July 19, 2007

ಬೆಂಗಳೂರು ಅಂದ್ರೆ...?

ಬೆಂಗಳೂರು ಅಂದ್ರೆ ಸುಂದರ ನಗರಿ ಎಂದುಕೊಂಡಿದ್ದೆ. ಆದ್ರೆ ಈಗ ಗೊತ್ತಾಗುತ್ತಿದೆ. ಬೆಂಗಳೂರು ಎಂಥಹ ಮಯಾ ನಗರಿಯೆಂದು. ಬೆಂಗಳೂರು ಹೇಗಿದೆ ಎಂದು ಯಾರಾದ್ರೂ ನನ್ನಲ್ಲಿ ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. ಬೆಂಗಳೂರು ಧೂಳು ಮಯ ಪ್ರದೇಶ, ಇಲ್ಲಿನ ಹವಾಗುಣ ದಿನೇ ದಿನೇ ಹದಗೆಡುತ್ತದೆ. ಮನೆಯಿಂದ ಹೊರಗೆ ಬಂದರೆ ಕಾಣುವುದು ಬಿಕ್ಷುಕರ ಹಾವಳಿ. ಕೈ ಕಾಲು ಎಲ್ಲಾ ಸರಿಯಾಗಿದ್ದರೂ ಅದೆಷ್ಟು ಮಂದಿ ಭಿಕ್ಷೆ ಬೇಡುತ್ತಿರುತ್ತಾರೆ! ಸ್ವಲ್ಪ ರಶ್ ಆದರೂ ಸರಿ ಇಲ್ಲಿನ ಜನ ಕದಿಯೋದಿಕ್ಕೆ ಏನು ಸಿಗುತ್ತೆ ಅಂತ ಕಾಯುತ್ತಿರುತ್ತಾರೆ. ನಮ್ಮ ವಸ್ತುಗಳ ಬಗ್ಗೆ ಸ್ವಲ್ಪ ಕೇರ್ ಲೆಸ್ ಆದರೂ ಕಶ್ಟನೇ...

ಇನ್ನು ಇಲ್ಲಿನ ಆಹಾರದ ಬಗ್ಗೆ ಹೇಳೋದಾದರೆ... ಹೇಗೆ ವರ್ಣಿಸುವುದು ಎಂಬುವುದೇ ತಿಳಿಯುತ್ತಿಲ್ಲ. ನಾವು ಕಾಲಿಗೆ ಹಾಗುವ ಚಪ್ಪಲಿಯಿಂದ ಹಿಡಿದು ಹೊಟ್ಟೆಗೆ ಹಾಕುವ ಆಹಾರವೆಲ್ಲವೂ ಬೀದಿಬದಿಯಲ್ಲಿಯೇ ಸಿಗುತ್ತದೆ. ಬೀದಿಯಲ್ಲಿ ಸಿಗುವ ಆಹಾರವನ್ನು ಶ್ರೀಮಂತರು ಬಡವರೆನ್ನದೇ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ರಸ್ತೆ ಪಕ್ಕದಲ್ಲಿ ಅದೂ ಧೂಳುಮಯ ಪ್ರದೇಶದಲ್ಲಿ ಪಾನಿ ಪುರಿ ತಿನ್ನುವ ಜನರನ್ನು ನೋಡುವಾಗ ಅಯ್ಯೋ ಅನ್ನಿಸುತ್ತೆ. ಧೂಳುಮಯ ಆಹಾರಕ್ಕಿಂತ ಹೋಟೆಲ್ ಗೆ ಹೋಗಿ ತಿನ್ನೋಣವೆಂದು ಹೋದರೆ ... ಆ ಮಸಾಲೆ ದೋಸೆಗೆ ಅದೆಷ್ಟು ಏಣ್ಣೆ ಹಾಕುತ್ತಾರೋ.. ದೋಸೆಯಿಂದ ಏಣ್ಣೆ ಇಳಿದು ಹೋಗುತ್ತದೆ. ದಿನವೊಂದಕ್ಕೆ ಒಂದು ಮಸಾಲೆ ದೋಸೆ ತಿಂದರೂ ಆರೋಗ್ಯ ಕೆಡುವುದು ಗ್ಯಾರಂಟಿ.

