'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ಹೆಣ್ಣು / ಮಹಿಳೆಯು ತನಗೊಂದು ಸ್ವತಂತ್ರ ಬೇಕೆಂದು ಬಯಸುತ್ತಾಳೆ. ಬಹುಮುಖ್ಯವಾಗಿ ಪುರುಷ ಸಮಾಜದ ಸರಪಳಿಯಿಂದ ಹೊರಗೆ ಬರಲು ಆಶಿಸುತ್ತಾಳೆ. ಪ್ರತಿದಿನ / ಪ್ರತಿಕ್ಷಣ ಆಕೆ ಪಡುವ ಮಾನಸಿಕ, ದೈಹಿಕ ಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಪ್ರಯತ್ನಿಸುತ್ತಾಳೆ.
'ಅಮ್ಮಚ್ಚಿಯೆಂಬ ನೆನಪು' ಸಿನಿಮಾದಲ್ಲಿ ಹಲವು ಸ್ತ್ರೀಯರಿದ್ದಾರೆ. ಪ್ರತಿಯೊಬ್ಬರ ಬದುಕಿನ ಪಯಣದಲ್ಲೂ ಒಂದೊಂದು ದುಃಖದ ಕಥೆಯಿದೆ. ಒಂದೊಂದು ಹೋರಾಟದ ಕಾದಂಬರಿಯಿದೆ. ನೆರೆಹೊರೆಯ ಮತ್ತು ಸಾಮಾಜಿಕ ಕಶ್ಟಗಳಿಗಿಂತ ಕೌಟಿಂಬಿಕ ಯುದ್ಧ ಗೆದ್ದ ಖುಷಿಯಿದೆ. ಹಲವು ದುಃಖಗಳ ನಡುವೆ ಗೆಲುವಿನ ನಗೆ ಕೆಲವೆಡೆ ಇದೆ.

ಈ ಸಿನಿಮಾದಲ್ಲಿ ಪುಟ್ಟಮ್ಮ, ಅಕ್ಕು, ಸೀತೆ, ಮತ್ತು ಅಮ್ಮಚ್ಚಿ ಪ್ರಮುಖ ಪಾತ್ರಗಳು.
'ಪುಟ್ಟಮ್ಮತ್ತೆ' ಬಾಲ್ಯದಲ್ಲಿ ತನ್ನ ಕಣ್ಣ ಮುಂದೇ ಪಾಪಿ ಸೋಮಾರಿ ತಂದೆಯಿಂದಾದ ಪ್ರೀತಿಯ ತಾಯಿಯ ಅಂತ್ಯ ಹಾಗೂ ತದ ನಂತರ ನೆರೆಹೊರೆಯ ಅಜ್ಜಿಯ ಮಮತೆಯಲ್ಲಿ ಬೆಳೆದ ಪುಟ್ಟಮ್ಮತ್ತೆ ಹದಿಹರೆಯಕ್ಕೆ ಬಂದಾಗ ಅಜ್ಜಿಯ ಮರಣ, ಮುಂದೇ ಮದುವೆಯಾಗಿ ಒಂದು ಮಗುವಿನ ಜನನ, ಪತಿಯ ಮರಣ. ವಿಧವೆ ಎಂದು ಎಲ್ಲರಿಂದ ಅನ್ನಿಸಿಕೊಂಡು ಬಹಳಷ್ಟು ಕಷ್ಟಗಳೊಂದಿಗೆ ಮಗಳನ್ನು ಸಾಕಿ ಆಕೆಗೊಂದು ಮಧುವೆ ಮಾಡಿ ಮೊಮ್ಮಗಳಿಗೆ ಜನ್ಮ ಕೊಡುವ ಸಂಧರ್ಭದಲ್ಲಿ ಪುಟ್ಟಮ್ಮತ್ತೆ ತನ್ನ ಮಗಳನ್ನು ಕಳೆದು ಕೊಳ್ಳುತ್ತಾಳೆ. ಮತ್ತೆ ಮೊಮ್ಮಗಳನ್ನು ಸಾಕುವ ಜವಾಬ್ದಾರಿ ಹೊತ್ತ ಪುಟ್ಟಮ್ಮತ್ತೆ ತನ್ನ ಎಂದಿನ ಕೆಲಸವನ್ನು ಪುನರುವರ್ತಿಸುತ್ತಾಳೆ ತನ್ನ ಹಸಿವು ಮತ್ತು ಬಾಯಾರಿಕೆಯನ್ನು ತನ್ನ ಹೃದಯದಲ್ಲಿ ಬಚ್ಚಿಟ್ಟು.
