ಮಂಗಳೂರಿನ ಸಂಸ್ಕ್ರತಿ, ಸಂಪ್ರದಾಯ, ವ್ಯವಹಾರ, ವಿದ್ಯಾಬ್ಯಾಸ ಪದ್ದತಿ, ಕಡಲ ಕಿನಾರೆ ಹೀಗೆ ಎಲ್ಲವನ್ನೂ ಇಷ್ಟ ಪಡುವವರು ಮಂಗಳೂರಿನ ಕನ್ನಡವನ್ನು ಮಾತ್ರ ವ್ಯಂಗ್ಯವಾಗಿ ಬಳಸುತ್ತಾರೆ. ಮಂಗಳೂರು ಕನ್ನಡ ಕೇಳೋದಿಕ್ಕೆ ಇಷ್ಟವಾಗುತ್ತೆ ಅಂಥ ಅಂದವರೇ ಮತ್ತೆ ಹಾಸ್ಯಮಾಡಿ ನಗುತ್ತಾರೆ.ಯಾಕೆ? ಇತ್ತೀಜಿನ ಸೂಪರ್ ಹಿಟ್ ಸಿನಿಮಾ ಮುಂಗಾರು ಮಳೆಯಿಂದ ಹಿಡಿದು ಹೆಚ್ಚಿನ ಸಿನಿಮಾಗಳು ಮಂಗಳೂರು ಕನ್ನಡವನ್ನು ಹಾಸ್ಯಸ್ಪದವಾಗಿ ಬಳಸಿದ್ದಾರೆ ಮುಂದೆಯೂ ಬಳಸಬಹುದು. ‘ಎಂಥದು ಮಾರಯ್ರೆ’ಎಂಬುವುದು ಮಂಗಳೂರಿನವರು ಬಳಸದಿದ್ದರೂ ಸಿನಿಮಾ ಮಹಿಮೆಯಿಂದ ಎಲ್ಲರೂ ಹೇಳುವುದು ಮಂಗಳೂರಿನವರದು ಮಾರಯ್ರೆ ಭಾಷೆಯೆಂದು.
ಮಂಗಳೂರಿನಲ್ಲಿ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಪ್ರಚಲಿತವಾಗಿದೆ. ಅದಕ್ಕಾಗಿಯೇ ಮಾತು ಮಧ್ಯ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಮಿಶ್ರಣವಿರುತ್ತದೆ. ನಿಮಗೆ ಗೊತ್ತಿರಲಿ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಮಾತನಾಡುವವರಿಗೆ ಕನ್ನಡ ಮಾತನಾಡಲು ಅದೆಷ್ಟು ಕಷ್ಟವಾಗುತ್ತೆ ಎಂದು. ಆ ಭಾಷೆಗಳ ಉಚ್ಚಾರಗಳಿಗೂ ಕನ್ನಡ ಪದಗಳ ಉಚ್ಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ದರೂ ನಾವೆಲ್ಲರೂ ಕನ್ನಡದ ಅಭಿಮಾನದಿಂದ ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದೇವೆ.ಉಳಿದವರಂತೆ ಮಕ್ಕೊಳ್ತಿನೀ ಅನ್ನಲ್ಲ ಅಪ್ಪಟ್ಟ ಕನ್ನಡದಲ್ಲಿ ಮಲಗುತ್ತಿನಿ ಅನ್ನುತ್ತೀವಿ.ಮಂಗಳೂರಿಗೆ ಹೋಗಿ ಯಾರದರೂ ಮಾರಯ್ರೆ ಎಂಬ ಪದವನ್ನು ಬಳಸುತ್ತಾರಾ ಕೇಳಿ ಆಮೇಲೆ ಹೇಳಿ. ಸುಮ್ ಸುಮ್ನೆ ಮಂಗಳೂರಿನವರ ಕನ್ನಡವನ್ನು ಕೇವಲ ಹಾಸ್ಯಕ್ಕಾಗಿ ಬಳಸಬೇಡಿ. ನೀವು ಹೀಗೆನೇ ಮಂಗಳೂರಿನವರ ಕನ್ನಡಕ್ಕೆ ತಮಾಷೆ ಮಾಡಿದರೆ ಮಂಗಳೂರಿನವರು ಕನ್ನಡ ಮಾತನಾಡುವುದನ್ನೇ ಬಿಟ್ಟು ಬಿಟ್ಟಾರು. ಯಾಕೆಂದರೆ ನಮಗೆ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳೂ ತಿಳಿದಿವೆ.