ಇಲ್ಲಿನ ನೀರಿನ ಬಗ್ಗೆ ಹೇಳಬೇಕೆ?... ನೀರು ಯಾವಾಗ ನೋಡಿದರೂ ಡಿ.ಡಿ.ಟಿ ಪೌಡರ್ ಸ್ಮೆಲ್ ಬರುತ್ತೆ. ಕುಡಿಯಲು ಹೋದರೆ ಕೇರಳದಲ್ಲಿ ಪ್ರಚಲಿತವಾಗಿರುವ ಎಂಡೋಸಲ್ಪಾನ್ ನೆನಪಾಗುತ್ತದೆ. ದಾಹವಾದರೆ ಬಿಸ್ಲರಿನೇ ಲೇಸು. ಬಿಸ್ಲರಿಗೆ ಕೆಮಿಕಲ್ ಹಾಕಿದ್ರೂ ವಾಸನೆ ಅಂತೂ ಇಲ್ಲ.

ಇನ್ನು ಮಹಾನಗರಿಯಲ್ಲಿ ವಾಹನಗಳ ಅರಚಾಟ, ಟ್ರಾಪಿಕ್ ಎಲ್ಲಾ ಮಾಮುಲಿ ಬಿಡಿ. ಅದರ ಬಗ್ಗೆ ಪ್ರಶ್ನೆನೇ ಇಲ್ಲ.

ಮನಸ್ಸಿಗೆ ಬೇಸರವಾಯಿತಾದರೆ ಏಕಾಂತ ಕಳೆಯಲು ಸೂಕ್ತವಾದ ಯಾವ ಸ್ಥಳನೂ ಇಲ್ಲ. ಎಲ್ಲಿ ಹೋದರೂ ಜನಸಂದಣಿ ತಪ್ಪಿದ್ದಿಲ್ಲ. ... ಹೇಳ ಹೋದರೆ ತುಂಬಾ ಇದೆ. ಅದನ್ನ ಓದುತ್ತಾ ಹೋದರೆ ನಿಮಗೂ ಬೇಸರವಾದೀತು. ಅದಿಕ್ಕೆ ಇಲ್ಲೇ ಮುಗಿಸುತ್ತೇನೆ.

3 comments:

ಮನೋರಮಾ.ಬಿ.ಎನ್ said...

haeee..adke helodu..bangalore ege bendu hoda kaloooru..elru ondalla ondu reetili kollovru..idara madye kayooru yaruu???
oy..adke bngalore sahavasa beda annodu..helida matu yelli kelteera?

Chevar said...

nimma bagge tumba dukha anista ide. Yes neevu helirodu thirty percent right. But you cant talk about the foods you are using here by just staying here in 3-4 months. If you come to mangalore i can show youlot of things food stalls. But you can say that there is Janata deluxe. Other than this the what i can say is the taste of street food is wonderful. you cant get the food here as mangalore. the culture changes from place to place. I have visited kerala and Karnataka. You cant blame them just for the sake oof writing. You didnt had any good experience here?

You are working here and blaming the culture what we have. Thats why we are far behind. As a wellwisher am saying dont take it too much seriously. Life afterall for a short period. Enjoy it how it comes.

MD said...

ಇನ್ನೂ ಬೆಂಗಳೂರಿನಲ್ಲೇ ಇದೀರಾ?
ಬೇರೆ ಪಟ್ಟಗಳ ಕಡೆಗೆ ಏಕೆ ಹೋಗಲಿಲ್ಲ.

ಎಂದಾದರೂ ಚೆನ್ನೈ ಹೋಗಿದ್ದೀರ?
ಹೈದರಾಬಾದ? ಪುಣೆ? ಮುಂಬೈ? ದಿಲ್ಲಿ? ನೊಯಡಾ? ಗುರಗೌಂ?

ನೀವು ಬೆಂಗಳೂರಿನ ಬಗ್ಗೆ ಕಳಕಳಿಯಿಟ್ಟುಕೊಂಡು ಬರೆದಿದ್ದೀರ ಅಂದುಕೊಂಡರೂ ಯಾಕೋ ಮನಸ್ಸು ಈ ಮಾತಿಗೆ ಒಪ್ಪುತ್ತಿಲ್ಲ.

ಇನ್ನೂ ಬೆಂಗಳೂರಿನಲ್ಲೇ ಇದೀರಾ? ದಯವಿಟ್ಟು....

ನಿಮ್ಮಲ್ಲಿ ಒಂದು ನನ್ನ ವಿನಂತಿ; ನಾಲ್ಕು ಒಳ್ಳೆ ಮಾತು ಬರೆಯಲು ಆಗದಿದ್ದರೂ ಪುಟಗಟ್ಟಲೇ ಬೆಂಗಳೂರಿನ ಬಗ್ಗೆ ಇಂತಹ ವಿಮರ್ಶೆ ಬೇಡ.
ಇನ್ನೂ ಬೆಂಗಳೂರಿನಲ್ಲೇ ಇದೀರಾ? ??

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...