October 16, 2007

ನನ್ನ ನೆಚ್ಚಿನ ಬರಹಗಾರ್ತಿ ಸಿಕ್ಕಾಗ...

ಕಳೆದ ತಿಂಗಳು ನನಗೆ ನೇಮಿಚಂದ್ರರವರ ಯಾದ್ ವಶೇಮ್ ಪುಸ್ತಕ ಬಿಡುಗಡೆ ಸಮಾರಂಭದ ಆಮಂತ್ರಣ ಬಂದಿತ್ತು. ನನ್ನ ನೆಚ್ಚಿನ ಬರಹಗಾರ್ತಿಯಿಂದ ಆಮಂತ್ರಣ ಬಂದಿದ್ದರಿಂದ ಉಬ್ಬಿಹೋಗಿದ್ದೆ.
ಗಾಂಧಿ ಜಯಂತಿ ದಿನದಂದು ನನ್ನ ಇನ್ನಿಬ್ಬರು ಗೆಳತಿಯರ ಜೊತೆಗೂಡಿ ಕನ್ನಡ ಭವನಕ್ಕೆ ಹೋದೆ.
ನನಗ್ಯಾಕೋ ಅನುಮಾನ ನನ್ನನ್ನು ನಿಜಕ್ಕೂ ನೇಮಿಚಂದ್ರನೇ ಅಮಂತ್ರಿಸಿದ್ದಾ? ಅವರ ಕಾದಂಬರಿ ಬಿಡುಗಡೆ ಇವತ್ತೇನಾ? ಒಂದು ವೇಳೆ ಸಮಾರಂಭ ಇಲ್ಲದಿದ್ದರೆ ನೇಮಿಚಂದ್ರರನ್ನು ಕಣ್ತುಂಬ ನೋಡುವ ಭಾಗ್ಯನೂ ತಪ್ಪುತ್ತೆ. ಮನದಲ್ಲಿ ಹಲವು ಗೊಂದಲ ಕಂಡುಬಂದರೂ ಕನ್ನಡ ಭವನದೊಳಗೆ ಅಡಿ ಇಟ್ಟಾಗ ಮನದಲ್ಲಿ ಸಂತಸ. ಅದು ನಿಜಕ್ಕೂ ನೇಮಿಯವರ ಪುಸ್ತಕ ಬಿಡುಗಡೆ ಸಮಾರಂಭ. ಒಂದಷ್ಟು ರೋಮಂಚನ, ಖುಷಿ, ಪುಳಕ. ವೇದಿಕೆಯಲ್ಲಿ ನೇಮಿ ಜತೆಗೆ ಇತರೆ ಬರಹಗಾರರೂ ಇದ್ರು. ಅವರೆಲ್ಲರ ನಡುವೆ ಚೂಡಿದಾರ ಹಾಕಿ ಮಿಂಚುತ್ತಿದ್ದರು ನೇಮಿಚಂದ್ರ.
ನನಗಂತೂ ತುಂಬಾ ಸಂತಸವಾಗಿತ್ತು. ಕಣ್ ಕಣ್ ಬಿಟ್ಟು ಅವರನ್ನೇ ನೋಡುತ್ತಿದ್ದೆ. ಅದೆಂಥಹ ವಿನಯ. ಅಲ್ಲಿಗೆ ಆಗಮಿಸಿದ ಎಲ್ಲರಲ್ಲೂ ವಿನಯ ದೈನ್ಯತೆಯಿಂದ ವರ್ತಿಸುತ್ತಿದ್ದರು. ಹಿರಿಯ ಬರಹಗಾರರಿಂದ ಕೈ ಮುಗಿದು ಆಶೀರ್ವಾದ ಕೇಳುತ್ತಿದ್ದರು. ನಾನು ಅವರ ಪ್ರತಿ ಚಲನ ವಲನಗಳನ್ನು ನೋಡಿ ಭಾವುಕಳಾಗಿದ್ದೆ. ಸಭೆಯಲ್ಲಿ ಅವರು ಕಾದಂಬರಿ ಕುರಿತಾಗಿ ಮಾತನಾಡಿದ್ದರು. ಇವರ ಬರಹ ಮಾತ್ರವಲ್ಲ. ಮಾತುಗಳೂ ಕೇಳಲು ತುಂಬಾ ಹಿತಕರವಾಗಿದ್ದವು. ಅವರು ಅವರಮ್ಮನ ಬಗ್ಗೆ ಅಭಿಮಾನದಿಂದ ಹೇಳುವಾಗ ನನಗರಿವಿಲ್ಲದಂತೆ ಕಣ್ಣಲ್ಲಿ ನೀರು ಇಳಿದಿದ್ದು.
ನನ್ನ ಮಮ್ಮಿನೂ ಅವರಮ್ಮನಂತೆ ಗ್ರೇಟ್. ನಾನು ಬಯಸಿದ ಬಯಸದ ಎಲ್ಲವನ್ನೂ ನಮಗೆ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮ ಮುಕ್ತಾಯವಾದೊಡನೆ ಗೆಳತಿಯರನ್ನು ಬಿಟ್ಟು ನಾನೊಬ್ಬಳೇ ನೇಮಿಚಂದ್ರರಲ್ಲಿಗೆ ಹೋಗಿ ನನ್ನ ಹೆಸರು ವೀಣಾ ಡಿ’ಸೋಜಾ ಎಂದೆ. ಅವರು ಅಷ್ಟೇ ಹರ್ಷದಲ್ಲಿ ‘ಓ ವೀಣಾ... ಇ-ಮೇಲ್ ಫ್ರೆಂಡ್’ ಅಂದರು. ಅ ಕ್ಷಣ ನನ್ನನ್ನೇ ನಾ ಮರೆತೆ. ಹಾಗಿದ್ರೆ ನಾನು ಮೇಲ್ ಮಾಡಿದ್ದು ನನಗೆ ಮೇಲ್ ಬರುತ್ತಿದ್ದದು ನೇಮಿಚಂದ್ರರಿಂದಲೇ. ವ್ಹಾ! ಐ ಆಮ್ ರಿಯಲಿ ಲಕ್ಕಿ. ಮೇಡಂ ನನ್ನ ಗೆಳತಿಯರು ಹೊರಗೆ ಇದ್ದಾರೆ. ನಿಮ್ಮನ್ನು ಭೇಟಿ ಮಾಡಿಸಬೇಕು ಎಂದೆ. ಖಂಡಿತಾ ಬರುತ್ತೇನೆ ಎಂದೇಳಿ ನಮ್ಮ ಜೊತೆ ಒಂದಷ್ಟು ಹೊತ್ತು ಮಾತನಾಡಿದ್ದರು.
‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಉದ್ಯೋಗದಲ್ಲಿದ್ದಿರಾ’ ಎಂದು ಆಶ್ಚರ್ಯದಿಂದ ಕೇಳಿದರು. ನಾವು ಸ್ನಾತಕೋತ್ತರ ಪದವಿ ಮುಗಿಸಿ ಬಂದವರೆಂದು ಹೇಳಿದ್ರೆ ಅವರಿಗೆ ನಂಬೋಕೇ ಕಷ್ಟವಾಗಿತ್ತು. ವಾಹನವೊಂದು ಅವರಿಗಾಗಿ ಕಾದಿತ್ತು. ಅದ್ರೂ ಅಟೋಗ್ರಾಫ್ ಕೊಡಲು ಹಿಂಜರಿಯಲಿಲ್ಲ.

