ಅಂದ ಹಾಗೇ ನನ್ನ ಹೆಸರು ಗೊತ್ತಲ್ಲ? ವೀಣಾ.
ಹೌದು ಕಣ್ರೀ ಬಹಳ ಹಳೇಯ ಕಾಲದ ಹೆಸರು..
ನಿಮಗೆಲ್ಲರಿಗೂ ನನ್ನ ಹೆಸರಿನ ಅರ್ಥ ಗೊತ್ತಿದೆ ಅಂತ ಅಂದುಕೊಂಡಿದ್ದೀನಿ. ಇಲ್ಲವಾದಲ್ಲಿ ಕನ್ನಡದ ಅಮ್ರತವರ್ಷಿಣಿ ಸಿನಿಮಾ ನೋಡಿ. ಅದರಲ್ಲಿ ನಾಯಕಿ ಸುಹಾಸಿನಿಯ ಹೆಸರು ವೀಣಾ. ನಾಯಕ/ವಿಲನ್ ರಮೇಶ್ ನಾಯಕಿಯ ಮನೆಗೆ ಬೇಟಿಕೊಟ್ಟಾಗ ನಾಯಕಿಯ ಹೆಸರಿನ ಅರ್ಥ ಹೇಳುತ್ತಾನೆ.
ಸುಮ್ನೆ time waste ಮಾಡದೇ ವಿಷಯಕ್ಕೆ ಬರುತ್ತೀನಿ.
ನಾನಾಗ ಹೈಸ್ಕೂಲ್ ವಿದ್ಯಾರ್ಥಿನಿ.ಕಲಿಯುವುದರಲ್ಲಿ ಅಷ್ಟೇನೂ ಹುಷಾರಿಲ್ಲದಿದ್ದರೂ ಶಾಲೆಗೆ ಹೋಗದೇ ಇರುತ್ತಿರಲಿಲ್ಲ.ಲೆಕ್ಕ ಪಾಠವೆಂದರೆ ನನಗೆ ತುಂಬಾ ಇಷ್ಟ. ಅಂದು teacher ನನಗೆ ಲೆಕ್ಕ ಹೇಳಿಕೊಡುತ್ತಿದ್ದರು.ಆಗಲೇ ನನಗೆ ಒಂದು ಕರೆ ಬಂದಿತ್ತು. ನಮ್ಮ ಶಾಲೆಯ ಪಕ್ಕದಲ್ಲಿರುವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರು ನನಗೆ ಕರೆ ಕಳುಹಿಸಿದ್ದರು.ನನಗೆ ಲೆಕ್ಕ ತರಗತಿ ಬಿಟ್ಟು ಹೋಗಲು ಮನಸ್ಸು ಇಲ್ಲ ಅದಲ್ಲದೇ ನನ್ನನ್ನೇ ಯಾಕೆ ಕರೆದಿದ್ದಾರೆ ಎಂಬ ಭಯಾಂತಕ. ಏನು ಮಾಡಬೇಕೆಂದು ತಿಳಿಯದೇ ಚಡಪಡಿಸುತ್ತಿದ್ದೆ. ಲೆಕ್ಕ teacher ‘ವೀಣಾ ಬೇಗ ಹೋಗಿ ಬಾ’ ಎಂದ ಮೇಲೆ ಮಾತು ಮೀರುವ ಧೈರ್ಯ ನನಗಿಲ್ಲ. ಉಸಿರು ಬಿಗಿಹಿಡಿದು ಸೆಕ್ರಡ್ ಹಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಯರ ಕಛೇರಿಗೆಹೋದೆ. ಅವರು ನನಗೆ ಮುರನೇ ತರಗತಿಗೆ ಹೋಗಲು ಹೇಳಿದರು. ಶಾಲೆಯ ವಿದ್ಯಾರ್ಥಿ ಒಬ್ಬ ತರಗತಿಗೆ ಹೋಗುವ ದಾರಿ ತೋರಿಸಿದ. ತರಗತಿ ಒಳಗೆ entry ಕೊಡುವಾಗಲೇ ಮುರನೇ ತರಗತಿಯಲ್ಲಿದ್ದ teacher ನನಗೆ ಬೈಯ್ಯಲು ಶುರುಮಾಡಿದರು.ಸುಮಾರು ಹತ್ತು ನಿಮಿಷ ಬೈದರು.ನೀನು ಹೈಸ್ಕೂಲ್ ನಲ್ಲಿ ಓದುತ್ತಿದ್ದೀಯಾ ನಿನ್ನ ತಂಗಿಗೆ ಲೆಕ್ಕ ಕಲಿಸಲು ನಿನಗೆ ಆಗಲ್ವಾ? ನಿನ್ನಂಥ ಅಕ್ಕ ಇರುವುದರಿಂದಲೇ ಈಕೆ fail ಆದದ್ದು ಅನ್ನಬೇಕೇ?
