February 23, 2011

ಯಾಕಯ್ತು ಹೀಗೆ ನಮ್ಮ ಪತ್ರಿಕೆಗಳು!

ದಿನಾಲೂ ಎಲ್ಲಾ ಪತ್ರಿಕೆಗಳನ್ನು ಓದುವ ನನಗೆ ಒಂದು ಪತ್ರಿಕೆಯನ್ನು ಇನ್ನೊಂದು ಪತ್ರಿಕೆಯೊಡನೆ ಹೋಲಿಸಿ ನೋಡುವ ಹುಚ್ಚು ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ಒಂದು ಪ್ರಮುಖ ವಿಷಯವನ್ನು ವಿವಿಧ ಪತ್ರಿಕೆಗಳು ಯಾವೆಲ್ಲಾ ರೀತಿಯಲ್ಲಿ ಪ್ರಕಟಿಸುತ್ತಾರೆ ಎಂದು ನೋಡುತ್ತಿರುತ್ತೇನೆ. ಇತ್ತೀಚೆಗೆ ಕನ್ನಡ ಪತ್ರಿಕೋದ್ಯಮದಲ್ಲಾದ ಮಹತ್ತರ "ಸಂಪಾದಕೀಯ" ಬದಲಾವಣೆಯ ನಂತರ ಇದರೆಡೆಗೆ ಆಸಕ್ತಿ ಇನ್ನೂ ಹೆಚ್ಚಿತು. ಇಂದು ಮಾಮೂಲಿಯಾಗಿ ನನ್ನ ಕಣ್ಣನ್ನು ಪತ್ರಿಕೆಗಳತ್ತ ಹೊರಡಿಸುವಾಗ ಆಕರ್ಷಕವಾಗಿ ಕಂಡಿದ್ದು ಉದಯವಾಣಿ ಪತ್ರಿಕೆಯ ಮುಖ ಪುಟ... ಅರೆ ಇದೇನಿದು ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಅನ್ನು ವಿಭಾಗವಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಗೋಧ್ರಾ ತೀರ್ಪಿನ ಬಗ್ಗೆ ಉಳಿದೆಲ್ಲಾ ಪತ್ರಿಕೆಗಳಿಗಿಂತ ವಿಶೇಷವಾಗಿ ವರದಿಯನ್ನು ನೀಡಿದ್ದಾರೆ.

ಅಪರೂಪಕ್ಕೊಮ್ಮೆ ಎದ್ದೇಳುವ ಉದಯವಾಣಿ ಇಂದಿನಿಂದ ಮರು ಉದಯ ವಾಗುತ್ತೇನೋ ಅನಿಸಿತು. ಆಗೊಂದು ವೇಳೆ ಆದರೆ ಕನ್ನಡ ಪತ್ರಿಕೋದ್ಯಮವೂ ಮರುಕಳಿಸುತ್ತದೆ ಎನ್ನಬಹುದೇನೋ...

ವಿಜಯಕರ್ನಾಟಕದ ಲವಲVK ಈಗ ಮೊದಲಿನಂತಿಲ್ಲ... ಪ್ರಮುಖ ಸುದ್ದಿಗಳಿದ್ದರೂ ಜಾಹಿರಾತುಗಳ ಸಂಖ್ಯೆಯೇ ಹೆಚ್ಚಿದೆ. ಹಾಗಂತ ತನ್ನತನವನ್ನು ಈ ಪತ್ರಿಕೆ ಕಳೆದುಕೊಂಡಿಲ್ಲ!

ಪ್ರಜಾವಾಣಿಯ ಪ್ರಮುಖ ಪುಟಗಳಿಗಿಂತ ಪುರವಾಣಿ ಪುಟಗಳೇ ಹೆಚ್ಚು ಹಿತವಾಗಿರುತ್ತವೆ.  ಕನ್ನಡ ಪ್ರಭ ಬದಲಾಗುತ್ತೆ ಬಹು ಬೇಗನೇ ಎಂದು ಅಂದುಕೊಂಡರೆ ಏನೂ ಆಗಿಲ್ಲ (ಇವತ್ತಿನ ಮೊದಲ ಪುಟದಲ್ಲಿ ಮಾಸ್ಟ್ ಹೆಡ್ ನಲ್ಲಿ ಆಚಾರ್ಯ ಮತ್ತು ಪ್ರಿಯಾಂಕಾ ತಂಗಿ ಪೋಟೊ ಕ್ಯಾಪ್ಶನ್ ಇದೆ - ಅದೇಕೆ ಸುದ್ದಿಯಲ್ಲದ ಸುದ್ದಿಗಳನ್ನು ಪ್ರಮುಖ ಸುದ್ದಿ ಮಾಡುತ್ತಾರೋ ತಿಳಿಯುತ್ತಿಲ್ಲ)

ಸಂಯುಕ್ತ ಕರ್ನಾಟಕ ಪರ್ವಾಗಿಲ್ಲ...

