February 5, 2010

ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿ ಯಾದದ್ದು...

ಕೆಲವು ದಿನಗಳ ಹಿಂದೆ ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ಭೇಟಿಯಾಗಲು ಹೋಗುತ್ತೇವೆ. Appointment ಈಗಾಗಲೇ ತೆಗೆದು ಕೊಂಡಿದ್ದೇವೆ ಎಂದಾಗ ತಮಾಷೆ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದೆ. ಆದರೆ ನಿನ್ನೆ ಬೆಳಿಗ್ಗೆ ಹಠಾತ್ತ್ ಆಗಿ ಅನಿ ತಾನು ಇಂದು ಸ್ನೇಹ ಜೊತೆ ಸಿ ಎಂ ಅನ್ನು ಭೇಟಿ ಆಗಲು ಹೋಗುತ್ತೇನೆ ಎಂದಾಗ ಆವಕ್ಕಾದೆ!
ಆಫೀಸ್ ಕೆಲಸ ಮುಗಿಸಿ ಸಿ ಎಂ ಭೇಟಿ ವಿವರ ಕೇಳಲು ಹಾತೊರೆಯುತ್ತಿದ್ದ ನಾನು ಸಾಯಂಕಾಲ ರೂಮ್ ಗೆ ಹೋದಾಗ ಅನಿ ಟೀ ಕುಡಿಯುತ್ತಾ ಟಿವಿ ಮುಂದೆ ಕುಳಿತಿದ್ದಳು.

"ಒಳಗೆ ಬಾ" ಎಂದು ಕರೆದು ಅವಳಲ್ಲಿ "ಹೇಗಿತ್ತು ಅನುಭವ" ಎಂದು ಕೇಳಿದಾಗ, ಯಾವಗಲೂ ಬಿ ಜೆ ಪಿ ಯನ್ನು ಹೊಗಳುತ್ತಿದ್ದ ಸುಬ್ಬಿ, ಯುಡಿಯುರಪ್ಪರನ್ನ ಸರಿಯಾಗಿ ಬೈದಳು. ‘ಯಾಕಲೇ ಏನಾಯಿತು? ಎಂದು ಕೇಳಿದಾಗ, "ಸ್ವಲ್ಪ ಮಾನವೀಯತೆನೂ ಇಲ್ಲ ಅವರಿಗೆ... ಸಿ ಎಂ ಅಂತೆ ಸಿ ಎಂ... ಜನರನ್ನು ಹೇಗೆ ಮಾತನಾಡಿಸಬೇಕು, ಹೇಗೆ ವರ್ತಿಸಬೇಕು ಎಂದು ತಿಳಿಯಲ್ಲ ಅವರಿಗೆ. ಅವರಿಗಿಂತ ಅವರ ಸೆಕ್ರೆಟರಿ ಅವರನ್ನು ಸಿ ಎಂ ಮಾಡುತ್ತಿದ್ದರೆ ನಮ್ಮ ಕರ್ನಾಟಕ ಉದ್ದಾರವಾಗುತ್ತಿತ್ತೋ ಏನು... at least ಜನ ಸಮಾನ್ಯ ಮಾತನಾಡಿದ್ದ ಇಂಗ್ಲಿಷ್ ಅವರಿಗೆ ಅರ್ಥ ವಾಗಲ್ಲ...’ ಹೀಗೆ ಉಸಿರು ಬಿಡದೇ ಬೈಯುತ್ತಿದ್ದಳು.  (ಅವಳು ಅಲ್ಲಿ ಕಂಡಂತಹ ಪ್ರತಿಯೊಂದು ದ್ರಶ್ಯವನ್ನು ವಿವರಿಸ ಹೊರಟರೆ ಮಿನಿ ಧಾರವಾಹಿ ಆಗಿ ಹೋಗುತ್ತೆ...ಅವರೇನೂ ಸಿ ಎಂ ಅವರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿಲ್ಲ... ತಮ್ಮ ಸಮಸ್ಯೆಯ ಕೆಲವು ಪದಗಳನ್ನು ಇಂಗ್ಲಿಷ್ ನಲ್ಲಿ ಬಳಸಬೇಕಾಯಿತು)

