January 24, 2008

ಸದಾಕಾಲ ನೆನಪಿನಲ್ಲಿರುವವರು...

ಯಾಕೋ ಗೊತ್ತಿಲ್ಲ... ಕೆಲವರು ನನಗೆ ಪ್ರತಿನಿತ್ಯ ನೆನಪಾಗುತ್ತಾರೆ. ಅವರಲ್ಲಿ ಪ್ರತೀ ನಿತ್ಯ ಮಾತನಾಡಬೇಕು, ಅವರ ಮಾತುಗಳನ್ನು ಕೇಳಬೇಕು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಆದರ್ಶವಾದಿಯಾಗಬೇಕು ಎಂದು ಅನ್ನಿಸುತ್ತೆ. ನನಗೆ ಎಲ್ಲೆಂದರಲ್ಲಿ ಸ್ನೇಹಿತರು, ಮಾರ್ಗದರ್ಶಕರು... ಸಿಗುತ್ತಾರೆ. ಅದರೆ ಬಹುಕಾಲ (ಈಗಲೂ) ಹಚ್ಚಹಸಿರಾಗಿ ನನ್ನ ಮನಪಟಲದಲ್ಲಿ ಇರುವವರು - ನನ್ನ ಶಿಕ್ಷಕಿ ರತಿ ಮೇಡಂ, ಲೇಖಕಿ ನೇಮಿಚಂದ್ರ, ನನ್ನ ಸೀನಿಯರ್ ಶ್ರಿದೇವಿ, ನಟಿ ತಾರಾ, ನಿರೂಪಕಿ ಅಪರ್ಣಾ, ಡಾಕ್ಟರ್ ಬೀನಾ, ಪೂರ್ಣಿ, ಪಕದ್ಮನೆಯ ಯಶೋಧಕ್ಕ.

ಇವರನ್ನೆಲ್ಲಾ ನನ್ನ ಜೊತೆಯಲ್ಲೇ ಇರಿಸಬೇಕೆಂದು ಬಯಸುತ್ತೇವೆ. ಅವರ ಜೊತೆ ಕಳೆದಂತಹ ಅಮುಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಅವರಿಗೆಲ್ಲಾ ಅದೆಷ್ಟು ಬಾರಿ ಎಸ್ ಎಮ್ ಎಸ್ ಕಳುಹಿಸಿ ಉಪದ್ರ ಮಾಡಿದೆನೋ!!.

ಅದ್ರೂ ಅವರ ಜೊತೆ ಮಾತನಾಡಿದಾಗೆಲ್ಲಾ ಒಂದು ರೀತಿಯ ಖುಷಿಯಾಗುತ್ತೆ. ಮೆಸೇಜ್ಗೆ ಮರುತ್ತರ ಬಂದ್ರೆ ವ್ಹಾರೆವ್ಹಾ ಗ್ರೇಟ್ ಎಂಬ ಉದ್ಗಾರ ಬರುತ್ತೆ.

2 comments:

Supreeth.K.S said...

ಅಷ್ಟಲ್ಲದೆ ಹೇಳಿದ್ದಾರೆಯೇ, ನಮ್ಮ ಸಂಗದಂತೆಯೇ ನಾವಾಗುತ್ತೇವೆ ಎಂದು.
ನಮಗಿಂತ ಹೆಚ್ಚು ತಿಳಿದವರ, ವಿವೇಕ ಉಳ್ಳವರ ಅಥವಾ ಪ್ರಜ್ಞೆಯ ಸ್ಥರದಲ್ಲಿ ಮೇಲಿರುವವರ ಸಂಗದಲ್ಲಿರುವಾಗ ನಮ್ಮ ಪ್ರಯತ್ನವಿಲ್ಲದೆಯೇ ಮನಸ್ಸು ಅಥವಾ ನಮ್ಮ ಪ್ರಜ್ಞೆ ಆ ಮಟ್ಟಕ್ಕೆ ಏರಿಬಿಟ್ಟಿರುತ್ತದೆ. ಮನಸ್ಸಿಗೆ ಎಂಥದ್ದೋ ನೆಮ್ಮದಿ, ಗ್ರೇಟ್ ಎನ್ನುವಂತಹ ಫೀಲಿಂಗ್, ಅವರಿಂದ ದೂರಾದ ತಕ್ಷಣ ಮತ್ತೆ ‘ನಮ್ಮತನ’ಕ್ಕೆ ನಾವು ಹಿಂತಿರುಗಿ ಬಿಟ್ಟಿರುತ್ತೇವೆ.

Anveshi said...

ವೀ...
ನೀವು ಎಸ್ಎಂಎಸ್ ಮಾಡಿದ ಉಪದ್ರಗಳೆಲ್ಲವನ್ನೂ ಒಂದು ಬುಟ್ಟಿಯಲ್ಲಿ ಹಾಕಿಟ್ಟು ಕಾಪಾಡಿಕೊಳ್ಳಿ. ಅವು ಕೂಡ ಒಳ್ಳೆಯ ನೆನಪುಗಳಾಗುತ್ತವೆ.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...