3 comments:

Girish Rao H said...

ತುಂಬಾ ಭಾವುಕವಾಗಿ ಬರೆದಿದ್ದೀರಿ. ಕತೆಗಾರರ ಬಗ್ಗೆ ಇಷ್ಟೊಂದು ಭಾವುಕತೆ ನನಗೂ ಇತ್ತು, ಒಂದು ಕಾಲದಲ್ಲಿ.
ಮತ್ತೆ ಅದು ಸಿದ್ಧಿಸಲಿ ಅನ್ನುವ ಆಶೆಯಷ್ಟೇ ಉಳಿದಿದೆ.
-ಜೋಗಿ

Anonymous said...

ಸುಮಾರು 6 ತಿಂಗಳ ಹಿಂದೆ ನನಗೂ ನೇಮಿಚಂದ್ರರನ್ನು ಭೇಟಿಯಾಗುವ ಅವಕಾಶ ಸಿಕ್ತು. ಸುಮಾರು ಅರ್ಧ ಗಂಟೆ ಅವರ ಮಾತನ್ನು ಕೇಳುತ್ತಾ ನಾವು 3-4 ಜನ ಕೂತಿದ್ವಿ

veena said...

ಜೋಗಿ ಸರ್ ನೀವಂತೂ ಬರಹಗಾರರು... ಅಂದ ಹಾಗೆ ನಿಮ್ಮ ಇನ್ನೆರಡು ಪುಸ್ತಕಗಳು ಬಹು ಬೇಗನೇ ಪ್ರಕಟಗೊಳ್ಳಲಿ ಎಂಬುವುದೇ ನನ್ನ ಹಾರೈಕೆ.

ಹಾಯ್ ಪ್ರಶಾಂತ್ ನನ್ನ ಬ್ಲಾಗ್ ಗೆ ನಿಮಗೂ ಸ್ವಾಗತ

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...