"ಕರ್ನಾಟಕದವರಾಗಿ ಕನ್ನಡ ಮಾತನಾಡಿ ಎಂಬರ್ಥದಲ್ಲಿ ಅವರು ವರ್ತಿಸಿರಬಹುದು’ ಎಂದು ನಾನು ಸಮಜಾಯಿಸಿ ನೀಡಲು ಹೋದರೆ, "ಇಲ್ಲ... ಅಂಥನೇನಾಗಿರುತ್ತಿದ್ದರೆ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೆ. ನಿಮ್ಮ ಸಮಸ್ಯೆನಾ ಕನ್ನಡದಲ್ಲೇ ಹೇಳಿ... ಅಥವಾ ಕರ್ನಾಟಕದಲ್ಲಿ ಕನ್ನಡ ಮಾತನಾಡಿ’ ಎಂದು ಹೇಳಿದರೆ ನಾವು ಸಂತೋಷವಾಗಿ ಮಾತನಾಡುತ್ತಿದ್ದೇವು. ಅದರೆ ಅವರ ಮಾತಿನ ಶೈಲಿ ಚೆನ್ನಾಗಿರಲಿಲ್ಲ. ಅವರು ಪಕ್ಕದಲ್ಲಿದ್ದವರಲ್ಲಿ ಇಂಗ್ಲಿಷ್ನಲ್ಲಿದ್ದುದನ್ನು ಕನ್ನಡಕ್ಕೆ ಭಾಷಾಂತರಿಸಲು ಹೇಳಿದರು.’ "ಛೆ! ಸರಿಯಾಗಿ ವ್ಯವಹರಿಸಲು, ಗೌರವದಿಂದಲು, ಹೆಣ್ಣು ಮಕ್ಕಳನ್ನು ಅದೆಷ್ಟು ಕೇವಲವಾಗಿ ನೋಡುತ್ತಾರೆ ಗೊತ್ತಾ... ?’ "ಬಿಡು ನಾನು ಅಪ್ಪಂಗೆ ಹೇಳ್ತೆನೆ ಅವರಿಗೆ ಓಟು ಕೊಡಬೇಡಿ ಅಂತ. ಅವರಿಗೆ ಓಟು ಬೇಕಾದಾಗ ಜಾತಿ, ಮತ, ಭಾಷೆ, ಸ್ತ್ರೀ ಪುರುಷ ಎಲ್ಲರೂ ಒಂದೇ... ಆದರೆ ಸಹಾಯ ಕೋರಿ ಹೋದಾಗ ಅಲ್ಲಿದ್ದವರನ್ನು ಎಷ್ಟು ಕೇವಲವಾಗಿ ನೋಡುತ್ತಿದ್ದರು ಗೊತ್ತಾ? ಒಬ್ಬಾಕೆಗೆ ನಿಮ್ಮ ಪತಿ ಏನು ಸರ್ಕಾರಿ ಕೆಲಸದಲ್ಲಿದ್ದಾನ ಎಂದು ಕೇಳಿದ್ದರು. ಸರ್ಕಾರಿ ಕೆಲಸದಲ್ಲಿದ್ದರೆ ಮಾತ್ರವೇ ಅವರಿಗೆ ಸಹಾಯ ಮಾಡುತ್ತಾರಂತೆ! ಓಟು ಕೇಳಲು ಬರುವಾಗ ಮಾತ್ರ ಇವರಿಗೆ ಬರಿಯ ಸರ್ಕಾರಿ ಕೆಲಸದಲ್ಲಿದ್ದವರು ಓಟು ಕೋಡೋರೆನು?’ ಅನಿ ನಾನ್ ಸ್ಟಾಪ್ ಆಗಿ ಸಿ ಎಂನ ಗುಣಗಾನ ಮಾಡುತ್ತಿದ್ದಳು. ಸ್ನೇಹಳಂತೂ ಮಿರರ್ ಇಮೇಜ್ ಬಗ್ಗೆ ಹೇಳಿ ವ್ಯಂಗದೊಂದಿಗೆ ಹಾಸ್ಯ ಸೇರಿಸಿ ಮಾತು ಮರೆತಳು. ಅವಳಿಗೆ ಯುಡಿಯುರಪ್ಪರಿಂಗ ಕುಮಾರಸ್ವಾಮಿ/ ದೇವೆಗೌಡನೆ ಪರವಾಗಿಲ್ವೇನೊ ಅಂತ ಅನಿಸುತ್ತಿದೆ.