ನಾವು ಕನ್ನಡಕ್ಕೆ ಕೊಡುವ ಅಭಿಮಾನವನ್ನು ದುರುಪಯೋಗ ಮಾಡಬೇಡಿ.ಉಳಿದಂತೆ ನಿಮಗೆ ಬಿಟ್ಟದ್ದು...

15 comments:
ನಮಸ್ಕಾರ ವೀಣಾ.
ಬ್ಲಾಗ್ ಲೋಕಕ್ಕೆ ಸ್ವಾಗತ.
ಮಂಗಳೂರುಕನ್ನಡದ ಬಗ್ಗೆ ನಿಮ್ಮ ಅಭಿಮಾನ ತುಂಬಾ ತಟ್ಟಿತು. ಹಾಸ್ಯಾಸ್ಪದವಾಗಿ ನಮ್ಮೂರ ಕನ್ನಡವನ್ನು ಬಳಸುವ ಇತರ ಕಡೆಗಳವರಿಗೆ ಕನ್ನಡದೊಂದಿಗಿನ ನಮ್ಮ ಸಂಬಂಧ ಅರ್ಥವಾಗುವುದಿಲ್ಲ ಬಿಡಿ.
ಆದರೆ ನಿಮ್ಮ "ನೀವು ಹೀಗೆನೇ ಮಂಗಳೂರಿನವರ ಕನ್ನಡಕ್ಕೆ ತಮಾಷೆ ಮಾಡಿದರೆ ಮಂಗಳೂರಿನವರು ಕನ್ನಡ ಮಾತನಾಡುವುದನ್ನೇ ಬಿಟ್ಟು ಬಿಟ್ಟಾರು" ಈ ಮಾತು ಮಾತ್ರ ನೋವು ತರಿಸಿತು. ನಮ್ಮನಮ್ಮ ಮಾತೃಭಾಷೆಯ ಜೊತೆಗೆ ಶತಮಾನಗಳಿಂದ ಕನ್ನಡವನ್ನೂ ಇನ್ನೊಂದು ತಾಯಿಯಾಗಿಯೇ ನಾವು ಕಂಡಿದ್ದೇವೆ; ಆ ತಾಯಿಯ ಪ್ರೀತಿಯನ್ನು ಪಡೆದಿದ್ದೇವೆ ಕೂಡ. ಅಜ್ಞರ ಮಾತಿಗೆ ಮರುಳಾಗಿ ತಾಯಿಯನ್ನು ದೂರ ಮಾಡಲು ಸಾಧ್ಯವೇ? ಆ ಬಂಧನ ಕಳಚಲು ಸಾಧ್ಯವೇ ಇಲ್ಲ.
ಏನಂತೀರಿ?
ನಿಮ್ಮ ಮಾತು ಒಪ್ಪುವಂತಹುದೇ.ಕನ್ನಡಾಂಬೆಗೆ ನಮ್ಮ ಪ್ರೀತಿ ಇದ್ದೇ ಇದೆ.ಆದರೆ ಅದೇ ನಮ್ಮ ತಾಯಿಗೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಜನರಿಗೆ ಯಾಕೆ ಅರ್ಥವಾಗುವುದಿಲ್ಲ?
ಮಂಗಳೂರಿಗರಷ್ಟು ಶುದ್ಧ ಕನ್ನಡ ಮಾತನಾಡುವವರು ಬೇರೆ ಎಲ್ಲಿಯಾದರೂ ಸಿಗಲು ಸಾಧ್ಯವೇ? ಆದರೆ ಇತ್ತೀಚೆಗೆ ಟಿವಿ ಕಾರ್ಯಕ್ರಮಗಳಿಂದಾಗಿ, ನಮ್ಮವರು ಕೂಡ ಹಸಿವಿನಿಂದಾಗಿ ಆಗಾಗ್ಗೆ ಅಕ್ಷರಗಳನ್ನು ನುಂಗಿ, ರಾಜಧಾನಿ ಕನ್ನಡ ಮಾತಾಡುತ್ತಾರೆ ಎನ್ನುವುದು ನೋವಿನ ಸಂಗತಿ.
ಅಕ್ಷರ ನುಂಗಿ ಮಾತನಾಡುವವರನ್ನು ಹೀಯಾಳಿಸಿದರೆ ಅವರಿಗೆಷ್ಟು ನೋವಾಗುತ್ತದೆ ಎಂಬುದನ್ನು (ಅಪ)ಹಾಸ್ಯ ಮಾಡುವವರೂ ಅರ್ಥೈಸಿಕೊಳ್ಳಬೇಕಿತ್ತು.
