವೇ ಅವರಿಗೆ ಸಹಾಯ ಮಾಡುತ್ತಾರಂತೆ! ಓಟು ಕೇಳಲು ಬರುವಾಗ ಮಾತ್ರ ಇವರಿಗೆ ಬರಿಯ ಸರ್ಕಾರಿ ಕೆಲಸದಲ್ಲಿದ್ದವರು ಓಟು ಕೋಡೋರೆನು?’ ಅನಿ ನಾನ್ ಸ್ಟಾಪ್ ಆಗಿ ಸಿ ಎಂನ ಗುಣಗಾನ ಮಾಡುತ್ತಿದ್ದಳು. ಸ್ನೇಹಳಂತೂ ಮಿರರ್ ಇಮೇಜ್ ಬಗ್ಗೆ ಹೇಳಿ ವ್ಯಂಗದೊಂದಿಗೆ ಹಾಸ್ಯ ಸೇರಿಸಿ ಮಾತು ಮರೆತಳು. ಅವಳಿಗೆ ಯುಡಿಯುರಪ್ಪರಿಂಗ ಕುಮಾರಸ್ವಾಮಿ/ ದೇವೆಗೌಡನೆ ಪರವಾಗಿಲ್ವೇನೊ ಅಂತ ಅನಿಸುತ್ತಿದೆ.

ಹೋದ ಕೆಲಸವಂತೂ ಆಗಲ್ಲ... ಅದ್ರೆ ನಮ್ಮ ರಾಜಕಾರಣಿಗಳು ಕ್ಯಾಮೆರಾ, ಮಾಧ್ಯಮಗಳ ಮುಂದೆ ಹೇಗೆ ವರ್ತಿಸುತ್ತಿದ್ದಾರೆ, ಕ್ಯಾಮೆರಾ/ಮಾಧ್ಯಮಗಳ ಹಿಂದೆ ಹೇಗೆ ವರ್ತಿಸುತ್ತಿದ್ದಾರೆ ಎಂದು ತಿಳಿಯಿತು. ಸುವರ್ಣ ಚಾನೆಲ್ನಲ್ಲಿ ಯುಡಿಯುರಪ್ಪ-ರಮ್ಯಾ ಸಂಭಾಷಣೆ ಕಂಡು ಗ್ರೇಟ್ ವ್ಯಕ್ತಿ ಎಂದು ತಿಳಿದ್ದಿದ್ದ ನನಗೆ ನಿಜ ವ್ಯಕ್ತಿತ್ವ ಕಂಡು ನಿಜಕ್ಕೂ ಬೇಸರವಾಯಿತು. ತಪ್ಪು ಮಾಡದವರು ಯಾರಿದ್ದಾರೆ?...
‘ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ?’ ಎನ್ನುವ ಆಕೆಯ ಪ್ರಶ್ನೆಗೆ ಉತ್ತರ ನಾನಿನ್ನೂ ನೀಡಿಲ್ಲ...
(ಒಬ್ಬರನ್ನ ಹೊಗಳಿ, ಮತ್ತೊಬ್ಬರನ್ನ ತೆಗಳುವ ಉದ್ದೇಶ ನನ್ನದ್ದಲ್ಲ)

February 3, 2010

ಕಾಯ್ನ್ ಬಾಕ್ಸ್ ಮಾಯ, ಈಗ ಮೊಬೈಲ್ ಮಯ

ಒಂದೆರಡು ವರ್ಷಗಳ ಹಿಂದೆ ಎಲ್ಲೆಂದರಲ್ಲಿ ಕಾಯ್ನ್ ಬಾಕ್ಸ್ ಗಳು ಕಂಡು ಬರುತ್ತಿದ್ದವು. ಮರಗಳಲ್ಲಿ, ಬಸ್ ಸ್ಟಾಪ್ ಗಳಲ್ಲಿ, ಬೀದಿ ದೀಪಗಳ ಕಂಬಗಳಲ್ಲಿ, ಗುಡ್ಡಗಳಲ್ಲಿ, ಅಂಗಡಿಗಳಲ್ಲಿ, ಮನೆಗಳಲ್ಲಿ... ಹೀಗೆ ಎಲ್ಲೆಡೆಯಲ್ಲೂ ಕಾಯ್ನ್ ಬಾಕ್ಸ್ ಗಳು ರಾರಾಜಿಸುತ್ತಿದ್ದವು. ಆದರೀಗ ಕಾಲ ಬದಲಾಗಿದೆ. ಕಾಯ್ನ್ ಬಾಕ್ಸ್ ಗಳು ಮಾಯವಾಗಿವೆ. ಬದಲಾಗಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್! ಮೊಬೈಲ್ ಅದೆಷ್ಟು ನಮ್ಮನ್ನು ಆವರಿಸಿ ಕೊಂಡು ಬಿಟ್ಟಿವೆ ಎಂದರೆ, ಬೆಳಿಗ್ಗೆ ಏಳುವಾಗ, ಎದ್ದ ಮೇಲೆ... ಕೊಣೆಗೆ ಮಲಗುವಾಗಲೂ ಮೊಬೈಲ್ ಬೇಕು. ಎಸ್ಸೆಮ್ಮೆಸ್, ಗೇಮ್ಸ್, ರೇಡಿಯೋ, ಫೋಟೊ, ವಿಡಿಯೋ, ಸುದ್ದಿ, ಭವಿಷ್ಯ, ಉದ್ಯೋಗ ಹುಡುಗಾಟ, ಮೇಲ್, ರೆಕಾರ್ಡಿಂಗ್, ಕ್ಯಾಲ್ಕುಲೇಟಿಂಗ್, ಅಂತರ್ಜಾಲ... ಹೀಗೆ ಎಲ್ಲವನ್ನೂ ಕೇವಲ ಒಂದು ಚಿಕ್ಕ ಮೊಬೈಲ್ ಮುಖಾಂತರ ಬಳಸಬಹುದಾಗಿದೆ. ಅಲ್ಲದೇ ಇತ್ತಿಚೆಗೆ ಪ್ರಮುಖ ಕಂಪೆನಿಗಳಾದ ರಿಲಾಯನ್ಸ್, ಎರ್ಟೆಲ್, ವೊಡಫೋನ್, ಎರ್ಸೆಲ್, ಬಿಎಸ್ಸೆನ್ನೆಲ್, ಯುನಿನಾರ್, ಟಾಟಾ ಟೆಲಿ, ಡೊಕೊಮೊ... ಅಮೋಘವಾದ ಕೊಡುಗೆಗಳನ್ನು ನೀಡುತ್ತಿದ್ದು, ಮೊಬೈಲ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಒಬ್ಬರಲ್ಲಿ ೪ ರಿಂದ ೫ ಮೊಬೈಲ್ ಗಳಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ... ಏಕೆಂದರೆ ಇದು ಮೊಬೈಲ್ ಯುಗ...

ಮೊಬೈಲ್ ಬಳಕೆಯಿಂದ ಇ-ತ್ಯಾಜ್ಯ ಹೆಚ್ಚಳವಾಗುತ್ತೆ, ಇದು ನಮ್ಮ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿಕಾರಕವಾಗಿದೆ ಎಂಬುವುದನ್ನು ಮರೆಯಬಾರದು.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...