ಹೋದ ಕೆಲಸವಂತೂ ಆಗಲ್ಲ... ಅದ್ರೆ ನಮ್ಮ ರಾಜಕಾರಣಿಗಳು ಕ್ಯಾಮೆರಾ, ಮಾಧ್ಯಮಗಳ ಮುಂದೆ ಹೇಗೆ ವರ್ತಿಸುತ್ತಿದ್ದಾರೆ, ಕ್ಯಾಮೆರಾ/ಮಾಧ್ಯಮಗಳ ಹಿಂದೆ ಹೇಗೆ ವರ್ತಿಸುತ್ತಿದ್ದಾರೆ ಎಂದು ತಿಳಿಯಿತು. ಸುವರ್ಣ ಚಾನೆಲ್ನಲ್ಲಿ ಯುಡಿಯುರಪ್ಪ-ರಮ್ಯಾ ಸಂಭಾಷಣೆ ಕಂಡು ಗ್ರೇಟ್ ವ್ಯಕ್ತಿ ಎಂದು ತಿಳಿದ್ದಿದ್ದ ನನಗೆ ನಿಜ ವ್ಯಕ್ತಿತ್ವ ಕಂಡು ನಿಜಕ್ಕೂ ಬೇಸರವಾಯಿತು. ತಪ್ಪು ಮಾಡದವರು ಯಾರಿದ್ದಾರೆ?...
‘ಯಾಕೆ ವಿದ್ಯಾವಂತರನ್ನ, ಮಾನವೀಯತೆಯುಳ್ಳವರನ್ನ, ಸಮಾಜ ಸೇವಕರನ್ನ ನಾವು ಸಿ ಎಂ ಮಾಡಲ್ಲ?’ ಎನ್ನುವ ಆಕೆಯ ಪ್ರಶ್ನೆಗೆ ಉತ್ತರ ನಾನಿನ್ನೂ ನೀಡಿಲ್ಲ...
(ಒಬ್ಬರನ್ನ ಹೊಗಳಿ, ಮತ್ತೊಬ್ಬರನ್ನ ತೆಗಳುವ ಉದ್ದೇಶ ನನ್ನದ್ದಲ್ಲ)

7 comments:

Unknown said...

ಬರಹ ಚೆನ್ನಾಗಿದೆ!!!!!!!! ಆದರೆ ಸಂತೋಪಡಬೇಕೋ, ದುಃಖಪಡಬೇಕೋ ತಿಳಿಯದಾಗಿದೆ. ಚಿಂತನಾರ್ಹಲೇಖನ

Anonymous said...

ಇಂಗ್ಲೀಷ್ ಮಾತಾಡಲಿಲ್ಲ ಅಂತ ಅವರು ಸರಿಯಿಲ್ಲ ಅನ್ನುವುದು ಹಾಸ್ಯಾಸ್ಪದ. ಕನ್ನಡದಲ್ಲಿ ಮಾತಾಡಿ ಎಂದು ನಿಮ್ಮ್ಮ ಗೆಳತಿಯರಿಗೆ ಬೇಡಿಕೊಂಡು ಮಾತಾಡಿಸಿಕೊಳ್ಳಬೇಕಾ ಅವರು? ಅದನ್ನು ನಿಮ್ಮ ಗೆಳತಿಯರೇ ಮೊದಲು ಮಾಡಬಹುದಿತ್ತಲ್ವಾ? ಕರ್ನಾಟಕದ ಮುಖ್ಯಮಂತ್ರಿ ಹತ್ತಿರ ಹೋಗಿ ಇಂಗ್ಲೀಷು ತೋರಿಸಿಕೊಳ್ಳುವ ಜರೂರತ್ತು ಏನಿತ್ತು? ವಿದ್ಯಾವಂತರು ಅಂದ್ರೆ ಇಂಗ್ಲೀಷ್ ನಲ್ಲಿ ಮಾತಾಡುವವರು ಅಂತ ತಿಳ್ಕೊಂಡಿದ್ದಾರಾ ನಿಮ್ ಫ್ರೆಂಡ್ಸ್? ಮುಖ್ಯಮಂತ್ರಿಯಾದವರಿಗೆ ಸಾವಿರಾರು ತಲೆಬಿಸಿ ಇರುತ್ತದೆ. ಅಂತದ್ದರಲ್ಲಿ ಹೆಣ್ಣು ಮಕ್ಕಳು ಬಂದ್ರು ಅಂತ ಗೌರವ ಕೊಟ್ಟು ಅವರಿಗೆ ಉಪಚಾರ ಮಾಡುತ್ತಾ ಕೂರುವುದಕ್ಕಾಗುವುದಿಲ್ಲ. ಯಾವುದೋ ಟಿ.ವಿ ಸಂದರ್ಶನ ನೋಡಿ ಅವರು ಗ್ರೇಟ್ ಎಂದು ತಿಳಿದುಕೊಳ್ಳುವುದು, ತಮ್ಮ ಒಂದು ಚಿಕ್ಕ ಅನುಭವದಿಂದ ಅವರು ಹಾಗಿಲ್ಲ ಹೀಗಿಲ್ಲ ಸರಿಯಿಲ್ಲ ಓಟು ಕೊಡಬೇಡಿ ಅನ್ನುವುದು, ಇದೆಲ್ಲಾ ನಮ್ಮ ಜನರ ವಿವೇಚನಾ ಮಟ್ಟ ಹೇಗಿದೆ ಎಂದು ತಿಳಿಯುತ್ತದೆ. ನಿಮ್ಮ ಗೆಳತಿಯರಂತಹ ಪ್ರಜೆಗಳನ್ನು ಹೊಂದಿದ ನಾಡೇ ಧನ್ಯ ಬಿಡಿ.