'ಅಕ್ಕು' ಮದುವೆಯಾಗಿ ಗರ್ಭಿಣಿಯಾದರೂ ಮಗುವಿಗೆ ಜನ್ಮಕೊಡುವ ಭಾಗ್ಯವನ್ನು ಪಡೆದಿರುವುದಿಲ್ಲ. ಇತ್ತ ಪತಿಯೂ ತನ್ನಿಂದ ದೂರವಾಗುತ್ತಾನೆ. ತದ ನಂತರ ಮಾನಸಿಕ ಅಸ್ವಸ್ಥೆಯಾಗಿ ಎಲ್ಲರಿಂದ ಬೈಗುಳ ಜೊತೆಗೆ ಮೈದುನನಿಂದ ಹೊಡೆತ ತಿನ್ನುವ ಪರಿಸ್ಥಿತಿ. ಆಕೆಯ ಪ್ರೀತಿಯ ಕರವಸ್ತ್ರ ಕಾಣೆಯಾದಾಗ ಪರಿತಪಿಸುವ ರೀತಿ ಮನಕಲುಕು ವಂತಹುದು. ದೂರವಾದ ಪತಿ ಕೆಲವು ವರ್ಷಗಳ ನಂತರ ಆಸ್ತಿಗಾಗಿ ಮನೆಗೆ ಬಂದಾಗ 'ಅಕ್ಕು' ವಿನ ಮಾತುಗಳು. ಗರ್ಭಿಣಿಎಂದು ತಿಳಿದಿದ್ದರೂ ತನ್ನ ಸುಖಕ್ಕಾಗಿ 'ಅಕ್ಕು
ವನ್ನು ಬಲವಂತಿಸಿದ್ದು ಮಗು ಹೊಟ್ಟೆಯಲ್ಲಿ ಸತ್ತಿದ್ದು ಆಕೆ ಆತನನ್ನು ದ್ವೇಷಿಸಲು ಇದಕ್ಕಿಂತ ಕಾರಣ ಬೇಕೇ?.
ಪುಟ್ಟಮತ್ತೆ ಮೊಮ್ಮಗಳು 'ಅಮ್ಮಚ್ಚಿಗೆ ತನ್ನ ಮದುವೆಯಾಗುವ ವ್ಯಕ್ತಿ ಬಗ್ಗೆ ಒಂದು ಆಸೆ ಇದ್ರೆ ವೆಂಕಪ್ಪನ ಕ್ರೂರತೆಯಿಂದ ಮನಸ್ಸಿಲ್ಲದಿದ್ದರೂ ಆತನೊಂದಿಗೆ ಮದುವೆಯಾಗಿ ತಿರುಪತಿಗೆ ತೆರಳುತ್ತಾಳೆ.ತಾನು ತುಂಬಾ ಓದಬೇಕು ಎಂಬ ಅಸೆ ಹಾಗು ತನ್ನ ಗಿಷ್ಟದ ಹುಡುಗನೊಂದಿಗೆ ಮದುವೆಯಾಗುವ ಕನಸು ಕ್ಷಣದಲ್ಲೇ ಕಮರಿ ಹೋದಾಗ 'ಅಮ್ಮಚ್ಚಿಗಾದ ದುಃಖ ಕೋಪ ...ವಿವರಿಸಲು ಪದಗಳಿಲ್ಲ.
ಹೆಣ್ಣುಮಕ್ಕಳನ್ನು ತಮಗಿಷ್ಟದಂದೇ ಉಪಯೋಗಿಸುವ ವೆಂಕಪ್ಪ, ವಾಸು ಮುಂತಾದ ಪುರುಷರ ನಡುವೆ ಹೊಸ ತಲೆಮಾರಿನ ಚಿಕ್ಕ ಹುಡುಗನೋರ್ವನೇ ಸ್ವಲ್ಪ ಒಳ್ಳೆಯವನೇನೋ. ಅಥವಾ ತಲೆಮಾರು ಬದಲಾವಣೆಯ ಸೂಚನೆಯೋ?
ಕಥೆಗೆ ಎಲ್ಲಾ ಪಾತ್ರಧಾರಿಗಳು ಜೀವ ತುಂಬಿದ್ಧಾರೆ. ಅಕ್ಕು ಮತ್ತು ಪುಟ್ಟಮತ್ತೆ ಪಾತ್ರವನ್ನು ಬಹುಶಾ : ಬೇರೆ ಯಾರಿಂದಲೂ ಅಷ್ಟೊಂದು ಚೆನ್ನಾಗಿ ಮಾಡಲು ಸಾಧ್ಯವಿಲ್ಲ ಬಿಡಿ.
ಅಮ್ಮಚ್ಚಿ, ಸೀತಾ, ವೆಂಕಪ್ಪಯ್ಯ ಹೀಗೆ ಎಲ್ಲರೂ ಪ್ರತಿಭಾನ್ವಿತರೇ.
ಸಿನೆಮಾ ಸಂಭಾಷಣೆ, ಹಾಡುಗಳು, ಫೋಟೋಗ್ರಫಿ ಎಲ್ಲವೂ ಸೊಗಸಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ 'ವೆಂಕಪ್ಪಯ್ಯ ಸತ್ತ' ಎನ್ನುವ ಕೊನೆಯ ಮಾತು. ವ್ಹಾವ್ .
ಇಂತಹ ಸಿನಿಮಾಗಳು ಇನ್ನಷ್ಟು ಬರಲಿ.
Photo Credit : Prajavani