June 10, 2008

ಮಗಳಿಗಾಗಿ ಪಿತ್ತಜನಕಾಂಗವನ್ನೇ ದಾನ ಮಾಡಿದ ಅಮ್ಮ... ನಿನಗೆ ನೂರಾರೂ ವಂದನೆಗಳು

ಅಮ್ಮ ನೀನೇ ನನ್ನುಸಿರು, ನನ್ನ ಸರ್ವಸ್ವ. ನಿನ್ನಂಥ ಅಮ್ಮನ ಪಡೆಯಲು ನಾನೆಷ್ಟು ಪುಣ್ಯ ಮಾಡಿದ್ದೇನೆ ಎಂದು ನಾವು ಅದೆಷ್ಟೋ ಬಾರಿ ಹೇಳಿದ್ದೇವೆ. ಅಮ್ಮನನ್ನು ನೆನೆದಾಗೆಲ್ಲಾ ಭಾವುಕರಾಗಿದ್ದೇವೆ. ಅಮ್ಮನ ಪ್ರೀತಿ ಕಣ್ಣ ಮುಂದೆ ಬಂದಾಗ ನಮಗೆ ಅರಿವಿಲ್ಲದಂತೆಯೇ ಕಣ್ಣೀರು ಹಾಕಿದ್ದೇವೆ. ಅಮ್ಮನ ಪ್ರೀತಿಯೇ ಅಂಥಾಹುದು. ಕೀಟಲೆ ಮಾಡುವಾಗೆಲ್ಲಾ ನಿನ್ನಂಥ ಮಗಳು ನನಗ್ಯಾಕೆ ಹುಟ್ಟಿದಳೋ ಎಂದು ಬೈಯುವ ಅಮ್ಮ ತನ್ನ ಮಗುವಿಗೆ ಚಿಕ್ಕ ತೊಂದರೆ ಆದರೂ ಮನಸ್ಸಿನೊಳಗೇ ಕಣ್ಣೀರು ಹಾಕುವಳು. ಮಗು ತೊಂದರೆ ಅನುಭವಿಸುವ ಬದಲು ಆ ಪರಿಸ್ಥಿತಿ ತನಗೇ ಬರಬಾರದಿತ್ತೇನೋ ಎಂದು ಹಲುಬುವವಳು.

ಮಹಾರಾಷ್ಟ್ರದ ಒಂದು ಅಮ್ಮನ ಸಾಹಸ ಹೀಗಿದೆ: ಮಹಾರಾಷ್ಟ್ರದ ಶ್ವೇತಾ ಗೋರ್ ತನಗೊಬ್ಬಳು ಮಗಳು ಹುಟ್ಟುತ್ತಾಳೆಂದು ತಿಳಿದು ಹರ್ಷಗೊಂಡು, ತನ್ನನ್ನು ಪರಿಪೂರ್ಣವಾಗಿ ಮಗುವಿನ ಸೇವೆಗಾಗಿ ಮೀಸಲಿಡಬೇಕೆಂದು ಬಯಸಿ ತನ್ನ ಉದ್ಯೋಗವನ್ನೇ ತ್ಯಜಿಸಿದಳು. ತನ್ನೆಲ್ಲಾ ಪ್ರೀತಿಯನ್ನು ಮಗುವಿಗಾಗಿ ಧಾರೆ ಏರೆದಳು. ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಶ್ವೇತಾ ಕನಸ್ಸಿನಲ್ಲೂ ಊಹಿಸಿರಲಿಲ್ಲ... ಮುಂದೊಂದು ದಿನ ತನ್ನ ಮಗಳು ಪ್ರಾಚಿಗಾಗಿ ತಾನು ಬಹು ದೊಡ್ಡ ಸಾಹಸ ಮಾಡಬೇಕಾಗಿ ಬರಬಹುದೆಂದು!!

ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಮಗುವಿಗೆ ಅಲಾಜೈಲ್ ಸಿಂಡ್ರೊಮ್ ಮತ್ತು ಕ್ರೊನಿಕ್ ಲಿವರ್ ಎಂಬ ಹೆಸರಿನ ಖಾಯಿಲೆಗಳು ಜೊತೆ ಜೊತೆಯಾಗಿ ಬಂದವು. ಇದರ ಪರಿಣಾಮ ಮಗು ಹಗಲು ರಾತ್ರಿಯೆನ್ನದೇ ತುರಿಕೆಯಲ್ಲೇ ಜೀವನ ಕಳೆಯಬೇಕಾಯಿತು. ಅಷ್ಟೇ ಅಲ್ಲ ಪಿತ್ತ ಜನಕಾಂಗವು ಕ್ಷೀಣಿಸುತ್ತಾ ಹೋಗ ತೊಡಗಿತು.

ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.