-ಶಿವಾನಂದ

lokesh mosale said...

shiva shiva shivaananda ....hesige aagutillava ..? nivu devara samaana ....! devarige 3 erallavanthe ....!?

ಶೆಟ್ಟರು (Shettaru) said...

"at least ಜನ ಸಮಾನ್ಯ ಮಾತನಾಡಿದ್ದ ಇಂಗ್ಲಿಷ್ ಅವರಿಗೆ ಅರ್ಥ ವಾಗಲ್ಲ"-ಅವರೇನು ಬ್ರೀಟನ್ನಿನ ಪ್ರಧಾನಿಗಳೇ?

"ಅವರು ಪಕ್ಕದಲ್ಲಿದ್ದವರಲ್ಲಿ ಇಂಗ್ಲಿಷ್ನಲ್ಲಿದ್ದುದನ್ನು ಕನ್ನಡಕ್ಕೆ ಭಾಷಾಂತರಿಸಲು ಹೇಳಿದರು."- ತಪ್ಪೇನು?

"ಸರಿಯಾಗಿ ವ್ಯವಹರಿಸಲು, ಗೌರವದಿಂದಲು, ಹೆಣ್ಣು ಮಕ್ಕಳನ್ನು ಅದೆಷ್ಟು ಕೇವಲವಾಗಿ ನೋಡುತ್ತಾರೆ ಗೊತ್ತಾ"- ಇದಕ್ಕೆ ಸೂಕ್ತ ವಿವರಣೆ ಸಿಕ್ಕಿಲ್ಲ

ಆದರೂ ನಮ್ಮನ್ನಾಳುವವರಿಗೆ ಒಂದು ಸೂಕ್ತ ಶಿಕ್ಷಣವನ್ನು ನಿಗದಿಪಡಿಸಬೇಕು, ಇಲ್ಲವಾದಲ್ಲಿ ಅಮೇರಿಕದಂತವರು ನಮ್ಮೆಲ್ಲರಿಗೂ ಬಿ.ಟಿ. ಬದನೆ ತಿನಿಸಿಯಾರು

-ಶೆಟ್ಟರು

Anonymous said...

namma opinion annu shneitara matugalalli helodu kudu good writingsna ollaguttu alwa

Threeleo said...

