February 16, 2010

ಯಾವ ಊರು ಚೆಂದ?

ನಮ್ಮ ದುಂಡಿರಾಜ್ ಅವರು ಬರೆದ ನಮ್ಮೂರು ಚೆಂದನೋ ನಿಮ್ಮೂರು ಚೆಂದನೋ? ಕವನವನ್ನ ಇತ್ತೀಜೆಗೆ ಪ್ರಜಾವಾಣಿಯಲ್ಲಿ ಓದಿದೆ. ದುಂಡಿರಾಜ್ ಅವರ ಕವನ/ಹನಿಗವನಗಳನ್ನು ಓದುವಾಗ ಅದೆನೋ ಖುಷಿ... ತುಂಬಾ ಸೊಗಸಾಗಿ ಬರೆಯುವ ಅವರು ಓದುಗರಲ್ಲಿ ಮುಗುಳು ನಗೆ ಮುಡಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಅವರದೊಂದು ಗೀತೆ ಹೀಗಿದೆ:
(ಧಾಟಿ: ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು)
ಒಂದಿರುಳು ಫೋನಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಮಂಗ್ಳೂರೋ, ನಿಮ್ಮುರು ಬೆಂಗ್ಳೂರೋ
ಚೆಂದ ನಿನಗಾವುದೆಂದು

ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ
ಎಂದೆನ್ನ ಕೇಳಬೇಕೆ?
ಬೆಂಗ್ಳೂರಿನಲ್ಲೀಗ ವಿಪರೀತ ಚಳಿ ಉಂಟು
ವಿಸ್ತರಿಸಿ ಹೇಳಬೇಕೆ?
ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ
ಫೋನಲ್ಲಿ ಚರ್ಚೆ ಏಕೆ?
ರಜೆ ಹಾಕಿ ಬಂದು ಬಿಡಿ ಎಂದಳಾಕೆ?

ಬೆಂಗ್ಳೂರು ರಸ್ತೆಯಲಿ ಬಸ್ಸುಗಳು ಕಾರುಗಳು
ಲಾರಿಗಳು ಸಾಲು ಸಾಲು ಬಸ್ಸು ಲಾರಿಗೆ ಬಡಿದು
ಮುಸುಡಿ ಸೀಟಿಗೆ ಹೊಡೆದು
ಉದುರಿ ಹೋಗುವುದು ಹಲ್ಲು

ಶಿರಾಡಿ ಘಾಟಿಯಲಿ ಎಷ್ಟೊಂದು ಹೊಂಡಗಳು
ಗಬ್ಬೆದ್ದು ಹೋಗಿ ರೋಡು
ಉದ್ದಕ್ಕೂ ಕುಲುಕಾಟ ಬೆನ್ನು ಮೂಳೆಗೆ ಏಟು
ಯಾರಿಗೂ ಬೇಡ ಪಾಡು

ಬೆಂಗ್ಳೂರಿನಲ್ಲೀಗ ವಿಪರೀತ ಟ್ರಾಪಿಕ್ಕು
ಓಡಾಟ ದೊಡ್ಡ ಗೋಳು
ಬೆಂಗ್ಳೂರಿಗಿಂತಲೂ ಮಂಗ್ಳೂರೆ ಸುಖವೆಂದು
ಅನ್ನಿಸದೆ ಸತ್ಯ ಹೇಳು
ಮಂಗ್ಳೂರು ಚೆಂದವೋ, ಬೆಂಗ್ಳೂರು
ಚೆಂದವೋ ಸುಮ್ಮನೆ ವಾದವೇಕೆ?
ಸಾಕು ಬಿಡಿ, ಫೋನು ಇಡಿ ಎಂದಳಾಕೆ

2 comments:

Bhavitha said...

ha ha ha sakatthagide... mam

Threeleo said...

ತುಂಬಾ ಚೆನ್ನಾಗಿದೆ ವೀಣಾ ಮೇಡಂ. ಇತ್ತಿಚೆಗೆ ದುಂಡಿಯವರನ್ನು ಭೇಟಿಯಾಗುವಾ ಅವಕಾಶ ಕೂಡಾ ಸಿಕ್ಕಿತು. ನಿಮ್ಮ ಬ್ಲಾಗಿನಲ್ಲಿ ಇದನ್ನೊದಿ ಮಸಸ್ಸಿಗೆ ತೃಪ್ತಿ ಆಯ್ತು. ಧನ್ಯವಾದಗಳು. ಜೆರಿ ರಸ್ಕಿನ್ಹಾ ಆಂಜೆಲೊರ್.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...