ಇನ್ನೊಂದು ಪ್ರಮುಖ ವಿಚಾರವೆಂದರೆ ಇತ್ತೀಚೆಗೆ ನಡೆದ ಚರ್ಚ್ ದಾಳಿ ಸಂಬಂದಿ ಹೊರಬಿದ್ದ ಸೋಮಶೇಖರ್ ವರದಿಯನ್ನು ವಿರೋದಿಸಿ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬ್ರಹತ್ ಸಮಾವೇಶ ಏರ್ಪಟ್ಟಿತ್ತು. ಮಂಗಳೂರಿನಲ್ಲಿ ನಡೆದ ಬ್ರಹತ್ ಸಮಾವೇಶಕ್ಕೆ ೧.೨೫ ಲಕ್ಷ ಜನರು ಉಪಸ್ಥಿತರಿದ್ದರೆ, ಆ ಸಂದರ್ಭದಲ್ಲಿ  ಅವರಿಗೆ ರಕ್ಷಣೆಗಿಳಿದ ಪೋಲಿಸ್ ಅಧಿಕಾರಿಗಳ ಸಂಖ್ಯೆ ಕೇವಲ ೪೦... ಅದೇ ದಿನ ಬೆಂಗಳೂರಿನಲ್ಲಿ ನಡೆದಂತಹ ಇನ್ನೊಂದು ಪ್ರಮುಖ ಕಾರ್ಯಕ್ರಮಕ್ಕೆ ಬ್ರಹತ್ ಪ್ರಮಾಣದ ರಕ್ಷಣೆಯನ್ನು ನೀಡಲಾಗಿತ್ತು. ಈ ಸುದ್ದಿಯನ್ನು ಯಾವೊಂದು ಪತ್ರಿಕೆಯೂ ಬಹಿರಂಗ ಪಡಿಸಿಲ್ಲ... ಬಹುಶ: ಇಂತಹ ಪ್ರಮುಖವೆನ್ನಿಸುವ ಸುದ್ದಿಗಳು ಅವರಿಗೆ ಸಿಗುವುತ್ತಿಲ್ಲವೇನೋ? ಅಥವಾ ಅವೆಲ್ಲಾ ಸುದ್ದಿಗಳೇ ಅಲ್ಲವೆನೋ... ಸುದ್ದಿ ಆಯ್ಕೆ, ಅದನ್ನು ಪ್ರಕಟಪಡಿಸುವುದು ಆಯಾ ಪತ್ರಿಕೆಗಳ ಕಸುಬು...

1 comment:

www.kumararaitha.com said...

ಪತ್ರಿಕೆಗಳನ್ನು ಹೋಲಿಸಿ ನೋಡುವುದೆಂದರೆ ಅದು ಅವುಗಳ ಮನಸ್ಥಿತಿಯ ಅಧ್ಯಯನ. ಬಹುಶ: ಈ ಗುಣವೇ ಸೋಮಶೇಖರ್ ವರದಿ ವಿರೋಧಿ ಸಮಾವೇಶದ ಭದ್ರತಾ ಅಂಶವನ್ನು ಪತ್ರಕರ್ತ ದೃಷ್ಟಿಕೋನದಿಂದ ನೋಡಲು ಸಾಧ್ಯವಾಗಿದೆ. ಈ ವಿಷಯ, ವಿಶೇಷವಾದ ವರದಿಗೆ ಮತ್ತು ಸರಕಾರದ ಚುಕ್ಕಾಣಿ ಹಿಡಿದವರ ಮನೋಭಾವ ತೋರಿಸಲು ಸಹಕಾರಿಯಾಗಿತ್ತು...

ಅಂದಹಾಗೆ ಉದಯವಾಣಿ ಮುಖಪುಟ ಭಿನ್ನತೆ ಎದ್ದುಕಾಣುತ್ತದೆ. ಶ್ಲಾಘನೀಯ ಪ್ರಯೋಗ...

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...