ನಿಮ್ಮ ಈ ಲೇಖನ ನೋಡಿ ಹೇಳಲೇಬೇಕೆಂದೆನಿಸಿತು. ಹೇಳಿಬಿಟ್ಟೆ.
ವೀಣಾ,
ಯಾರೋ ನಿಮ್ಮನ್ನು ಕೆಣಕಿದಂತಿದೆ 'ಮಂಗಳೂರು ಕನ್ನಡ'ದ ಬಗ್ಗೆ.
ಉಡುಪಿ ಮತ್ತು ಮಂಗಳೂರಿನಲ್ಲಿ ಮಾತನಾಡುವ ಕನ್ನಡ ನಿಧಾನ ಮತ್ತು ಯಾವುದೇ ಅಕ್ಷರ ಅಥವಾ ಶಬ್ದವನ್ನು ನುಂಗದೇ ಮಾತನಾಡುವ ಶೈಲಿಯದ್ದು. ಕರ್ನಾಟಕದ ಬೇರೆ ಪ್ರಾಂತ್ಯದವರಿಗೆ ಅದು ಸ್ವಲ್ಪ ತಮಾಶೆಯಾಗಿ ಅನಿಸಬಹುದು. ಈ ತಮಾಶೆ 'ಹಾಸ್ಯ'ದ ಪರಿಧಿ ದಾಟಿ ಅಪಹಾಸ್ಯದೆಡೆ ಹೋಗಬಾರದು.
ಮಂಗಳೂರಿನ ಬಗ್ಗೆ ಮತ್ತು ಮಂಗಳೂರಿನ ಕನ್ನಡದ ಬಗ್ಗೆ ನೀವು ಎಷ್ಟೇ ಹೆಮ್ಮೆಪಟ್ಟುಕೊಂಡರೂ ಒಂದು ಮಾತಂತೂ ನಿಜ -ಕನ್ನಡದ ಬಗ್ಗೆ ಮತ್ತು ಕರ್ನಾಟಕದ ಬಗ್ಗೆ ಕನಿಷ್ಟ ಅಭಿಮಾನವಿರುವುದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಬುದ್ಧಿವಂತರಿಗೆ.
ಕೇವಲ ಕನ್ನಡ ಪದಗಳ ಉಚ್ಚಾರದ ಬಗ್ಗೆ ಕೇವಲ 'ಹಾಸ್ಯ'ವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಬರೆದ ಲೇಖನವೊಂದು ಗಂಭೀರ ಚರ್ಚೆಗೊಳಪಟ್ಟದ್ದನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು.
http://www.sampada.net/blog/rajeshnaik111/30/07/2006/2042
ಅಂತೆಯೇ ಕರಾವಳಿ ಕನ್ನಡಿಗರೆಂಬ ಬುದ್ಧಿವಂತರ ಕನ್ನಡ ಹೆಮ್ಮೆ ಬಗ್ಗೆ ಈ ಕೆಳಗಿನ ಕೊಂಡಿಯನ್ನು ಸಮಯವಿದ್ದಾಗ ನೋಡುವಿರಂತೆ.
http://www.sampada.net/blog/rajeshnaik111/05/10/2006/2318
ಹೀಗೇ ಬರ್ತಾ ಇರಿ ಯಾತ್ರಿಕಾ, ಅನ್ವೇಷಿ, ರಾಜೇಶ್...
tuMbaa sogasaagi maataaDiddeeri.manassina nEra maatugaLu haagE iri.
ನಿಮ್ದು ಮಂಗಳೂರು ಕನ್ನಡ ಅಲ್ಲ.ಘಟ್ಟದ ಕೆಳಗಿನ ಕನ್ನಡ. ಹಾಗಂತ ನಾವು ಶಿವಮೊಗ್ಗದವರು ಕರೆಯೊದು ಮರಾಯ್ರೆ.
ಯಾಕ್ರೀ ರೇಗಿಸ್ತಿರಿ..ಮಾವಿನಸರ
ಸಚ್ಚಿಂದ್ರರವರೇ ಬರ್ತಾ ಇರಿ..
ಎಂತದು ಮಾರಾಯ್ತಿ ಇದು. ಬ್ಲಾಗ್ ಯಾವಾಗ್ ಬಂದ್ರಿ ಮಾರಾಯ್ರೇ?