ನೀವು ಇಷ್ಟೊಂದು ಚೆನ್ನಾಗಿ ಬ್ಲೊಗ್ ಬರಿತೀರಾ ಅನ್ನೊದೇ ತಿಳಿದಿರಲಿಲ್ಲ ನೋಡಿ. ನಿರೂಪಣೆ ಬಹಳಷ್ಟು ಸೊಗಸಾಗಿದೆ. ಆದರೆ ಯೆಡ್ಡಿಯವರು ಇಂಗ್ಲಿಷಿನ ವ್ಯಕ್ತಿಯೆ ಅಲ್ಲ. ಮೊನ್ನೆ ವಿಮಾನ ದುರಂತ ನಡೆದಾಗ ಅನ್ನಿಸುತ್ತೆ ಅವರು ಒಂದೆರಡು ಕಂಡೊಲೆನ್ಸ್ ಮೆಸೆಜುಗಳನ್ನೂ ಓದಿ ಹೇಳಿದರು. ಅವರಿಗೆ ಇಂಗ್ಲಿಷಂತು ಬರುವುದೇ ಇಲ್ಲ ಎಂಬುದು ಖರೇ ಸತ್ಯ! ಪರವಾಗಿಲ್ಲಾ ತಾಯಿ ಕ್ಷಮಿಸಬಹುದು. ಆದರೇ ಶೋಬಕ್ಕನ ಪುನಃ ಮಂತ್ರಿ ಪಾಳಯದಲ್ಲಿ ತರ್ತಾ ಇದ್ದಾರಲ್ಲ..ಮತ್ತು ಆ ನರ್ಸ್ ರೇಣುಕಾಚಾರ್ಯನಿಗೆ ಹೆದರ್ತಾರಲ್ಲ..ಹಾಗೂ ನೆರೆಪೀಡಿತರಿಗೆ ಸಹಾಯ ಮಾಡಲು ಶಕ್ತರಾಗಿಲ್ಲವಲ್ಲ ಇಂತಹ ಮುಖ್ಯಮಂತ್ರಿ ನಮಗೆ ಬೇಕೆ? ಜಾಸ್ತಿ ವಿದ್ಯಾವಂತನಾಗಿರಬೇಕಂತ ಎನಿಲ್ಲ..ಆದರೆ ಜನಪರ ಮತ್ತು ಪ್ರಜೆಗಳ ಸುಖದುಃಖಗಳನ್ನು ಅರಿಯಲು ಪಿಎಚ್ ಡಿ ಬೇಕೆ ಹೇಳಿ? ಇಂತಹವರು ಇದ್ದು ನಮಗೇನು ಸುಖ? ರಾಜಕೀಯದಲ್ಲಿ ನಾವೆಲ್ಲ ಏಕ್ ದಿನ್ ಕಾ ಸುಲ್ತಾನ್ ಆದುದರಿಂದ ಯಾವಾಗ ತನಕ ಕ್ರಾಂತಿಯಾಗುದಿಲ್ಲವೋ ಎಲ್ಲಾ ರಾಜಕಾರಣಿಗಳು ತಮ್ಮ ಜೇಬನ್ನು ತುಂಬುತ್ತಲೇ ಇರುತ್ತಾರೆ.

ಅಂತೂ ಬಹಳಷ್ಟು ಸಂತೊಷದ ವಿಚಾರವೆಂದರೆ ನೀವು ಕನ್ನಡದಲ್ಲಿ ಬರೆಯುತ್ತಿರುವುದು. ಇದು ಶ್ಲಾಘನೀಯ. ಕರ್ನಾಟಕದ ಪ್ರಜೆಗಳು ಕನ್ನಡ ಪ್ರೀಯರಾಗಿರಬೇಕು. ನೊ ಡವ್ಟ್ ಒಂದೆರಡು ಇಂಗ್ಲಿಶ್ಪದಗಳು ಎಲ್ಲಾ ಭಾಷೆಗಳಲ್ಲಿ ನುಸುಳುತ್ತಾ ಇವೆ. ಹೊಟ್ಟೆಗೆ ಹಿಟ್ಟು ಕೊಡುವ ಬಾಷೆಯೆ ದೊಡ್ಡದು.ಆದರೂ,ಯಾರು ಮಾತೃಭಾಷೆ, ರಾಜ್ಯದಭಾಷೆ, ನಾವು ಕಲಿತ ಮಾಧ್ಯಮದ ಭಾಷೆ ಇವುಗಳನ್ನು ಇಂಗ್ಲಿಷಿನ ಹುಚ್ಚಿನಲ್ಲಿ ಮರೆಯುವುದಿಲ್ಲವೊ ಅವರು ನಿಜವಾದ ದೇಶಪ್ರೇಮಿಗಳು ಎನ್ನಬಹುದು. ನನಗಂತೂ ನೀವು ಕನ್ನಡದಲ್ಲಿ ಬ್ಲಾಗಿಸಿದ್ದು ಆಶ್ಚರ್ಯವನ್ನುಂಟುಮಾಡಿದೆ! ಚೆನ್ನಾಗಿ ಬರೆಯುತ್ತಿದ್ದಿರಾ! ದೇವರು ಆಶೀರ್ವದಿಸಲಿ.

