January 30, 2009

ಮೊಗ್ಗಿನ ಮನಸ್ಸು ಚೆನ್ನಾಗಿತ್ತು!!

ಅದೆಷ್ಟೋ ದಿನಗಳು ಕಳೆದ ನಂತರ ಒಂದು ಉತ್ತಮ ಸಿನಿಮಾ ನೋಡಿದ ಅನುಭವ ಮೊಗ್ಗಿನ ಮನಸ್ಸನ್ನು ನೋಡಿದ ಮೇಲಾಯಿತು. ಮೊಗ್ಗಿನ ಮನಸ್ಸು ನೋಡುವ ಹಂಬಲ ನಮ್ಮ ಮನಸ್ಸಿನಲ್ಲಿರಲಿಲ್ಲ ಆದರೂ ಸಮಯ ವ್ಯಯಿಸಲೆಂದು ರೂಮಿನಲ್ಲಿ ಕೂತು ಸಿನಿಮಾ ನೋಡಿದೆವು. ಪಿನ್ ಪಾಯಿಂಟ್ ಸದ್ದಿಲ್ಲದೇ ಎಲ್ಲರೂ ಮೌನವಾಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ಮುಗಿದ್ದದ್ದೇ ತಡ ಎಲ್ಲರೂ ‘ಇದು ಮುಂಗಾರು ಮಳೆಗಿಂತಲೂ ಚೆನ್ನಾಗಿದೆ ಅಲ್ವಾ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಡುಗಳಂತೂ ಸುಪರ್... ಹುಡುಗಿರ ಅಭಿನಯವನ್ನು ಕಂಡು ಹುಡುಗರು (ಯಶ್ ಅಭಿನಯ ಓಕೆ) ಅಭಿನಯ ಕಲಿಯಬೇಕಿತ್ತು. ಸಿನಿಮಾದಲ್ಲಿ ಹುಡುಗರ ನಟನೆ ನಾಟಕೀಯವಾಗಿತ್ತು ಎಂಬುದರ ಹೊರತು ಎಲ್ಲವೂ ಸುಪರ್... ಕ್ಯಾಮೆರಾ ವನ್ನು ಮಂಗಳೂರಿಗೆ ಒಂದು ಬಾರಿ ಹೋಗುವಂತೆ ಪ್ರಚೋದಿಸುತ್ತದೆ.

ಹೆಣ್ಣಿನ ಮನಸ್ಸು, ಅವಳ ಪ್ರತಿನಿತ್ಯದ ಬದುಕನ್ನು ಚೆನ್ನಾಗಿ ಬಿಂಬಿಸಿದ ‘ಮೊಗ್ಗಿನ ಮನಸ್ಸು’ ನಮ್ಮ ಮನಸ್ಸನ್ನು ಗೆದ್ದಿದೆ. ನಿರ್ದೇಶಕರಿಗೆ ಅನಂತ ವಂದನೆಗಳು. ಇಂಥಹ ಉತ್ತಮ ಕಥೆಯನ್ನು ಆಯ್ಕೆ ಮಾಡಿ ನಮಗೆ ತೋರಿಸಿದ ಸಿನಿಮಾ ನಿರ್ಮಾಪಕ ಹಾಗೂ ತಂಡಕ್ಕೆ ಅಭಿನಂದನೆಗಳು. ಸಿನಿಮಾ ನೋಡಿದ ಮೇಲೆ ಅದೆಷ್ಟೊ ಬಾರಿ ಅಂದು ಕೊಂಡಿದ್ದೆ. ನನ್ನ ಬ್ಲಾಗ್ ನಲ್ಲಿ ಮೊಗ್ಗಿನ ಮನಸ್ಸಿನ ಕುರಿತು ಬರೆಯಬೇಕೆಂದು... ಇಂದು ಸಮಯ ಸಿಕ್ಕಿತು.


ಧನ್ಯವಾದಗಳು!!

3 comments:

Harisha - ಹರೀಶ said...

ಮೊಗ್ಗಿನ ಮನಸ್ಸು ನಿಸ್ಸಂಶಯವಾಗಿ ಅತ್ಯುತ್ತಮ ಚಿತ್ರ. ಆದರೆ ಅದು ಮುಂಗಾರು ಮಳೆಗೆ ಸಾಟಿಯಾಗಿ ನಿಲ್ಲಲಿಲ್ಲ. ಇದಕ್ಕೆ ಕಾರಣಗಳು ಬಹುಶಃ ಹೀಗಿರಬಹುದು:
೧) ಅದರ ಟ್ಯಾಗ್ ಲೈನ್ (ಹುಡುಗಿಯರಿಗಾಗಿ ಮಾತ್ರ).
೨) ವಿಷಯ ಕೂಡ ಕಾಲೇಜು ಹುಡುಗಿಯರಿಗೆ ಸಂಬಂಧ ಪಟ್ಟಿದ್ದು
೩) ಅಲ್ಲದೆ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದರೂ ಯಾರೂ ಗುನುಗದೆ ಇದ್ದಿದ್ದು (ಯಾವ ಹುಡುಗಿ ತಾನೇ "ನನಗೂ ಒಬ್ಬ ಗೆಳೆಯ ಬೇಕು" ಎಂದು ಹಾಡುತ್ತಾಳೆ?)
೪) ಹಾಸ್ಯ ಕಡಿಮೆ ಇದ್ದಿದ್ದು

shivu.k said...

ಮೊಗ್ಗಿನ ಮನಸ್ಸು ನನ್ನ ಮೆಚ್ಚಿನ ಚಿತ್ರಗಳಲ್ಲಿ ಒಂದು...

ಮುಂಗಾರು ಮಳೆಯೇ ಒಂಥರ...ಇದೊಂಥರ....ಎರಡೂ ಚೆನ್ನಾಗಿದೆ....ಅಪ್ಪ ಅಮ್ಮನಲ್ಲಿ ಯಾರು ಇಷ್ಟವೆಂದರೇ ಒಬ್ಬೊಬ್ಬರೂ ಒಮ್ಮೇಮ್ಮೆ ಹೆಚ್ಚು ಇಷ್ಟವಾಗುತ್ತಾರೆ ಅಲ್ವಾ..ಹಾಗೆ ಇದು ಕೂಡ...

ಮೊಗ್ಗಿನ ಮನಸ್ಸು ಹುಡುಗಿ ನಮ್ಮ ಪಕ್ಕದ ಮನೆಯಲ್ಲೇ ಇರುವುದು...ಅವಳನ್ನು ನಾನು ದಿನಾ ನೋಡುವ ಆವಕಾಶ...ಅವಳ ಹೊಸ ಚಿತ್ರ ಒಲವೇ ಜೀವನ ಲೆಕ್ಕಾಚಾರ ತುಂಬಾ ಚೆನ್ನಾಗಿದೆ.....
ಧನ್ಯವಾದಗಳು.

shivu.k said...

ಅಂದಹಾಗೇ ರಾಧಿಕ ಪಂಡಿತ್ ನಮ್ಮ ಪಕ್ಕದ ಮನೆಯಲ್ಲಿರುವುದು...

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...