ಮಗಳಿಗಾಗಿ ಏನೂ ಬೇಕಾದರೂ ಮಾಡಲು ಸಿದ್ದಳಿದ್ದ ಅಮ್ಮ ಶ್ವೇತಾ ಇಂದು ಹುಷಾರಾಗಿದ್ದಾರೆ. ಅವರ ಪ್ರಯತ್ನಗಳು ನಿರಾಶದಾಯಕವಾಗಲಿಲ್ಲ. ಪ್ರಾಚಿಗೆ ಮೊದಲಿನ ತುರಿತವಿಲ್ಲ. ಹಸಿವಿನ ತೊಂದರೆಯಿಲ್ಲ. ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತಾಳೆ. ಹೆತ್ತವರಿಬ್ಬರೂ ತಮ್ಮ ಮಗಳ ಆರೋಗ್ಯದಾಯಕ ನಾಳೆಗಳಿಗೆ ಸಾಕ್ಷಿಯಾಗಲಿದ್ದಾರೆ.




7 comments:

ತೇಜಸ್ವಿನಿ ಹೆಗಡೆ said...

ವೀಣಾ ಅವರೆ,

ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ತುಂಬಾ ಇಷ್ಟವಾಯಿತು ಲೇಖನ. ನಿಜ ತಾಯಿಯಾದವಳು ಮಗುವನ್ನು ಬಾಳಿಸಲು ಏನು ಬೇಕಾದರೂ ಮಾಡ ಬಲ್ಲಳು. ಅದಕ್ಕೇ ತಾನೆ ಶಂಕರಾಚಾರ್ಯರು ಹೇಳಿದ್ದು.."ಕುಪುತ್ರೋ ಜಾಯೇsತತ್ಕ್ವಚಿದಪಿ ಕುಮಾsತಾ ನ ಭವತಿ" ಎಂದು. ಅವರ ಜೀವವು ಸುಖದಾಯಕವಾಗಲೆಂದು ಮನಃಪೂರ್ವಕವಾಗಿ ಹಾರೈಸುವೆ.

ಏಕಾಂತ said...

ನಿಮ್ಮ ಮನಸ್ಸಿನ ಮಾತು ಮುದ ನೀಡಿತು. ನಿಮ್ಮ ಬರಹಗಳಲ್ಲಿ ಕಾಳಜಿಯಿದೆ. ವಿಷಯ ವಿಸ್ತಾರವಾಗಿದೆ. ಓದಿ ಖುಷಿಯಾಯಿತು. ಬೈಸಿಕಲ್ ತೀಫ್ ನನ್ನ ಮೆಚ್ಚಿನ ಚಿತ್ರ. ಓದಿ ಅಚ್ಚರಿಯಾಯ್ತು.

...Laxmikanth...

Suresh Kumar said...

Great Blogs. Just went through all of them together. Interview with Vinadari, Biscyle thief, Abt person committing suicide, Abt Bangalore.

My definition of bangalore goes like this "Life is in the fast lane with slow moving traffic".

Biscycle thief had been redone recently in tamil as Polladavan (starring Dhanush). Here the biscyle was replaced with a motor bike(Honda, i presume) and the bike is whisked away by drug peddlers and the heros search for the bike. No where near the original, but had its own moments.

Excuse me for not writing in Kannada

veena said...

ತೇಜಸ್ವಿನಿ ಅವರೇ ನನ್ನ ಬ್ಲಾಗ್ ಗೆ ಸ್ವಾಗತ. ನಿಮ್ಮಂಥವರ ಹಾರೈಕೆ ಆ ತಾಯಿಗೆ ಲಭಿಸಲಿ.

ಏಕಾಂತ ಮತ್ತು ಸುರೇಶ್ ನೀವೂ ಬೈಸಿಕಲ್ ಥೀಫ್ ಸಿನಿಮಾವನ್ನು ನೋಡಿದ್ದೀರಾ ಅಂತ ಆಯ್ತು.

ಮನಸ್ವಿ said...

ನಿಮ್ಮ ಬ್ಲಾಗಿಗೆ ತಡವಾಗಿ ಬೇಟಿ ನೀಡುತ್ತಿದ್ದೇನೆ... ಇಂದು ನಿಮ್ಮ ಬ್ಲಾಗ್ ಗೆ ದಾರಿ ಸಿಕ್ಕಿತು. ನಿಮ್ಮ ಲೇಖನಗಳು ಚನ್ನಾಗಿದೆ

ಈ ಲೇಖನವನ್ನು ಓದಿ ಮನಸ್ಸು ತುಂಬಿ ಬಂತು.. "ಅದಕ್ಕೆ ಅಲ್ಲವೇ ತಾಯಿಯನ್ನು ದೇವರು ಅಂತ ಹೇಳುವುದು.. ತಾಯಿ ಹೃಧಯ ತನ್ನ ಮಗುವಿಗಾಗಿ ಸದಾ ಮಿಡಿಯುತ್ತಲೇ ಇರುತ್ತದೆ., ತಾಯಿ ಮತ್ತು ಮಗು ಇಬ್ಬರೂ ಸದಾ ಸುಖವಾಗಿರಲಿ ಎನ್ನುವುದು ನನ್ನ ಹಾರೈಕೆ .

Anonymous said...

ಈ ಲೇಖನವನ್ನು ಓದಿ ಮನಸ್ಸು ತುಂಬಿ ಬಂತು

Anonymous said...

Veena,

your message about mother is heart touching.I suggest please have a snap shot of your mother in the blog.Good message.

Regards,
Rakesh.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...