ಜೆರಿ ರಸ್ಕಿನ್ಹಾ, ಮಂಗಳೂರು.

DVK said...

ನಿಮ್ಮ ಬ್ಲಾಗ್ ಚನ್ನಾಗಿದೆ. ನಿಮ್ಮ ಸ್ನೇಹಿತೆ ಸಿಎಂ ಭೇಟಿಯಾಗೋದಕ್ಕೆ ಹೋದ ಪ್ರಸಂಗ ಓದಿ ಕೆಲವೊಂದು ವಿಚಾರ ಹೇಳಬೇಕು ಅನಿಸಿತು. ಇತ್ತೀಚೆಗೆ ಈ ಜನರಿಗೆ ಇಂತವರೇ ಬೇಕು. ಸರಿಯಾದ ವಿದ್ಯಾವಂತನಿದ್ರೆ ಏನೂ ಆಗೋದಿಲ್ಲ ಅನ್ನುತ್ತಾರೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಬುದ್ಧಿಗೆ ಇಂದು ಬೆಲೆಯಿಲ್ಲ ಕಣ್ರಿ. ಹೀಗೇನಿದ್ರು ಚುನಾವಣೆಯಲ್ಲಿ ಉಡುಗೊರೆ, ಹಣ ಕೊಡುವವನಿಗೆ ಬೆಲೆ ಇರೋದು. ಇದಕ್ಕೆ ಒಂದು ಉದಾಹರಣೆ ನಾನು ಕಂಡಂತೆ ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ರಾಜೇಂದ್ರ ಸಣ್ಣಕ್ಕಿ ಎಂಬಾತ ಒಬ್ಬ ಹಿರಿಯ ಸದಸ್ಯ ಇದ್ದ. ಆತ ತುಂಬಾ ಕೆಳಮಟ್ಟದಿಂದ ಮೇಲೆ ಬಂದ ವ್ಯಕ್ತಿ. ಆತ ಜಿ.ಪಂ. ಸಭೆಗಳಲ್ಲಿ ಎದ್ದು ನಿಂತು ಮಾತನಾಡಲು ಶುರುವಿಟ್ಟನೆಂದರೇ ಅವತ್ತು ಯಾವನಾದರೂ ಓರ್ವ ಅಧಿಕಾರಿ ಮನೆಗೆ ಹೋಗಲೇಬೇಕು. ಅಷ್ಟೊಂದು ಕಳಕಳಿ ಹಾಗೂ ಜನಪರ ಕಾಳಜಿಯ ಆ ವ್ಯಕ್ತಿಯನ್ನು ಅಧಿಕಾರಿಗಳು ಇವ ಮತ್ತೋರ್ವ ಸಂತೋಷ ಹಗ್ಡೆ ಕಣ್ರಪ್ಪಾ ಅಂತಾ ಆಡಿಕೊಳ್ಳುತ್ತಿದ್ದರು.
ಆದರೆ ಆ ವ್ಯಕ್ತಿ ಈ ಚುನಾವಣೆಯಲ್ಲಿ ಮಕಾಡೆ ಮಲಗಬೇಕಾಯಿತು. ಇದಕ್ಕೆ ಕಾರಣ ಆತನ ಎದುರಾಳಿ ಬಿಜೆಪಿ ಅಭ್ಯರ್ಥಿ ಹಣದ ಹೊಳೆಯನ್ನೇ ಹರಿಸಿದ್ದ. ಅಲ್ಲದೇ ಎಷ್ಟೋ ಅಧಿಕಾರಿಗಳೇ ಆತನನ್ನು ಕೆಡವಲು ಈ ಅಭ್ಯರ್ಥಿಗೆ ಹಣ ನಿಡಿದ್ದರಂತೆ. ಹೇಗಿದೆ ನೋಡಿ ನಮ್ಮ ಇಂದಿನ ಪರಿಸ್ಥಿತಿ. ಹೋಗಲಿ ಜನರ ಸಮಸ್ಯೆಗಳಿಗೆ ಹೋರಾಡುವ ವ್ಯಕ್ತಿಯನ್ನೇ ಆತನ ಕ್ಷೇತ್ರದ ಜನ ಕೊನೆಯಲ್ಲಿ ಮರೆತು ಬಿಟ್ಟರು. ಇದೇ ಕಣ್ರಿ ಇವತ್ತಿನ ವ್ಯವಸ್ಥೆಯ

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...