ಎಂತದು ಮಾರಾಯ್ತಿ ಇದು. ಬ್ಲಾಗ್ ಯಾವಾಗ್ ಬಂದ್ರಿ ಮಾರಾಯ್ರೇ?
enta maraayti neenu...nanna maretebittadda?neenu heege maduvudu sariya?
mangaloora matu manasinyagidu
ಬೆಂಗಳೂರು ಕನ್ನಡ, ಮೈಸೂರು ಕನ್ನಡ, ಧಾರವಾಡ ಕನ್ನಡ, ಮಂಗಳೂರು ಕನ್ನಡ, ದಾವಣಗೆರೆ ಕನ್ನಡ, ಬಿಜಾಪುರ ಕನ್ನಡ, ಶಿರಸಿ-ಸಿದ್ಧಾಪುರದ ಕನ್ನಡ, ಸಾಗರದ ಕನ್ನಡ ಹೀಗೆ ಕನ್ನಡದಲ್ಲಿರುವ ವೈವಿಧ್ಯತೆಯೇ ಈ ಭಾಷೆಗೆ ಒಂದು ಸೊಬಗನ್ನೊದಗಿಸಿದೆ.
ನಾವು ಈಗ ಬಳಕೆಯಲ್ಲಿರುವ ಅತ್ಯಂತ ವ್ಯವಸ್ಥಿತ ಭಾಷೆಯನ್ನು ಮಾತನಾಡುವ ಕನ್ನಡಿಗರಾಗಿರುವುದಕ್ಕೆ ಹೆಮ್ಮೆ ಪಡಬೇಕೇ ಹೊರತು ವ್ಯಥೆ ಪಡುವುದು ವ್ಯರ್ಥ. ಆದರೆ ನಿಮ್ಮ ನೇರ ನುಡಿ ಇಷ್ಟವಾಯಿತು.
-ಮೇಲೆ ಹೇಳಿದಂತೆ-
ಹರೀಶ ಹೇಳಿದ್ದು ತುಂಬ ಸರಿಯಾಗಿದೆ. ನಾವು ಈಗ ಬಳಕೆಯಲ್ಲಿರುವ ಅತ್ಯಂತ ವ್ಯವಸ್ಥಿತ ಭಾಷೆಯನ್ನು ಮಾತನಾಡುವ ಕನ್ನಡಿಗರಾಗಿರುವುದಕ್ಕೆ ಹೆಮ್ಮೆ ಪಡಬೇಕೇ ಹೊರತು ವ್ಯಥೆ ಪಡುವುದು ವ್ಯರ್ಥ.
ಹಾಗೆಯೇ ಮಂಗಳೂರು ಜನ ನಮ್ಮ/ಬೇರೆಯವರ ಉಪಕಾರಕ್ಕೆ ಕನ್ನಡ ಮಾತನಾಡೋದು ಬೇಕಾಗಿಲ್ಲ.
ನನ್ನದು ಒಂದು ಸಲಹೆ. ಬಹುಶಃ ನಿಮಗೆ ಖುಶಿ ಕೊಟ್ಟೀತು -ತಾವು ಯಾಕೆ ತುಳು/ಕೊಂಕಣಿ ಯಲ್ಲೇ ಬ್ಲಾಗ್ ಮಾಡಬಾರದು.
ಮಂಗಳೂರಿನ ಕಡಲಿನ ಕಿನಾರೆಯಂತೆ ಇಲ್ಲಿನ ಕನ್ನಡ ಸುಂದರ.
ಅದು ಕೂಡಾ ಕಡಲ ಕಿನಾರೆಯಂತೆ ಹಾಳಾಗುವತ್ತ ಸಾಗುತ್ತಿದೆ.
ಒಲವಿನಿಂದ
ಬಾನಾಡಿ
ನಿಮ್ಮ ಅನುಭವ ನನಗೂ ಆಗಿದೆ. ನಾವು ’ಮಾರಾಯ್ರೆ’ ಎ೦ದು ಮ೦ಗಳೂರು ಕನ್ನಡದಲ್ಲಿ ಮಾತನಾಡದಿದ್ದರೂ, ಎಲ್ಲರೂ ಅದು ಮ೦ಗಳೂರು ಕನ್ನಡ ಎ೦ದೇ ತಿಳಿದಿದ್ದಾರೆ. ಆದರೂ ಬೇಸರಿಸಬೇಕಾಗಿಲ್ಲ. ಅಚ್ಚ ಕನ್ನಡ ಮಾತನಾಡುವವರು ನಾವು ಎ೦ದು ಹೆಮ್ಮೆ ಪಟ್ಟುಕೊಳ್ಳೋಣ.
Post a Comment