January 18, 2008

ಯಾದ್ ವಶೇಮ್ ೨

ನೇಮಿಚಂದ್ರರವರ ಕಾದಾಂಬರಿಯಲ್ಲಿ ಇಂತಹ ಹಲವು ಮನತಟ್ಟುವ ವಾಕ್ಯಗಳಿವೆ. ದಿನನಿತ್ಯ ಬಳಸಬಹುದಾದ ಡೈಲಾಗುಗಳಿವೆ. ನನಗಿಷ್ಟವಾಗಿದೆ. ಬಹುಶಃ ನಿಮಗೂ ಇಷ್ಟವಾಗಬಹುದು. ಓದಿ ನೋಡಿ.

  • ಬದುಕಬೇಕು ಹಂಚಿಕೊಂಡು, ಬದುಕಬಹುದೆ ಕಿತ್ತುಕೊಂಡು?
  • ಹೇಗೆ ವಿವರಿಸಲಿ ಭಾರತವನ್ನು? ಒಂದು ಧರ್ಮ, ಒಂದು ದೇವರ ಈ ನೆಲದಲ್ಲಿ ನಿಂತು ನೂರು ಧರ್ಮ, ಸಾವಿರ ಸಾವಿರ ದೇವರುಗಳ ನಾಡಿನ ಬಗ್ಗೆ ಹೇಗೆಂದು ವಿವರಿಸಲಿ. ಮುಕ್ಕೋಟಿ ದೇವರುಗಳು... ಅವರನ್ನು ಸಹಸ್ರ ಸಹಸ್ರ ನಾಮದಲ್ಲಿ ಕರೆಯುತ್ತಾರೆ. ಕೂಗುತ್ತಾರೆ, ಶಪಿಸುತ್ತಾರೆ, ಬೇಡುತ್ತಾರೆ, ಬೈಯುತ್ತಾರೆ, ಮುನಿಯುತ್ತಾರೆ, ರಾಜಿಯಾಗುತ್ತಾರೆ... ಸಾವಿರ ಹೆಸರಿಟ್ಟು ಕೂಗಿ ಕೊನೆಗೆ ದೇವನೊಬ್ಬನೇ ಎನ್ನುತ್ತಾರೆ.
  • ನನ್ನನ್ನು ಕಾಡಿದ್ದು ಇತಿಹಾಸದ ಸಾವುಗಳಲ್ಲ, ವರ್ತಮಾನದ ಸಾವುಗಳು. ಭವಿಷ್ಯದ ಸಾವುಗಳು. ನಾನು ನಿನ್ನೆಗಳ ನೂರು ನೋವನ್ನು ಮರೆಯಲು ಸಿದ್ದ. ನಾಳೆಗಳ ಭರವಸೆಯನ್ನು ಯಾರಾದರೂ ನನಗೆ ನೀಡಿದರೆ...
  • ಮನುಷ್ಯ ಮನುಷ್ಯನ ನಡುವೆ ದ್ವೇಷವಿಲ್ಲದ, ಗೋಡೆ ಇಲ್ಲದ ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಒಂದು ಸುಂದರ ಸಂಬಂಧದ ಸೇತುಬಂಧದ ಕನಸು ನನ್ನದು.