ಈ ಪುಕ್ಕಲಿಗೆ ಅದೇಗೆ ಧೈರ್ಯ ಬಂತೋ ತಿಳಿಯದು.. ತಟ್ಟನೆ ಹೇಳಿದೆ. ಇವಳು ನನ್ನ ತಂಗಿ ಅಲ್ಲವೆಂದು. ಆ teacher ಮತ್ತೇ ಅವಳಲ್ಲಿ ವಿಚಾರಿಸಿದಾಗ ಅವಳು ನಾನು ಅವಳ ಅಕ್ಕ ಅಲ್ಲವೆಂದಳು. ಬದುಕಿತು ಬಡಜೀವ ಎಂದು ಖುಷಿ ಪಟ್ಟೆ.
ಪಾಪ ಆ teacherಗೆ ಏನು ಅನ್ನಿಸ್ಸಿತೋ ನನ್ನಲ್ಲಿ ಪರಿ ಪರಿಯಾಗಿ sorry ಕೇಳಿದ್ರು. teacher ನಿಮ್ಮ ತಪ್ಪಿಲ್ಲ ಬಿಡಿ ಅದೆಲ್ಲಾ ಗೊತ್ತಿಲ್ಲದೇ ಅದದಲ್ವಾ ಅಂತ ಅಂದರೂ ಅವರು ಅದೇನೋ ಪ್ರಮಾದ ನಡೆದಿತ್ತು ಅನ್ನೋ ತರಹ ವರ್ತಿಸ್ಸಿದ್ದರು.
ನಡೆದದ್ದು ಇಷ್ಟೇ,
ನನ್ನ ತರಗತಿಯಲ್ಲಿ ನನ್ನದೇ ಹೆಸರಿನ ಇನ್ನೊಬ್ಬಳು ಇದ್ದಳು. ಅವಳು hostel ನಲ್ಲಿರುವತ್ತಿದ್ದಳು. ಈ ಮುರನೇ ತರಗತಿ ವಿಧ್ಯಾರ್ಥಿ ಕೂಡ ಅವಳದೇ hostel ನಲ್ಲಿದ್ದುದರಿಂದ ಅವಳನ್ನು ಕರೆಯಲು ಹೇಳಿದ್ದರು ಆ teacher. ಕರೆ ಬಂದಾಗ ನನ್ನ ಲೆಕ್ಕ teacher (ನನ್ನದೇ ಹೆಸರಿನ ಇನ್ನೊಬ್ಬಳು) ಆ ವೀಣಾಳನ್ನು ಕರೆಯಲು ಯಾವುದೇ ಕಾರಣಗಳಿಲ್ಲ ಎಂದು ಮನದಲ್ಲೇ ಲೆಕ್ಕಾಚಾರ ಮಾಡಿ ನನ್ನ ಕಳುಹಿಸಿದ್ದರು. ಪರಿಣಾಮ ಬೈಗುಳದ ಸುರಿಮಳೆ ನನಗೆ ಸಿಕ್ಕಿತು. ಅವರ ಬೈಗುಳಕ್ಕಿಂತಲೂ ಅವರು ಕೇಳಿದ sorry ನನಗೆ ಮುಜುಗರ ಉಂಟುಮಾಡಿತ್ತು.
Subscribe to:
Post Comments (Atom)
ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'
'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...
-
ಶ್!! ಇದು ಮೌನದ ಸಮಯ. ಮಾತು ಮರೆಯುವ ಸಮಯ. ಮನದಲ್ಲಿ ನೂರು ನೋವುಗಳು ತುಂಬಿರುವ ಸಮಯ. ಹೌದು. ಇದು ವಿದಾಯ ಹೇಳುವ ಸಮಯ.... ಹೆದರಬೇಡಿ ನಾನು ಬ್ಲಾಗಿಗಾಗಲೀ, ಬ್ಲಾ...
-
ನಾನು ಚಿಕ್ಕವಳಿದ್ದಾಗ ಅಂದುಕೊಳ್ಳುತ್ತಿದ್ದೆ. ನಾವೆಲ್ಲಾ ವಿಜ್ಜಾನಿಗಳಾಗ ಬೇಕಿದ್ದರೆ ವಿಜ್ಜಾನ ವಿಭಾಗದಲ್ಲಿ ಪದವಿಪಡೆಯಬೇಕೆಂದು. ಅದರೆ ಕೊಪ್ಪದ ನರಸಿಂಹ ಭಂಡಾರಿಯವರೊಡನೆ ...
-
ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟು ಮಾಡುತ್ತದೆ. ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ...
1 comment:
namaste veena. blog sakattagide. Good write up. will you give me chance to evaluate your blog and award marks?
Post a Comment