  • ಸಾವಿರ ವರ್ಷಗಳಿಂದ ಜೊತೆಗೆ ಬದುಕಿದ್ದ ಮುಸ್ಲಿಂಮರು, ಯಹೂದಿಗಳೇಕೆ ಒಂದಾಗಲು ಸಾಧ್ಯವಿಲ್ಲ? ಸಾಧ್ಯವಿಲ್ಲವೆ ಮನಸ್ಸು ಮಾಡಿದರೆ ಒಡೆದ ಮನಸ್ಸುಗಳನ್ನು ಕೂಡಿಸಲು? ಸಾಧ್ಯವಿಲ್ಲವೆ ಶಾಂತಿಗೊಂದು ಅವಕಾಶ ನೀಡಲು? ನಡುವೆ ಎಳೆದ ಗಡಿಗಳನ್ನು, ಗೆರೆಗಳನ್ನು ಅಳಿಸಿ ಕದನ ವಿರಾಮಕ್ಕೆ ಕರೆ ನೀಡಲು ಸಾಧ್ಯವೇ ?
  • ಇತಿಹಾಸದ ತಪ್ಪುಗಳನ್ನು ತಿದ್ದಲು ಹೊರಟರೆ, ಹೊಸ ತಪ್ಪುಗಳನ್ನು ಮಾಡುತ್ತೇವೆ. ಇತಿಹಾಸವನ್ನು ಭೂಪಕ್ಕೆ ಬಿಟ್ಟುಬಿಡುವುದು ಮೇಲು. ಭವಿಷ್ಯದ ಭರವಸೆಯಷ್ಟೇ ನಮಗಿರಲಿ. ಮತ್ತೆಂದೂ ಯಾವ ದೇವಲಯವೂ ಒಡೆಯದಿರಲಿ. ಯಾವ ಮಸೀದಿಯು ಉರುಳದಿರಲಿ. ಜನರ ಮನಸ್ಸಿನಲಿ ಕಟ್ಟಿದ ನಂಬಿಕೆಯ ಗೋಪುರಗಳು ಕುಸಿಯದಿರಲಿ. ಯಾವ ಮಾನವನೂ ಮತ್ತೆ ಶಿಲುಬೆಗೇರದಿರಲಿ.
  • ಏಕೋ ಮನಸ್ಸಿಗೆ ಹಿತವಿಲ್ಲ. ಏನು ವಾದಿಸುತ್ತಿದ್ದೇನೆ? ಏಕೆ ವಾದಿಸುತ್ತಿದ್ದೇನೆ? ಇಂದಿನ ಸಮಸ್ಯೆಗೆ ಸಾವಿರ ಸಾವಿರ ವರ್ಷಗಳ ಕತೆಯೇಕೆ ಬೇಕು?
  • ದಿಟದಲ್ಲಿ ದ್ವೇಷಕ್ಕೆ ಕಾರಣಗಳಿರಲಿಲ್ಲ. ನೆಪಗಳು ಮಾತ್ರವಿದ್ದವು.
  • ಉತ್ತರಗಳ ಹುಡುಕಬೇಕಿದೆ ಪ್ರಶ್ನೆಯಾದ ಗೋಡೆಯಾಚೆಗೆ
  • ಭೂತದ ಭೂತಗಳನ್ನು ಉಚ್ಚಾಟಿಸಿ ಭವಿಷ್ಯದತ್ತ ಮುಖ ಮಾಡಿ ಹೊರಟ ಝಳಕು ಆ ಎಳೆಯ ಕಣ್ಣುಗಳಲ್ಲಿತ್ತು!
  • ನಾನು ಬದುಕುವೆ, ಬದುಕಬೇಕು. ಇದಕ್ಕಿಂತ ಹೆಚ್ಚಿನದು ಏನು ಆಗಬಲ್ಲದು. ನರಕದ ಪಾತಾಳಕ್ಕೆ ತಲುಪಿ ನಿಂತ ಮೇಲೆ ಇನ್ಯಾರ ಭಯ, ಇನ್ಯಾತರ ಭಯ.

3 comments:

ಮಹೇಶ ಎಸ್ ಎಲ್ said...

ನಾನು ಬದುಕುವೆ, ಬದುಕಬೇಕು. ಇದಕ್ಕಿಂತ ಹೆಚ್ಚಿನದು ಏನು ಆಗಬಲ್ಲದು. ನರಕದ ಪಾತಾಳಕ್ಕೆ ತಲುಪಿ ನಿಂತ ಮೇಲೆ ಇನ್ಯಾರ ಭಯ, ಇನ್ಯಾತರ ಭಯ. ಈ ಸಾಲುಗಳು ಇಷ್ಟವಾದವು. ನಿಮ್ಮ ನೇಮಿಚಂದ್ರರ ಅಧ್ಯಯನ ಅದ್ಭುತವಾಗಿದೆ
ನಾವೇಕೆ ಕಪ್ಪು ಬಣ್ಣವನ್ನು ಇಷ್ಟ್ಪಡುತ್ತೆವೆ ಚಿನ್ನಾಗಿದೆ

ಇನ್ನು ಬೆಂಗಳೂರು ಅಂದ್ರೇ. ಈ ಬರಹದ ಬಗ್ಗೆ ಹೇಳಬೇಕೆಂದ್ರೆ ಅದು ಅವರವರ ಭಾವಕ್ಕೆ ತಕ್ಕಂತೆ.ಊರು ಅಂದ ಮೇಲೆ ಭಿಕ್ಷುಕರು ,ಪುಟ್ ಪಾತ ವ್ಯಾಪಾರಿಗಳು , ಕಳ್ಳರು ಧೂಳು, ಡಿ.ಡಿ.ಟಿ ನೀರು
,ಶ್ರೀಮಂತರು ಬಾಯಿ ಚಟ , (ಅವರು ಮನುಷ್ಯರೇ ಅಂತ ನನ್ನ ಅನಿಸಿಕೆ)
ಇನ್ನು ಬಡವರು ಅವರ ಕಷ್ಟ ಅವರಿಗೆ ಆಮೇಲೆ ಇನ್ನೊಂದು ಮಾತು ಇವರು ಬೆಂಗಳೂರಲ್ಲಿ ಮಾತ್ರವಲ್ಲ ಮಂಗಳೂರಲ್ಲೂ ಇದಾರೆ ಮೈಸೂರಲ್ಲೂ ಇದಾರೆ.ನೀವು ನೋಡಿಲ್ಲ ಅನ್ಸುತ್ತೆ. ಇನ್ನೊಂದು ವಿಷಯ ಹನಿಗಳ ಬಗ್ಗೆ ನೀವು ಬರೆದದ್ದು ಸ್ವಲ್ಪ ಮಟ್ಟಿಗೆ ನಿಜವಿರಬಹುದು(ಒಂದು ವಿನಂತಿ ಅವನ್ನು ಕೇವಲ ಚುಟುಕು ಅಂತ ಸ್ವಿಕರಿಸಿ)ಆದರೂ ನೀವು ಎಲ್ಲ ಬರಹಗಳನ್ನು ಓದಿಲ್ಲ ಅನ್ಸುತ್ತೆ . ಕಡೆಯದಾಗಿ ನಿಮ್ಮ ಬರವಣಿಗೆಯ ಶೈಲಿ ಸುಂದರವಾಗಿದೆ. ಒಮ್ಮೆ ಪೂರ್ಣಚಂದ್ರ ತೇಜಸ್ವಿ ಯವರ ಬರಹಗಳನ್ನು ಓದಿ ನೋಡಿ ನಿಮಗೆ ರುಚಿಸಬಹುದು
ನನ್ನ ಮಾತುಗಳಿಗೆ ಉತ್ತರಿಸುತ್ತಿರೆಂದು ಧನ್ಯವಾದಗಳೊಂದಿಗೆ

ಮಹೇಶ ಎಸ್ ಎಲ್ said...
This comment has been removed by the author.
Anonymous said...

ತೇಜಸ್ವಿಯವರ ಪರಿಸರದ ಕತೆ, ತಬರನ ಕತೆ, ಕ್ರಿಷ್ಣೆಗೌಡರ ಆನೆ, ಕಿರಿಗೂರಿನ ಗಯ್ಯಾಳಿಯರು ಮುಂತಾದವು ಸರಳವಾಗಿವೆ ನೀವು ಓದಬಹುದು ಆಮೇಲೆ ಜುಗಾರಿ ಕ್ರಾಸ ಕಷ್ಟ ಅನ್ನಿಸಲಿಕ್ಕಿಲ್ಲ ಆಮೇಲೆ ನೀವು ಹೇಳಿದ್ದನ್ನು ಜಾರಿಗೆ ತರಲು ಪ್ರಯತ್ನ ನಡೆದಿದೆ

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...